• Home
  • »
  • News
  • »
  • sports
  • »
  • IND vs SL 1st T20: ಇಂದು ಭಾರತ-ಶ್ರೀಲಂಕಾ ಟಿ20 ಪಂದ್ಯ; ಇಲ್ಲಿದೆ ಪಿಚ್​​ ರಿಪೋರ್ಟ್​, ಮ್ಯಾಚ್​​ ಟೈಂ

IND vs SL 1st T20: ಇಂದು ಭಾರತ-ಶ್ರೀಲಂಕಾ ಟಿ20 ಪಂದ್ಯ; ಇಲ್ಲಿದೆ ಪಿಚ್​​ ರಿಪೋರ್ಟ್​, ಮ್ಯಾಚ್​​ ಟೈಂ

IND vs SL

IND vs SL

IND vs SL 2023: ಇಂದು ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯವು ನಡೆಯಲಿದೆ. ಟಿ20 ಸರಣಿಯೊಂದಿಗೆ ಸರಣಿ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

  • Share this:

ಇಂದು ಭಾರತ ಮತ್ತು ಶ್ರೀಲಂಕಾ (IND vs SL 1st T20) ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯವು ನಡೆಯಲಿದೆ. ಟಿ20 ಸರಣಿಯೊಂದಿಗೆ ಸರಣಿ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯಲಿದೆ. ಲಂಕಾ ವಿರುದ್ಧದ ಟಿ20 ಸರಣಿಗೆ ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯ (Hardik Pandya) ತಂಡವನ್ನು ಮುನ್ನಡೆಸಲಿದ್ದಾರೆ. ಟಿ20 ಸ್ವರೂಪದಲ್ಲಿ ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಅಲ್ಲದೇ ಅನೇಕ ಹೊಸ ಪ್ರತಿಭೆಗಳಿಗೆ ಅವಕಅಶ ಸಿಗುವ ಸಾಧ್ಯತೆ ಇದ್ದು, ಪಾಂಡ್ಯ ಮುಂದಿನ ನಾಯಕ ಎಂಬ ಕಾರಣದಿಂದ ಈ ಸರಣಿ ಪಾಂಡ್ಯಗೆ ಅತ್ತಯಂತ ಮಹತ್ವದ್ದಾಗಿದೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಇಲ್ಲದೆ, ಭಾರತವು ಟಾಪ್ 3 ಅನ್ನು ತುಂಬಬೇಕಾಗುತ್ತದೆ ಮತ್ತು ಆಯ್ಕೆ ಮಾಡಲು ಸಾಕಷ್ಟು ಆಯ್ಕೆಗಳಿವೆ.


ಹಾರ್ದಿಕ್​ ತಂಡ ಹೇಗಿರಬಹುದು:


ಇಶಾನ್ ಕಿಶನ್ ಅವರ ಅತ್ಯುತ್ತಮ ಫಾರ್ಮ್ ಅನ್ನು ನೋಡಿದರೆ, ಅವರು ಆರಂಭಿಕರಲ್ಲಿ ಒಬ್ಬರಾಗುತ್ತಾರೆ. ರಿತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ ಮತ್ತು ಶುಭಮನ್ ಗಿಲ್ ನಡುವೆ ಪೈಪೋಟಿ ನಡೆಯಲಿದೆ. ಈಗಿನ ಫಾರ್ಮ್ ನೋಡಿದರೆ ರಿತುರಾಜ್ ಗಾಯಕ್ವಾಡ್ ಇಶನ್​ ಕಿಶನ್ ಜೊತೆ ಕಣಕ್ಕಿಳಿಯಬಹುದು. ಸೂರ್ಯಕುಮಾರ್ ಯಾದವ್ 3ನೇ ಸ್ಥಾನದಲ್ಲಿದ್ದರೆ, ಸಂಜು ಸ್ಯಾಮ್ಸನ್ 4ನೇ ಸ್ಥಾನದಲ್ಲಿ ಆಡಬಹುದು. ಆಲ್ ರೌಂಡರ್ ನಾಯಕ ಹಾರ್ದಿಕ್ ಪಾಂಡ್ಯ 5ನೇ ಸ್ಥಾನಕ್ಕೆ ಇಳಿಯುವ ಸಾಧ್ಯತೆ ಇದೆ. ನಂತರ ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಬರುವ ಎಲ್ಲಾ ಸಾಧ್ಯತೆಗಳಿವೆ.


ಹರ್ಷಲ್ ಪಟೇಲ್ ಕೂಡ ತಂಡಕ್ಕೆ ಬರುವ ಸಾಧ್ಯತೆ ಇದೆ. ಯುಜ್ವೇಂದ್ರ ಚಹಾಲ್ ಏಕೈಕ ಸ್ಪಿನ್ನರ್ ಆಗಿ ಆಡಬಹುದು ಮತ್ತು ಉಮ್ರಾನ್ ಮಲಿಕ್ ಮತ್ತು ಅರ್ಶ್ದೀಪ್ ಸಿಂಗ್ ಮುಖ್ಯ ವೇಗದ ಬೌಲರ್ ಆಗಿರುತ್ತಾರೆ. ಉಮ್ರಾನ್ ಮಲಿಕ್ ಟಿ20 ಅಂತರಾಷ್ಟ್ರೀಯ ಸೆಟ್‌ಅಪ್‌ಗೆ ಮರಳಿದ್ದು, ಅವರು ಆಡುವುದು ಖಚಿತವಾಗಿದೆ. ವಾಂಖೆಡೆಯಲ್ಲಿನ ಪೇಸ್ ಟ್ರ್ಯಾಕ್ ಅವರ ವೇಗದ ಬೌಲಿಂಗ್‌ಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ: ICC World Cup 2023: ಈ ವರ್ಷ ಭಾರತದಲ್ಲಿಯೇ ನಡೆಯಲಿದೆ ಇಂಡೋ-ಪಾಕ್​​ ಕದನ, ಎಲ್ಲಿ? ಯಾವಾಗ? ಇಲ್ಲಿದೆ ಫುಲ್​ ಡಿಟೇಲ್ಸ್


ಪಿಚ್ ವರದಿ: 


ವಾಂಖೆಡೆ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ವರ್ಗವಾಗಿದೆ. ಚೆಂಡು ಮೇಲ್ಮೈಯಿಂದ ಬರುತ್ತದೆ. ಬ್ಯಾಟರ್‌ಗಳು ಕೂಡ ಶಾರ್ಟ್ ಬೌಂಡರಿಗಳನ್ನುಸಿಡಿಸಲು ಈ ಪಿಚ್​ ಸಹಾಯಕವಾಗಿದೆ. ಇಬ್ಬನಿಯು ಬೌಲರ್‌ಗಳಿಗೆ ಹೆಚ್ಚು ಸಹಾಯಕಾರಿಯಾಗಿದ್ದು, ಪಂದ್ಯದ ತಿರುವಿಗೆ ಕಾರಣವಾಗಬಹುದು. ಆದಾಗ್ಯೂ, ವೇಗಿಗಳು ಆರಂಭಿಕ ಓವರ್‌ಗಳಲ್ಲಿ ಬೌಲರ್​ಗಳು ಮೇಲುಗೈ ಸಾಧಿಸುತ್ತಾರೆ. ಮಳೆಯ ನಿರೀಕ್ಷೆ ಇಲ್ಲವೆಂದು ಹವಾಮಾನ ಇಲಾಖೆ ತಿಳಿಸಿದ್ದು, ಪಂದ್ಯವನ್ನು ಸಂಪೂರ್ಣವಾಗಿ ನೋಡಬಹುದಾಗಿದೆ.


ಪಂದ್ಯದ ವಿವರ:


ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ತಂಡವು ಇಲ್ಲಿ 3 ಪಂದ್ಯಗಳ ಟಿ20 ಪಂದ್ಯವನ್ನು ಆಡಲಿದೆ. ಈ ಟಿ20 ಸರಣಿಯ ಮೊದಲ ಪಂದ್ಯವು ಜನವರಿ 3ರಂದು ನಡೆಯಲಿದೆ. ಈ ಪಂದ್ಯವು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯವು 7 ಗಂಟೆಗೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯದ ನೇರಪ್ರಸಾರವನ್ನು ಸ್ಟಾರ್​ ಸ್ಪೋರ್ಟ್ಸ್​ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ನಲ್ಲಿ ಲೈವ್​ ಸ್ಟ್ರೀಮಿಂಗ್​ ವೀಕ್ಷಿಸಬಹುದು.


IND vs SL 2023 ಸಂಭಾವ್ಯ ತಂಡ:


ಭಾರತ ಸಂಭಾವ್ಯ ತಂಡ: ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್.


ಶ್ರೀಲಂಕಾ ಸಂಭಾವ್ಯ ತಂಡ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಾಕ್), ಅವಿಷ್ಕ ಫೆರ್ನಾಂಡೋ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ಸಿ), ವನಿಂದು ಹಸರಂಗ, ಚಮಿಕ ಕರುಣಾರತ್ನೆ, ಮಹೇಶ್ ತೀಕ್ಷಣ, ಲಹಿರು ಕುಮಾರ, ದಿಲ್ಶನ್ ಮಧುಶಂಕ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು