ಭಾರತ ಮತ್ತು ಶ್ರೀಲಂಕಾ (IND vs SL ODI) ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಮೊದಲ ಪಂದ್ಯ ಗುವಾಹಟಿಯ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ (ACA Stadium) ಆರಂಭವಾಗಿದೆ. ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿದ್ದು, ಭರ್ಜರಿ ರನ್ ಗಳಿಸಿದೆ. ಆರಂಬಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಶುಭ್ಮನ್ ಗಿಲ್ ಶತಕದ ಜೊತೆಯಾಟವಾಡಿದರು. ಬಳಿಕ ಬಂದ ವಿರಾಟ್ ಕೊಹ್ಲಿ (Virat Kohli) ಸಹ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಹಾಯಕರಾದರು. ಭಾರತ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸುವ ಮೂಲಕ ಶ್ರೀಲಂಕಾ ತಂಡಕ್ಕೆ 374 ರನ್ಗಳ ಟಾರ್ಗೆಟ್ ನೀಡಿದೆ. ಲಂಕಾ ವಿರುದ್ಧದ ಟಿ20 ಸರಣಿಯಿಂದ ದೂರವಿದ್ದ ಕೊಹ್ಲಿಇದೀಗ ಏಖದಿನ ಸರಣಿ ಕಂಬ್ಯಾಕ್ನಲ್ಲಿಯೇ ಶತಕ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಮತ್ತೊಮ್ಮೆ ಕಿಂಗ್ ಈಸ್ ಬ್ಯಾಕ್ ಎಂದು ಹೇಳಿದ್ರು.
ಗುವಾಹಟಿಯಲ್ಲಿ ಅಬ್ಬರಿಸಿದ ಕೊಹ್ಲಿ:
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 67 ಎಸೆತದಲ್ಲಿ 9 ಫೋರ್ ಮತ್ತು 3 ಸಿಕ್ಸ್ಗಳ ನೆರವಿನಿಂದ 83 ರನ್ ಮತ್ತು ಶುಭ್ಮನ್ ಗಿಲ್ 60 ಎಸೆತದಲ್ಲಿ 11 ಫೋರ್ ಮೂಲಕ 70 ರನ್ ಗಳಿಸುವ ಮೂಲಕ ಶತಕ ವಂಚಿತರಾದರು. ಬಳಿಕ ಬಂದ ವಿರಾಟ್ ಕೊಹ್ಲಿ ಮತ್ತೊಮ್ಮೆ ಇಂದು ಶತಕದ ಆಟವಾಡಿದರು, ಅವರು , 876 ಎಸೆತದಲ್ಲಿ 1 ಸಿಕ್ಸ್ ಮತ್ತು 12 ಬೌಂಡರಿಗಳ ನೆರವಿನಿಂದ 113 ರನ್ ಗಳಿಸಿದರು. ಉಳಿದಂತೆ ಶ್ರೇಯಸ್ ಅಯ್ಯರ್ 28 ರನ್, ಕೆಎಲ್ ರಾಹುಲ್ 39 ರನ್, ಹಾರ್ದಿಕ್ ಪಾಂಡ್ಯ 14 ರನ್, ಅಕ್ಷರ್ ಪಟೇಲ್ 9 ರನ್, ಮೊಹಮ್ಮದ್ ಸಿರಾಜ್ 7 ರನ್, ಮೊಹಮ್ಮದ್ ಶಮಿ 4 ರನ್ ಗಳಿಸಿದರು.
Innings Break!#TeamIndia packed a punch 👊 with the bat!
1⃣1⃣3⃣ for @imVkohli
8⃣3⃣ for Captain @ImRo45
7⃣0⃣ for @ShubmanGill
Scorecard 👉 https://t.co/262rcUdafb#iNDvSL pic.twitter.com/vGpw3qb0QE
— BCCI (@BCCI) January 10, 2023
ಇನ್ನು, ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಶ್ರೀಲಂಕಾ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಯಿತು. ಲಂಕಾದ ಯಾವೊಬ್ಬ ಬೌಲರ್ ಸಹ ಭಾರತೀಯ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಲಂಕಾ ಪರ ಕಸುನ್ ರಜಿತ 3 ವಿಕೆಟ್, ದಿಲ್ಶನ್ ಮಧುಶಂಕ, ಚಾಮಿಕ ಕರುಣಾರತ್ನೆ, ದಸುನ್ ಶಾನಕ ಮತ್ತು ಧನಂಜಯ ಡಿ ಸಿಲ್ವ ತಲಾ 1 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: IND vs SL ODI: ಸೆಂಚುರಿ ಬಾರಿಸಿದ್ರೂ ಸೂರ್ಯಕುಮಾರ್-ಕಿಶನ್ಗೆ ಇಲ್ಲ ಚಾನ್ಸ್! ರಾಹುಲ್ ಮೇಲೆ ಬಿಸಿಸಿಐಗೆ ಯಾಕಿಷ್ಟು ವ್ಯಾಮೋಹ?
IND vs SL ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಅವಿಷ್ಕ ಫೆರ್ನಾಂಡೊ, ಧನಂಜಯ ಡಿ ಸಿಲ್ವ, ಚರಿತ್ ಅಸಲಂಕಾ, ದಸುನ್ ಶಾನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶನ್ ಮಧುಶಂಕ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ