• Home
  • »
  • News
  • »
  • sports
  • »
  • IND vs SL 2nd T20: ಇಂದು ಭಾರತ-ಶ್ರೀಲಂಕಾ ಪಂದ್ಯ; ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11, ಪಿಚ್​ ರಿಪೋರ್ಟ್​

IND vs SL 2nd T20: ಇಂದು ಭಾರತ-ಶ್ರೀಲಂಕಾ ಪಂದ್ಯ; ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11, ಪಿಚ್​ ರಿಪೋರ್ಟ್​

IND vs SL T20

IND vs SL T20

IND vs SL 2nd T20: ಭಾರತ ಮತ್ತು ಶ್ರೀಲಂಕಾ (IND vs SL) ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯ ನಾಳೆ ನಡೆಯಲಿದೆ. ಈ ಪಂದ್ಯವು ನಾಳೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿದ್ದು, ಕೆಲ ಬದಲಾವಣೆಯಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.

  • Share this:

ಭಾರತ ಮತ್ತು ಶ್ರೀಲಂಕಾ (IND vs SL) ಮೂರು ಪಂದ್ಯಗಳ ಸರಣಿಯ 2ನೇ ಟಿ20 ಪಂದ್ಯ ಇಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ (Maharashtra Cricket Association Stadium) ನಡೆಯಲಿದೆ. ಭಾರತ ತಂಡವು ಈಗಾಗಲೇ ಮೊದಲ ಟಿ20 ಪಂದ್ಯದಲ್ಲಿ ಗೆಲ್ಲುವ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹೀಗಾಗಿ ನಾಳಿನ ಪಂದ್ಯವನ್ನು ಗೆದ್ದು ಸರಣಿ ಗೆಲ್ಲಲು ಟೀಂ ಇಂಡಿಯಾ ಸಜ್ಜಾಗಿದ್ದರೆ, ಇತ್ತ ಶ್ರೀಲಂಕಾ ತಂಡ ಇಂದಿನ ಪಂದ್ಯ ಗೆದ್ದು ಸರಣಿಯಲ್ಲಿ ಜೀವಂತವಾಗಿ ಉಳಿಯಲು ಹವಣಿಸುತ್ತಿದೆ.


ಪಂದ್ಯದ ವಿವರ: 


ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ತಂಡವು 3 ಪಂದ್ಯಗಳ ಟಿ20 ಪಂದ್ಯ ಮತ್ತು 3 ಏಕದಿನ ಪಂದ್ಯದ ಸರಣಿಯನ್ನು ಆಡಲಿದೆ. ಈ ಟಿ20 ಸರಣಿಯ 2ನೇ ಪಂದ್ಯವು ಇಂದು ನಡೆಯಲಿದೆ. ಈ ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಪಂದ್ಯವು ಸಂಜೆ 6:30ಕ್ಕೆ ಟಾಸ್​ ಮತ್ತು 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯದ ನೇರಪ್ರಸಾರವನ್ನು ಸ್ಟಾರ್​ ಸ್ಪೋರ್ಟ್ಸ್​ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ನಲ್ಲಿ ಲೈವ್​ ಸ್ಟ್ರೀಮಿಂಗ್​ ವೀಕ್ಷಿಸಬಹುದು. ಉಚಿತವಾಗಿ ಡಿಡಿ ಸ್ಪೋರ್ಟ್ಸ್​ನಲ್ಲಿ ವೀಕ್ಷಿಸಬಹದು.


ಪಿಚ್ ರಿಪೋರ್ಟ್​:


ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಶ್ರೀಲಂಕಾ ಮತ್ತು ಭಾರತ ಎರಡನೇ ಟಿ20 ಪಂದ್ಯ ಇಂದು ನಡೆಯಲಿದೆ. ಇಲ್ಲಿ ಉಭಯ ತಂಡಗಳು 2 ಪಂದ್ಯಗಳನ್ನು ಆಡಿದ್ದು, ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿವೆ. ಈ ಮೈದಾನವು 50 ಕ್ಕೂ ಹೆಚ್ಚು T20 ಪಂದ್ಯಗಳನ್ನು ಆಯೋಜಿಸಿದೆ ಮತ್ತು ಇಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 162 ರನ್ ಆಗಿದೆ. ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಮತ್ತು ಎರಡನೇ ಬ್ಯಾಟ್​ ಮಾಡಿದ ತಂಡ ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರವನ್ನು ವಹಿಸದಿರಬಹುದು.


ಇದನ್ನೂ ಓದಿ: AB de Villiers: ನಾನು ಚೇಂಜ್ ರೂಂನಲ್ಲಿ ಅವರೊಂದಿಗೆ ಕುಳಿತು ಬಿಯರ್ ಕುಡಿಯುತ್ತಿದ್ದೆ, ಅಚ್ಚರಿಯ ಹೇಳಿಕೆ ನೀಡಿದ RCB ಮಾಜಿ ಪ್ಲೇಯರ್​


ಟೀಂ ಇಂಡಿಯಾದಲ್ಲಿ ಬದಲಾವಣೆ ಸಾಧ್ಯತೆ:


ಹೌದು, ಮೊದಲು ಟಿ20 ಪಂದ್ಯವನ್ನು ಗೆದ್ದಿರುವ ಭಾರತ ತಂಡ ಇಂದಿನ ಪಂದ್ಯದಲ್ಲಿ ಪ್ರಮುಖ 2 ಬದಲಾವಣೆ ಮಾಡಬಹುದು. ಅದರಲ್ಲಿಯೂ ಮುಖ್ಯವಾಗಿ ಸಂಜು ಸ್ಯಾಮ್ಸನ್​ ಹಿಂದಿನ ಪಂದ್ಯದಲ್ಲಿ ಕೇವಲ 5 ರನ್​ಗೆ ಔಟ್​ ಆದ ಕಾರಣ ಇಂದಿನ ಪಂದ್ಯಕ್ಕೆ ಅವರ ಬದಲಾಗಿ ರಾಹುಲ್ ತ್ರಿಪಾಠಿಗೆ ಅವಕಾಶ ನೀಡಬಹುದು. ಹೀಗಾದ್ದಲ್ಲಿ ಅವರಿಗೆ ಇದು ಪಾದಾರ್ಪಣಾ ಪಂದ್ಯವಾಗಿರಲಿದೆ. ಇನ್ನು, ಎರಡನೇಯದಾಗಿ  ಜ್ವರದಿಂದ ಮೊದಲ ಪಂದ್ಯದಿಂದ ದೂರವಿದ್ದ ಅರ್ಷದೀಪ್​ ಸಿಂಗ್​ ಮತ್ತೆ ತಂಡಕ್ಕೆ ಸೇರಿಕೊಳ್ಳಲಿದ್ದು,  ಹರ್ಷಲ್ ಪಟೇಲ್ ಬದಲಿಗೆ ಅರ್ಷದೀಪ್ ಸಿಂಗ್​ ಆಯ್ಕೆ ಮಾಡುವ ಸಾಧ್ಯತೆ ಇದೆ.


IND vs SL ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ,ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್.


ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್​ 11: ಪಥುಮ್‌ ನಿಸಾಂಕ, ಕುಸಾಲ್‌ ಮೆಂಡಿಸ್‌ (ವಿ.ಕೀ), ಧನಂಜಯ್‌ ಡಿ ಸಿಲ್ವಾ, ಚರಿತಾ ಅಸಲಂಕ, ಭನುಕ ರಾಜಪಕ್ಷ, ದಸೂನ್‌ ಶಾನಕ (ನಾಯಕ), ವಾನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಕಸೂನ್‌ ರಜಿತ, ದಿಲ್ಷಾನ್ ಮದುಶಂಕ.

Published by:shrikrishna bhat
First published: