ಭಾರತ ಮತ್ತು ಶ್ರೀಲಂಕಾ (IND vs SL) ನಡುವೆ ಎರಡನೇ ಏಕದಿನ ಪಂದ್ಯ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ (Eden Gardens) ನಡೆಯುತ್ತಿದೆ. ಟಾಸ್ ಗೆದ್ದ ಶ್ರೀಲಂಕಾ ನಾಯಕ ದಸುನ್ ಶನಕ (Dasun Shanaka) ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಅವರ ತೀರ್ಮಾನ ಭಾರತೀಯ ಬೌಲರ್ಗಳ ಎದುರು ಉಲ್ಟಾ ಆಗಿದೆ. ಹೌದು, ಶ್ರೀಲಂಕಾ ಮೊದಲು ಬ್ಯಾಟ್ ಮಾಡಿ ನಿಗದಿತ 39.4 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 215 ರನ್ ಗಳಿಸುವ ಮೂಲಕ ಟೀಂ ಇಂಡಿಯಾಗೆ 216 ರನ್ಗಳ ಟಾರ್ಗೆಟ್ ನೀಡಿದೆ. ಇಂದಿನ ಪಂದ್ಯದಲ್ಲಿ ಯುಜುವೇಂದ್ರ ಚಹಾಲ್ ಬದಲಿಗೆ ಕುಲದೀಪ್ ಯಾದವ್ಗೆ ಅವಕಾಶ ನೀಡಲಾಗಿತ್ತು. ಈ ಅವಕಾಶವನ್ನು ಯಾದವ್ ಸಂಪೂರ್ಣ ಬಳಸಿಕೊಂಡಿದ್ದಾರೆ.
ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ಲಂಕಾ:
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 39.4 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ಕುಸಲ್ ಮೆಂಡಿಸ್ 34 ರನ್, ಅವಿಷ್ಕ ಫೆರ್ನಾಂಡೋ 20 ರನ್, ಚರಿತ್ ಅಸಲಂಕಾ 15 ರನ್, ಧನಂಜಯ್ ಡಿ ಸಿಲ್ವಾ ಶೂನ್ಯ, ನುವಾನಿಡು ಫೆರ್ನಾಂಡೋ 50 ರನ್, ನಾಯಕ ದಸುನ್ ಶಾನಕ 2 ರನ್, ವನಿಂದು ಹಸರಂಗ 21 ರನ್, ಚಾಮಿಕ ಕರುಣಾರತ್ನೆ 17 ರನ್, ದುನಿತ್ ವೆಲಾಲಗೆ 32 ರನ್, ಕುಸನ್ ರಾಜಿತ ಕುಮಾರ 17 ರನ್ ಮತ್ತು ಕೊನೆಯಲ್ಲಿ ಲಹೀರು ಕುಮಾರಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
For his bowling figures of 3/30 in 5.4 overs, @mdsirajofficial is our Top Performer from the first innings.
A look at his bowling summary here 👇👇#INDvSL #TeamIndia pic.twitter.com/yLa0zEGwL6
— BCCI (@BCCI) January 12, 2023
ಇನ್ನು, ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಭಾರತ ತಂಡಕ್ಕೆ ಇಂದು ಸಿರಾಜ್ ಮತ್ತು ಕುಲ್ದೀಪ್ ಭಾರತದ ಪರ ಭರ್ಜರಿ ಬೌಲಿಂಗ್ ಮಾಡಿದರು. ಮೊಹಮ್ಮದ್ ಸಿರಾಜ್ 5.4 ಓವರ್ ಮಾಡಿ 30 ರನ್ ನೀಡಿ 3 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 10 ಓವರ್ ಮಾಡಿ 51 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಉಮ್ರಾನ್ ಮಲಿಕ್ 2 ವಿಕೆಟ್ ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದು ಮಿಂಚಿದರು.
ಈಡನ್ನಲ್ಲಿ ಭಾರತದ್ದೇ ಮೇಲುಗೈ:
ಭಾರತ ಈಡನ್ ಗಾರ್ಡನ್ನಲ್ಲಿ ಒಟ್ಟಾರೆ 23 ODI ಪಂದ್ಯಗಳನ್ನು ಆಡಿದೆ ಅಲ್ಲಿ ಅದು 12 ಗೆದ್ದಿದೆ ಮತ್ತು ಟೀಮ್ ಇಂಡಿಯಾ 8 ಪಂದ್ಯಗಳಲ್ಲಿ ಸೋತಿದೆ. ಪಂದ್ಯವು ಅನಿರ್ದಿಷ್ಟವಾಗಿದೆ. ಅದೇ ಸಮಯದಲ್ಲಿ, 2 ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಈ ಮೈದಾನದಲ್ಲಿ ಉಭಯ ತಂಡಗಳು 5 ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಭಾರತ 3 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ ಒಂದು ಗೆಲುವು ಸಾಧಿಸಿದೆ. ಒಂದು ಪಂದ್ಯ ಅನಿರ್ದಿಷ್ಟವಾಗಿದೆ.
ಇದನ್ನೂ ಓದಿ: ODI World Cup 2023: ತಾಲಿಬಾನ್ನಿಂದಾಗಿ ಆಸ್ಟ್ರೇಲಿಯಾ ಸರಣಿ ರದ್ದು, ವಿಶ್ವಕಪ್ಗೆ ಬರೋದು ಡೌಟ್! ಭಾರತಕ್ಕೂ ಬಿಗ್ ಶಾಕ್
IND vs SL ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, KL ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಕುಲ್ದೀಪ್ ಯಾದವ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ