ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ತಂಡ ಶ್ರೀಲಂಕಾ (INDvsSL) ವಿರುದ್ಧ ತವರಿನಲ್ಲಿ ಟಿ20 ಸರಣಿ ಆಡಲಿದೆ. ಹೊಸ ವರ್ಷದಲ್ಲಿ ಭಾರತ ತಂಡ ಹೊಸ ರೀತಿಯಲ್ಲಿ ಕಣಕ್ಕಿಳಿಯಲಿದೆ. ಅಲ್ಲದೇ ಟಿ20 ಸರಣಿಗೆ ಯುವ ಪಡೆ ಜೊತೆ ಕಣಕ್ಕಿಳಿದರೆ, ಇತ್ತ ತಂಡದ ಜೆರ್ಸಿಯೂ ಸಹ ಬದಲಾಗಿದೆ. ಹೌದು, ಈಗಾಗಲೇ ಎಂಪಿಎಲ್ (MPL) ಜೆರ್ಸಿಯಲ್ಲಿ ಭಾರತ ತಂಡ ಇಷ್ಟು ದಿನಗಳ ಕಾಲ ಮೈದಾನಕ್ಕಿಳಿಯುತ್ತಿತ್ತು. ಆದರೆ ಇದೀಗ ಜೆರ್ಸಿಯಲ್ಲಿ ಬರೆದಿರುವ ಟೈಟಲ್ ಸ್ಪಾನ್ಗಳ ಹೆಸರೂ ಬದಲಾಗಿದೆ. ಇಲ್ಲಿಯವರೆಗೆ ಭಾರತ ತಂಡದ ಜೆರ್ಸಿಯಲ್ಲಿ ಎಂಪಿಎಲ್ನ ಲೋಗೋ ಬಳಸಲಾಗುತ್ತಿತ್ತು. ಹೊಸ ವರ್ಷದಿಂದ ಎಂಪಿಎಲ್ ಬದಲಿಗೆ ಈಗ ಕಿಲ್ಲರ್ ಬ್ರಾಂಡ್ನ (Brand Killer) ಲೋಗೋ ಇರಲಿದೆ. ದೀರ್ಘಕಾಲದವರೆಗೆ, MPL ಭಾರತೀಯ ಜೆರ್ಸಿಯ ಶೀರ್ಷಿಕೆ ಪ್ರಾಯೋಜಕರಾಗಿದ್ದರು. ಆದರೆ ಇದೀಗ ಅದನ್ನು ಬದಲಾಯಿಸಲಾಗಿದೆ.
ನೂತನ ಜೆರ್ಸಿಯಲ್ಲಿ ಟೀಂ ಇಂಡಿಯಾ:
ಟೀಂ ಇಂಡಿಯಾದ ಹೊಸ ಜೆರ್ಸಿ ಜೊತೆಗಿನ ಫೋಟೋ ಸೆಷನ್ನ ಚಿತ್ರಗಳನ್ನು ಯುಜ್ವೇಂದ್ರ ಚಹಾಲ್ ಹಂಚಿಕೊಂಡಿದ್ದಾರೆ. ಇದರಿಂದ ಹೊಸ ಪ್ರಾಯೋಜಕರ ಹೆಸರಿನ ಬಗ್ಗೆ ಮಾಹಿತಿ ನೀಡಲಾಗಿದೆ. ರೋಹಿತ್ ಶರ್ಮಾ ಸಂಪೂರ್ಣ ಫಿಟ್ ಆಗಿಲ್ಲ. ಇದೇ ಕಾರಣಕ್ಕೆ ಅವರಿಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಟಿ20 ಸರಣಿಯಲ್ಲಿ ಹಾರ್ದಿಕ್ ನಾಯಕತ್ವ ವಹಿಸಲಿದ್ದಾರೆ. ಜನವರಿ 10ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ನಿಯಮಿತ ನಾಯಕ ರೋಹಿತ್ ಶರ್ಮಾ ಮರಳಲಿದ್ದಾರೆ.
Fantastic five 😎
All set for the T20I series 🇮🇳#TeamIndia | #INDvSL pic.twitter.com/pAWq28wkF7
— Yuzvendra Chahal (@yuzi_chahal) January 2, 2023
ಐಪಿಎಲ್ ಕಡೆಗಣನೆ ಇಲ್ಲ:
ಜನವರಿ 1 ರಂದು ನಡೆದ ಪರಿಶೀಲನಾ ಸಭೆಯಲ್ಲಿ ಬಿಸಿಸಿಐ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದೀಗ ಐಪಿಎಲ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಕ್ರಿಕೆಟಿಗರಿಗೆ ನೇರವಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಐಪಿಎಲ್ 2023ರ ಋತುವಿನ ನಂತರ ಭಾರತ ತಂಡದಲ್ಲಿ ಅವಕಾಶ ಪಡೆಯಲು ದೇಶೀಯ ಕ್ರಿಕೆಟ್ನಲ್ಲಿಯೂ ಉತ್ತಮ ಪ್ರದರ್ಶನ ನೀಡಬೇಕು. ಯೋ-ಯೋ ಪರೀಕ್ಷೆಯ ಹೊರತಾಗಿ, ಫಿಟ್ನೆಸ್ ಅನ್ನು ಬಲಪಡಿಸಲು ಬಿಸಿಸಿಐನಿಂದ ಡೆಕ್ಸಾ ಪರೀಕ್ಷೆಯನ್ನು ಸಹ ಕಡ್ಡಾಯಗೊಳಿಸಲಾಗಿದೆ.
IND vs SL ತಂಡಗಳ ಸಂಭಾವ್ಯ ಪ್ಲೇಯಿಂಗ್ 11:
ಭಾರತದ ಸಂಭಾವ್ಯ ಪ್ಲೇಯಿಂಗ್ 11: ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್.
ಶ್ರೀಲಂಕಾ ಸಂಭಾವ್ಯ ಆಟಗಾರರ 11: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (WK), ಅವಿಷ್ಕಾ ಫೆರ್ನಾಂಡೊ, ಚರಿತ್ ಅಸ್ಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ಸಿ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಮಹೇಶ್ ತೀಕ್ಷಣ, ಲಹಿರು ಕುಮಾರ, ದಿಲ್ಶನ್ ಮಧುಶಂಕ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ