• Home
  • »
  • News
  • »
  • sports
  • »
  • India vs Sri Lanka T20: ಭಾರತ-ಶ್ರೀಲಂಕಾ ಟಿ20 ಪಂದ್ಯವನ್ನು ಮನೆಯಲ್ಲಿ ಉಚಿತವಾಗಿ ವೀಕ್ಷಿಸಿ

India vs Sri Lanka T20: ಭಾರತ-ಶ್ರೀಲಂಕಾ ಟಿ20 ಪಂದ್ಯವನ್ನು ಮನೆಯಲ್ಲಿ ಉಚಿತವಾಗಿ ವೀಕ್ಷಿಸಿ

IND vs SL T20: ಜನವರಿ 3ರಂದು ಪ್ರಾರಂಭವಾಗುವ ಮೂರು ಪಂದ್ಯಗಳ T20 ಅಂತರಾಷ್ಟ್ರೀಯ ಸರಣಿಯೊಂದಿಗೆ ಭಾರತ ಮತ್ತು ಶ್ರೀಲಂಕಾ ತಂಡವು ಹೊಸ ವರ್ಷದ ತಮ್ಮ ಮೊದಲ ಪಂದ್ಯ ಆಡಲಿದೆ. ಈ ಪಂದ್ಯವನ್ನು ನೀವು ಹೀಗೆ ಉಚಿತವಾಗಿ ವೀಕ್ಷಿಸಬಹುದು.

IND vs SL T20: ಜನವರಿ 3ರಂದು ಪ್ರಾರಂಭವಾಗುವ ಮೂರು ಪಂದ್ಯಗಳ T20 ಅಂತರಾಷ್ಟ್ರೀಯ ಸರಣಿಯೊಂದಿಗೆ ಭಾರತ ಮತ್ತು ಶ್ರೀಲಂಕಾ ತಂಡವು ಹೊಸ ವರ್ಷದ ತಮ್ಮ ಮೊದಲ ಪಂದ್ಯ ಆಡಲಿದೆ. ಈ ಪಂದ್ಯವನ್ನು ನೀವು ಹೀಗೆ ಉಚಿತವಾಗಿ ವೀಕ್ಷಿಸಬಹುದು.

IND vs SL T20: ಜನವರಿ 3ರಂದು ಪ್ರಾರಂಭವಾಗುವ ಮೂರು ಪಂದ್ಯಗಳ T20 ಅಂತರಾಷ್ಟ್ರೀಯ ಸರಣಿಯೊಂದಿಗೆ ಭಾರತ ಮತ್ತು ಶ್ರೀಲಂಕಾ ತಂಡವು ಹೊಸ ವರ್ಷದ ತಮ್ಮ ಮೊದಲ ಪಂದ್ಯ ಆಡಲಿದೆ. ಈ ಪಂದ್ಯವನ್ನು ನೀವು ಹೀಗೆ ಉಚಿತವಾಗಿ ವೀಕ್ಷಿಸಬಹುದು.

  • Share this:

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಗೆಲುವಿನ ನಂತರ ಭಾರತ ತಂಡ ಇಂದಿನಿಂದ ಶ್ರೀಲಂಕಾ (IND vs SL) ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಹೊಸ ವರ್ಷದಲ್ಲಿ ಪ್ರಮುಖ ಬದಲಾವಣೆಗಳೊಂದಿಗೆ, ಭಾರತೀಯ ಕ್ರಿಕೆಟ್ ತಂಡವು (Team India) ಇಂದಿನಿಂದ ಲಂಕಾ ವಿರುದ್ಧ 3 ಪಂದ್ಯಗಳ T20 ಸರಣಿ ಆಡಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವರಂತಹ ಹಿರಿಯ ಆಟಗಾರರಿಲ್ಲದ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ (Hardik Pandya) ಯುವ ಆಟಗಾರರೊಂದಿಗೆ ಮುನ್ನಡೆಸಲಿದ್ದಾರೆ. ಇನ್ನೂ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ರೋಹಿತ್ ಶರ್ಮಾ ಏಕದಿನ ತಂಡಕ್ಕೆ ಮರಳಿದ್ದು ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.


ಹೊಸದ ವರ್ಷದ ಮೊದಲ ಟಿ20 ಪಂದ್ಯ:


ಈ ಹಿಂದೆ ಶ್ರೀಲಂಕಾ ಭಾರತ ಪ್ರವಾಸ ಕೈಗೊಂಡಾಗ ಒಂದೇ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಗೆದ್ದಿಲ್ಲ. ಅವರು ಉತ್ತಮ ಫಾರ್ಮ್‌ನಲ್ಲಿರುವ ಅನೇಕ ಆಟಗಾರರನ್ನು ಹೊಂದಿದ್ದಾರೆ. ಈ ಮಾದರಿಯಲ್ಲಿ ಶ್ರೀಲಂಕಾ ಕೂಡ ಏಷ್ಯನ್ ಚಾಂಪಿಯನ್ ಆಗಿದೆ. 2024ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ಶ್ರೀಲಂಕಾ ಮತ್ತು ಭಾರತ ಎರಡೂ ತಂಡಗಳು ತಮ್ಮ ತಯಾರಿಯಲ್ಲಿ ಈಗಾಗಲೇ ತೊಡಗಿಕೊಂಡಿದೆ.


ಭಾರತ-ಲಂಕಾ ಪಂದ್ಯವನ್ನು ಉಚಿತವಾಗಿ ವೀಕ್ಷಿಸಿ:


ಭಾರತ ಮತ್ತು ಶ್ರೀಲಂಕಾ ನಡುವಿನ T20 ಸರಣಿಯ ಮೊದಲ ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.


ಭಾರತ ಮತ್ತು ಶ್ರೀಲಂಕಾ ನಡುವಿನ T20 ಸರಣಿಯ ಮೊದಲ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?
ಭಾರತ ಮತ್ತು ಶ್ರೀಲಂಕಾ ನಡುವಿನ T20 ಸರಣಿಯ ಮೊದಲ ಪಂದ್ಯ ಭಾರತೀಯ ಕಾಲಮಾನ ರಾತ್ರಿ 7.00 ಗಂಟೆಗೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.


ಭಾರತ ಮತ್ತು ಶ್ರೀಲಂಕಾ ನಡುವಿನ T20 ಸರಣಿಯ ನೇರ ಪ್ರಸಾರವನ್ನು ಯಾವ ಚಾನಲ್‌ನಲ್ಲಿ?
ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ T20 ಸರಣಿಯ ನೇರ ಪ್ರಸಾರವನ್ನು ವೀಕ್ಷಿಸಬಹುದು. ನೀವು ಸ್ಟಾರ್ ಸ್ಪೋರ್ಟ್ಸ್ 1,  ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ,  ಸ್ಟಾರ್ ಸ್ಪೋರ್ಟ್ಸ್ ಫಸ್ಟ್, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ ಭಾರತ ವಿರುದ್ಧ ಶ್ರೀಲಂಕಾ ನೇರ ಪ್ರಸಾರವನ್ನು ವೀಕ್ಷಿಸಬಹುದು.


ಇದನ್ನೂ ಓದಿ: Cricket Schedule 2023: ಕ್ರಿಕೆಟ್​ ಪ್ರೇಮಿಗಳಿಗೆ ಈ ವರ್ಷ ಭರ್ಜರಿ ಹಬ್ಬ, ಇಲ್ಲಿದೆ 2023ರ ಜನವರಿ-ಡಿಸೆಂಬರ್​ ವರೆಗಿನ ಸಂಪೂರ್ಣ ವೇಳಾಪಟ್ಟಿ


ಭಾರತ ಮತ್ತು ಶ್ರೀಲಂಕಾ ನಡುವಿನ T20 ಸರಣಿಯ ಲೈವ್ ಸ್ಟ್ರೀಮಿಂಗ್?
T20 ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು Disney+Hotstar ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ನೋಡಬಹುದು. ಹೆಚ್ಚಿನ ಮಾಹಿತಿಗಾಗಿ ನ್ಯೂಸ್​ 18 ಕನ್ನಡ ವೆಬ್​ಸೈಟ್​ ಅನ್ನು ನೋಡಬಹುದು.


ಭಾರತ ಮತ್ತು ಶ್ರೀಲಂಕಾ ನಡುವಿನ T20 ಸರಣಿಯ ಎಲ್ಲಿ ಉಚಿತವಾಗಿ ವೀಕ್ಷಿಸಬಹುದು?
ಈ T20 ಸರಣಿಯ ನೇರ ಪ್ರಸಾರವನ್ನು ನೀವು ಉಚಿತವಾಗಿ DD ಸ್ಪೋರ್ಟ್ಸ್‌ನಲ್ಲಿ ವೀಕ್ಷಿಸಬಹುದು.


IND vs SL ತಂಡಗಳು:


ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ಮಾವಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ , ಮುಖೇಶ್ ಕುಮಾರ್.


ಶ್ರೀಲಂಕಾ ತಂಡ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಚರಿತ್ ಅಸ್ಲಂಕಾ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ಚಮಕ್ ಕರುಣಾರತ್ನೆ, ಸದೇರಾ ಸಮರವಿಕ್ರಮ, ಕುಸಾಲ್ ಮೆಂಡಿಸ್, ಭಾನುಕಾ ರಾಜಪಕ್ಸೆ, ಅಶೆನ್ ಬಂಡಾರ, ಮಹೇಶ್ ತೀಕ್ಷಣ, ದಿಲ್ ಕಸ್ಸನ್ ರಜಕ, ದಿಲ್ ಕಶನ್ ರಾಜಕ ದುನಿತಾ ವೆಲ್ಲೆಸ್, ಪ್ರಮೋದ್ ಮದುಶನ್, ಲಹಿರು ಕುಮಾರ, ನುವಾನ್ ತುಷಾರ.

Published by:shrikrishna bhat
First published: