ಭಾರತ ಮತ್ತು ಶ್ರೀಲಂಕಾ (IND vs SL) ತಂಡಗಳು ಇಂದು 2ನೇ T20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೆಣಸಾಡುತ್ತಿವೆ. 3 ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ (Maharashtra Cricket Association Stadium) ನಡೆಯುತ್ತಿದೆ. ಈಗಾಗಲೇ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿತು. ಲಂಕಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದೆ. ಈ ಮೂಲಕ ಭಾರತ ತಂಡಕ್ಕೆ 207 ರನ್ಗಳ ಟಾರ್ಗೆಟ್ ನೀಡಿದೆ.
ಭರ್ಜರಿ ಬ್ಯಾಟಿಂಗ್ ಮಾಡಿದ ಲಂಕಾ:
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದೆ. ಈ ಮೂಲಕ ಭಾರತ ತಂಡಕ್ಕೆ 207 ರನ್ಗಳ ಟಾರ್ಗೆಟ್ ನೀಡಿದೆ. ಶ್ರೀಲಂಕಾ ಪರ ಪಾತುಮ್ ನಿಸ್ಸಾಂಕ 33 ರನ್, ಕುಸಲ್ ಮೆಂಡಿಸ್ 312 ಎಸೆತದಲ್ಲಿ 4 ಸಿಕ್ಸ್ ಮತ್ತು 3 ಫೋರ್ ಮೂಲಕ 52 ರನ್, ಧನಂಜಯ ಡಿ ಸಿಲ್ವಾ 3 ರನ್, ಚರಿತ್ ಅಸಲಂಕಾ 37 ರನ್, ಭಾನುಕ ರಾಜಪಕ್ಸೆ 2 ರನ್, ದಸುನ್ ಶಾನಕ 22 ಎಸೆತದಲ್ಲಿ 6 ಸಿಕ್ಸ್ ಮತ್ತು 2 ಫೋರ್ ಮೂಲಕ 56 ರನ್ ಮತ್ತು ಚಮಿಕಾ ಕರುಣಾರತ್ನೆ 11 ರನ್ ಗಳಿಸಿದರು.
Innings Break!
3⃣ wickets for @umran_malik_01
2⃣ wickets for @akshar2026
Target for #TeamIndia: 207
Scorecard ▶️ https://t.co/Fs33WcZ9ag #INDvSL pic.twitter.com/O8IKZLHabc
— BCCI (@BCCI) January 5, 2023
ಇನ್ನು, ಟಾಸ್ ಗೆದ್ದು ಮೊದಲು ಬೌಲಿಂಗ್ ಆರಂಭಿಸಿದ ಭಾರತ ತಂಡದ ಬೌಲರ್ಗಳು ಇಂದು ದುಬಾರಿಯಾದರು. ಅದರಲ್ಲಿಯೂ ಕಳೆದ ಪಂದ್ಯದ ಹೀರೋ ಶಿವಂ ಮಾವಿ 4 ಓವರ್ಗೆ 53 ರನ್ ನೀಡಿದರೆ, ಅರ್ಷದೀಪ್ ಸಿಂಗ್ ಬರೋಬ್ಬರಿ 5 ನೋ ಬಾಲ್ ಸೆಸೆದು ಇನ್ನಷ್ಟು ದುಬಾರಿಯಾದರು. ಉಳಿದಂತೆ ಉಮ್ರಾನ್ ಮಲಿಕ್ 4 ಓವರ್ಗೆ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 2 ಮತ್ತು ಚಹಾಲ್ 1 ವಿಕೆಟ್ ಪಡೆದರು. ಆದರೆ ಇಂದಿನ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಲಂಕಾ ಆಟಗಾರರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Ranji Trophy 2023: 21 ಬೌಂಡರಿ, 12 ಸಿಕ್ಸರ್, ರಣಜಿ ಪಂದ್ಯದಲ್ಲಿ ಟಿ20 ಆಟವಾಡಿದ IPL ಆಟಗಾರ
ತ್ರಿಪಾಠಿಗೆ ಚೊಚ್ಚಲ ಪಂದ್ಯ:
ಗಾಯಾಳು ಸಂಜು ಸ್ಯಾಮ್ಸನ್ ಬದಲಿಗೆ ರಾಹುಲ್ ತ್ರಿಪಾಠಿ ಪಾದಾರ್ಪಣೆ ಮಾಡುವ ಅವಕಾಶ ಪಡೆದಿದ್ದಾರೆ. ಮೊಣಕಾಲಿನ ಗಾಯದಿಂದ ಸಂಜು ಹೊರಗುಳಿದಿದ್ದಾರೆ. ಈ ಮೂಲಕ ಅವರು ಟಿ20 ಅಂತರಾಷ್ಟ್ರೀಯ ಪಂದ್ಯಕ್ಕೆ ಎಂಟ್ರಿಕೊಟ್ಟಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ T20I ಸರಣಿಯಿಂದ ಹೊರಗುಳಿದಿದ್ದಾರೆ. ಸಂಜು ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದು, ಉಳಿದ ಎರಡು ಟಿ20 ಪಂದ್ಯಗಳಿಂದ ಹೊರಗುಳಿಯಬೇಕಾಗಿದೆ. ಆದರೆ ಮತ್ತೊಮ್ಮೆ ರುತುರಾಜ್ ಗಾಯಕ್ವಾಡ ಅವರಿಗೆ ಅವಕಾಶ ವಂಚಿತರಾಗಿದ್ದಾರೆ.
ಭಾರತ-ಶ್ರೀಲಂಕಾ ತಂಡ:
ಭಾರತ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ (ನಾಯಕ), ಶುಭ್ಮನ್ ಗಿಲ್,ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ,ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್.
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ದಸುನ್ ಶಾನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತಾ, ದಿಲ್ಶನ್ ಮಧುಶಂಕ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ