• Home
  • »
  • News
  • »
  • sports
  • »
  • IND vs SL 2nd ODI: ನಾಳೆ ಭಾರತ-ಶ್ರೀಲಂಕಾ ಪಂದ್ಯ; ಪಿಚ್​ ವರದಿ, ನೇರಪ್ರಸಾರದ ವಿವರ 

IND vs SL 2nd ODI: ನಾಳೆ ಭಾರತ-ಶ್ರೀಲಂಕಾ ಪಂದ್ಯ; ಪಿಚ್​ ವರದಿ, ನೇರಪ್ರಸಾರದ ವಿವರ 

IND vs SL 2023

IND vs SL 2023

IND vs SL 2nd ODI: ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಜಯ ದಾಖಲಿಸಿತ್ತು. ಹೀಗಾಗಿ 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 1-0 ಮುನ್ನಡೆ ಸಾಧಿಸಿದೆ.

  • Share this:

ಭಾರತ ಮತ್ತು ಶ್ರೀಲಂಕಾ (IND vs SL) ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಬರೋಬ್ಬರಿ 67 ರನ್​ಗಳ ಭರ್ಜರಿ ಜಯ ದಾಖಲಿಸಿತ್ತು. ಅದರಲ್ಲಿಯೂ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಶತಕದ ಜೊತೆ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್​ ಅವರ ಅರ್ಧಶತಕದಿಂದ ತಂಡವು ಭರ್ಜರಿಯಾಗಿ ಗೆಲುವು ಸಾಧಿಸಿತು. ಹೀಗಾಗಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಮುಂಬರಲಿರುವ 2ನೇ ಏಕದಿನ ಪಂದ್ಯವು ನಾಳೆ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್  (Eden Gardens) ಕ್ರೀಡಾಂಗಣದಲ್ಲಿ ನಡೆಯಲಿದೆ. ಅಲ್ಲದೇ ನಾಳಿನ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ತವಕದಲ್ಲಿದ್ದರೆ, ಇತ್ತ ಶ್ರೀಲಂಕಾ ತಂಡಕ್ಕೆ ನಾಳಿನ ಪಂದ್ಯದಲ್ಲಿ ಗೆದ್ದರೆ ಮಾತ್ರ ಸರಣಿ ಜೀವಂತವಾಗಿ ಉಳಿಯಲಿದೆ.


ಪಂದ್ಯದ ವಿವರ:


ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವು ನಾಳೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಲಂಕಾ ವಿರುದ್ಧದ ಎಲ್ಲಾ ಮೂರು ODI ಪಂದ್ಯಗಳು ಮಧ್ಯಾಹ್ನ 1:30 ISTಗೆ ಪ್ರಾರಂಭವಾಗುತ್ತವೆ. ಏಕದಿನ ಪಂದ್ಯಗಳನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಇನ್ನು, ಪಂದ್ಯದ ಸಂಪೂರ್ಣ ಮಾಹಿತಿಗಾಗಿ News18 Kannada ವೆಬ್​ಸೈಟ್​ ಅನುಸರಿಸಿ.


ಪಿಚ್ ವರದಿ:


ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿನ ಮೇಲ್ಮೈ ಸಾಮಾನ್ಯವಾಗಿ ಚಿಕ್ಕದಾಗಿದ್ದು, ಬ್ಯಾಟರ್‌ಗಳ ಸ್ವರ್ಗವಾಗಿದೆ. ಇಬ್ಬನಿ ಅಂಶವನ್ನು ಪರಿಗಣಿಸಿ, ಟಾಸ್ ಗೆದ್ದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಬಹುದು. ಅದಾಗ್ಯೂ ನಾಳೆ ಬೃಹತ್​ ಮೊತ್ತದ ಪಂದ್ಯವನ್ನು ನೋಡಬಹುದಾಗಿದೆ. ಜೊತೆಗೆ ಹವಾಮಾನವೂ ಸಂಪೂರ್ಣವಾಗಿ ಸಹಕರಿಸಲಿದ್ದು, ಯಾವುದೇ ಮಳೆಯ ಮುನ್ಸೂಚನೆ ಇಲ್ಲವೆಂದು ಹವಾಮಾನ ಇಲಾಖೆ ತಿಳಿಸಿದೆ.


ಇದನ್ನೂ ಓದಿ: Prithvi Shaw: 49 ಬೌಂಡರಿ, 4 ಸಿಕ್ಸರ್, 400 ಜಸ್ಟ್ ಮಿಸ್! ವಿಶೇಷ ದಾಖಲೆ ಬರೆದ ಟೀಂ ಇಂಡಿಯಾ ಆಟಗಾರ


ಭಾರತ-ಲಂಕಾ ಹೆಡ್​ ಟು ಹೆಡ್​:


ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಆದರೆ ಉಭಯ ತಂಡಗಳ ಹೆಡ್​ ಟು ಹೆಡ್​ ನೋಡುವುದಾದರೆ, ಈವರೆಗೆ ಉಭಯ ತಂಡಗಳು ಒಟ್ಟು 163 ಪಂದ್ಯದಲ್ಲಿ ಮುಖಾಮುಖಿ ಆಗಿದೆ. ಇದರಲ್ಲಿ ಭಾರತ 94 ಪಂದ್ಯ ಗೆದ್ದರೆ, ಶ್ರೀಲಂಕಾ ತಂಡವು 57 ಪಂದ್ಯವನ್ನು ಗೆದ್ದಿಎ. ಉಳಿದಂತೆ 1 ಪಂದ್ಯ ಟೈ ನಲ್ಲಿ ಅಂತ್ಯವಾಗಿದೆ. ಇನ್ನು, ಭಾರತದಲ್ಲಿ ನಡೆದ ಪಂದ್ಯಗಳ ವಿವರ ನೋಡುವುದಾರೆ ಒಟ್ಟು 52 ಪಂದ್ಯದಲ್ಲಿ ಟೀಂ ಇಂಡಿಯಾ 37 ಮತ್ತು ಶ್ರೀಲಂಕಾ 12 ಪಂದ್ಯದಲ್ಲಿ ಜಯ ದಾಖಲಿಸಿದೆ. ಅಂಕಿಅಂಶಗಳ ಪ್ರಕಾರ ಭಾರತ ತಂಡವೇ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ.


IND vs SL ಸಂಭಾವ್ಯ ಪ್ಲೇಯಿಂಗ್​ XI:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ರೋಹಿತ್ ಶರ್ಮಾ (c), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (WK), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್


ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್​ 11: ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಾಕ್), ಧನಂಜಯ ಡಿ ಸಿಲ್ವ, ಚರಿತ್ ಅಸಲಂಕ, ದಸುನ್ ಶನಕ (ಸಿ), ವನಿಂದು ಹಸರಂಗ, ಚಾಮಿಕ ಕರುಣಾರತ್ನ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶಾನ್ ಮಧುಶಂಕ

Published by:shrikrishna bhat
First published: