ಟೀಂ ಇಂಡಿಯಾ ಇಂದಿನಿಂದ ತವರಿನಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಶ್ರೀಲಂಕಾ (IND vs SL) ವಿರುದ್ಧದ 3 ಪಂದ್ಯಗಳ T20 ಸರಣಿಯನ್ನುಆರಂಭಿಸಿದೆ. ಸರಣಿಯ ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಡಿದ ಭಾರತ ತಂಡವಯು ಲಂಕಾಗೆ 163 ರನ್ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡವು ನಿಗದಿತ 20 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಈ ಮೂಲಕ ಭಾರತ ತಂಡಕ್ಕೆ 2 ರನ್ ಗಳ ರೋಚಕ ಜಯ ದೊರಕಿತು. ಈ ಮೂಲಕ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಬ್ಯಾಟಿಂಗ್ನಲ್ಲಿ ಎಡವಿದ ಲಂಕನ್ನರು:
ಶ್ರೀಲಂಕಾ ತಂಡವು ನಿಗದಿತ 20 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 160 ರನ್ ಗಳಿಸುವ ಮೂಲಕ 2 ರನ್ ಗಳಿಂದ ಸೋಲನ್ನಪ್ಪಿತು. ಪಾತುಂ ನಿಸ್ಸಾಂಕ 1 ರನ್, ಕುಸಲ್ ಮೆಂಡಿಸ್ 28 ರನ್, ಧನಂಜಯ ಡಿ ಸಿಲ್ವಾ 8 ರನ್, ಚರಿತ್ ಅಸಲಂಕಾ 12 ರನ್, ಭಾನುಕಾ ರಾಜಪಕ್ಸೆ 10 ರನ್, ದಸುನ್ ಶನಕ 45 ರನ್, ವನಿಂದು ಹಸರಂಗ 21 ರನ್, ಮಹೀಶ್ ತೀಕ್ಷಣ 1 ರನ್, ಕಸುನ್ ರಜಿತ 5 ರನ್, ದಿಲ್ಶನ್ ಮಧುಶಂಕ ಶೂನ್ಯ, ಚಮಿಕಾ ಕರುಣಾರತ್ನೆ 23 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಚೊಚ್ಚಲ ಪಂದ್ಯದಲ್ಲಿಯೇ ಮಾವಿ ಮಿಂಚಿಂಗ್:
ಇನ್ನು, ಇಂದಿನ ಶ್ರೀಲಂಕಾ ವಿರುದ್ಧದ ಮೊದಲು ಟಿ20 ಪಂದ್ಯದ ಮೂಲಕ ಬೌಲರ್ ಶಿವಂ ಮಾವಿ ಮತ್ತು ಶುಭ್ಮನ್ ಗಿಲ್ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಆದರೆ ಶಿವಂ ಮಾವಿ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಮಿಂಚುವ ಮೂಲಕ ಎಲ್ಲರ ಗಮನ ಸೆಳೆದರು. ಅವರು 4 ಒವರ್ ಬೌಲ್ ಮಾಡಿ 22 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರು. ಉಳಿದಂತೆ ಉಮ್ರಾನ್ ಮಲ್ಲಿಕ್ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
Axar Patel bowls a tight final over and India hold their nerve to win a thriller 👏#INDvSL | Scorecard: https://t.co/hlRYVeKIdx pic.twitter.com/tkIMPAXlEJ
— ICC (@ICC) January 3, 2023
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ 162 ರನ್ ಗಳಿಸಿತು. ಆದರೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿಯೇ ಶುಭ್ಮನ್ ಗಿಲ್ ಕೇವಲ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಬಾಂಗ್ಲಾದೇಶ ವಿರುದ್ಧದ ಹೀರೋ ಇಶನ್ ಕಿಶನ್ 37 ರನ್ ಗಳಿಸಿದರು. ಉಳಿದಂತೆ ಅಂತಿಮವಾಗಿ ದೀಪಕ್ ಹೂಡಾ ಅಬ್ಬರಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಅವರು 23 ಎಸೆತದಲ್ಲಿ 4 ಸಿಕ್ಸ್ ಮತ್ತು 1 ಫೋರ್ ಮೂಲಕ 41 ರನ್ ಗಳಿಸಿದರು. ಉಳಿದಂತೆ ಅಕ್ಷರ್ ಪಟೇಳ್ 31 ರನ್, ನಾಯಕ ಹಾರ್ದಿಕ್ ಪಾಂಡ್ಯ 29 ರನ್, ಸಂಜು ಸ್ಯಾಮ್ಸನ್ 5 ರನ್, ಸೂರ್ಯಕುಮಾರ್ ಯಾದವ್ 7 ರನ್ ಗಳಿಸಿದರು.
ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಮಹತ್ವದ ನಿರ್ಧಾರ, ಬಿಸಿಸಿಐ ಭವಿಷ್ಯದ ಯೋಜನೆ ಏನು?
ಶ್ರೀಲಂಕಾ ಭರ್ಜರಿ ಬೌಲಿಂಗ್:
ಇನ್ನು, ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಲಂಕಾ ಉತ್ತಮ ಆರಂಭವನ್ನು ಪಡೆಯಿತು. ಆದರೆ ಕೊನೆಯ ಓವರ್ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟು ಕೊಂಚ ದುಬಾರಿಯಾದರು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ, ಮಹೀಶ್ ತೀಕ್ಷಣ, ಚಮಿಕಾ ಕರುಣಾರತ್ನೆ, ಧನಂಜಯ ಡಿ ಸಿಲ್ವಾ ಮತ್ತು ವನಿಂದು ಹಸರಂಗ ತಲಾ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ