• Home
  • »
  • News
  • »
  • sports
  • »
  • IND vs SA: ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ರೋಚಕ ಜಯ, ವ್ಯರ್ಥವಾದ ಮಿಲ್ಲರ್ ಶತಕ

IND vs SA: ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ರೋಚಕ ಜಯ, ವ್ಯರ್ಥವಾದ ಮಿಲ್ಲರ್ ಶತಕ

ಭಾರತಕ್ಕೆ ಜಯ

ಭಾರತಕ್ಕೆ ಜಯ

IND vs SA: ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 221 ರನ್​ ಗಳಿಸುವ ಮೂಲಕ 16 ರನ್​ಗಳಿಂದ ಸೋಲನ್ನಪ್ಪಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಸಾಧಿಸಿ ಒಂದು ಪಂದ್ಯ ಇರುವಂತೆಯೇ ಸರಣಿಯನ್ನು ಗೆದ್ದಿದೆ.

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವಿನ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯವು ಇಂದು ಗುವಾಹಟಿಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತದ ಬ್ಯಾಟ್ಸ್​ಮನ್​ಗಳು ನಿಗದಿತ 20 ಓವರ್​ ಗಳಲ್ಲಿ 3 ವಿಕೆಟ್​ ನಷ್ಟ್ಕಕೆ 237 ರನ್​ಗಳ ಬೃಹತ್​ ಮೊತ್ತದ ಟಾರ್ಗೆಟ್​ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 221 ರನ್​ ಗಳಿಸುವ ಮೂಲಕ 16 ರನ್​ಗಳಿಂದ ಸೋಲನ್ನಪ್ಪಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಸಾಧಿಸಿ ಒಂದು ಪಂದ್ಯ ಇರುವಂತೆಯೇ ಸರಣಿಯನ್ನು ಗೆದ್ದಿದೆ. ಭಾರತದ ಪರ ಅರ್ಶದೀಪ್​ 2 ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದು ಮಿಂಚಿದರು.


ಉತ್ತಮವಾಗಿ ಆಡಿದ ಮಿಲ್ಲರ್​-ಡಿ ಕಾಕ್:


ಇನ್ನು, ಭಾರತ ತಂಡ ನೀಡಿದ 238 ರನ್​ ಗಳ ಬೃಹತ್​ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ಆರಂಭಿಕ ಆಘಾತ ಎದುರಿಸಿತು. ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 221 ರನ್​ ಗಳಿಸುವ ಮೂಲಕ 16 ರನ್​ಗಳಿಂದ ಸೋಲನ್ನಪ್ಪಿತು. ಸೌತ್​ ಆಫ್ರಿಕಾ ಪರ ನಾಯಕ ಟೆಂಬಾ ಬವುಮಾ ಮತ್ತು ರೊಸೊವ್ ಶೂನ್ಯಕ್ಕೆ ಔಟಾದರೆ, ಅಡೇನ್​ ಮಾರ್ಕರಮ್​ 33 ರನ್ ಗಳಿಸಿದರು.



ನಂತರ ಬಂದ ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್ ಮಿಲ್ಲರ್ ಉತ್ತಮ ಜೊತೆಯಾಟವಾಡಿದರು. ಇದರಲ್ಲಿ ಡೇವಿಡ್​ ಮಿಲ್ಲರ್ ತಮ್ಮ ಟಿ20 ಕ್ರಿಕೆಟ್​ನ 2ನೇ ಅಂತರಾಷ್ಟ್ರೀಯ ಶತಕ ಸಿಡಿಸಿದರು. ಮಿಲ್ಲರ್ 47 ಎಸೆತದಲ್ಲಿ 7 ಸಿಕ್ಸ್ ಮತ್ತು 8 ಫೋರ್​ ಗಳ ಮೂಲಕ ಆಕರ್ಷಕ 106 ರನ್ ಗಳಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಕ್ವಿಂಟನ್​ ಡಿ ಕಾಕ್​ ಸಹ 48 ಎಸೆತದಲ್ಲಿ 4 ಸಿಕ್ಸ್ ಮತ್ತು 3 ಫೊರ್​ ಮೂಲಕ 69 ರನ್ ಗಳಸಿದರು.


ಐತಿಹಾಸಿಕ ಗೆಲುವು ದಾಖಲಿಸಿದ ಭಾರತ ತಂಡ:


ಹೌದು, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕವಾಗಿ ಗೆದ್ದು ಇನ್ನೂ ಒಂದು ಪಂದ್ಯ ಇರುವ ಮುಂಚಿತವಾಗಿ ಸರಣಿಯನ್ನು ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. 2018ರ ನಂತರ ಇದೇ ಮೊದಲ ಬಾರಿಗೆ ಭಾರತ ತಂಡವು ಆಫ್ರಿಕಾವನ್ನು T20I ದ್ವಿಪಕ್ಷೀಯ ಸರಣಿಯಲ್ಲಿ ಸೋಲಿಸಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಐದು ಪಂದ್ಯಗಳ T20I ಸರಣಿಯನ್ನು ಆಡಿತ್ತು.



ಬೆಂಗಳೂರಿನಲ್ಲಿ ನಡೆದಿದ್ದ ನಿರ್ಣಾಯಕ ಪಂದ್ಯ ಮಳೆಯಿಂದಾಗಿ ರದ್ದಾಗುವುದರೊಂದಿಗೆ ಸರಣಿಯು 2-2ರಲ್ಲಿ ಕೊನೆಗೊಂಡಿತು. 2018 ರಿಂದ ತವರಿನಲ್ಲಿ ನಡೆದ T20I ದ್ವಿಪಕ್ಷೀಯ ಸರಣಿಯಲ್ಲಿ ಭಾರತವು ಇನ್ನೂ ದಕ್ಷಿಣ ಆಫ್ರಿಕಾವನ್ನು ಸೋಲಿಸಿಲ್ಲ.


ಭರ್ಜರಿ ಬ್ಯಾಟಿಂಗ್​ ಮಾಡಿದ್ದ ಟೀಂ ಇಂಡಿಯಾ:


ಇಂದು ಗುವಾಹಟಿಯಲ್ಲಿ ಭಾರತೀಯ ಆಟಗಾರರು ಭರ್ಜರಿ ಬ್ಯಾಟಿಂಗ್ಡು ಮಾಡುವ ಮೂಲಕ ಆಫ್ರಿಕಾದ ಬೌಲರ್​ಗಳ ಬೆವರಿಳಿಸಿದ್ದಾರೆ. ಭಾರತ ತಂಡವು ನಿಗದಿತ 20 ಓವರ್​ ಗಳಲ್ಲಿ 3 ವಿಕೆಟ್​ ನಷ್ಟ್ಕಕೆ 237 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತ್ತು.  ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆಎಲ್ ರಾಹುಲ್​ ಉತ್ತಮ ಓಫನಿಂಗ್ ನಿಡಿದರು. ರೋಹಿತ್​ 37 ಎಸೆತದಲ್ಲಿ 7 ಫೋರ್​ ಮತ್ತು 1 ಸಿಕ್ಸ್ ನೆರವಿನಿಂದ 43 ರನ್, ಕೆಎಲ್ ರಾಹುಲ್ 28 ಎಸೆತದಲ್ಲಿ 4 ಸಿಕ್ಸ್, 5 ಬೌಂಡರಿಯಿಂದ ಆಕರ್ಷಕ 57 ರನ್, ಗಳಿಸಿ ಉತ್ತಮ ಆರಂಭ ನೀಡಿದರು.


ಇದನ್ನೂ ಓದಿ: IND vs SA ODI: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ, ಮತ್ತೆ ನಾಯಕತ್ವದಲ್ಲಿ ಬದಲಾವಣೆ


ಬಳಿಕ ಬಂದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಇಂದು ಗುವಾಹಟಿಯಲ್ಲಿ ಬೌಲ್​ಗೆ ಮೂಲೆ ಮೂಲೆಗಳ ದರ್ಶನ ಮಾಡಿಸಿದ್ದಾರೆ. ಈ ಅದ್ಭುತ ಇನ್ನಿಂಗ್ಸ್ ನಲ್ಲಿ ಸೂರ್ಯಕುಮಾರ್ ಯಾದವ್ 22 ಬೌಲ್​ಗೆ 5 ಸಿಕ್ಸ್ ಮತ್ತು 5 ಪೋರ್​ ಸಿಡಿಸಿ 61 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಬೌಲ್​ಗೆ 7 ಪೋರ್​ 1 ಸಿಕ್ಸ್ ಮೂಲಕ 49 ರನ್ ಗಳಿಸಿ ಅಜೇಯರಾಗಿ ಉಳಿದರೆ, ಫಿನಿಶರ್​ ಕಾರ್ತಿಕ್ 7 ಎಸೆತದಲ್ಲಿ 2 ಸಿಕ್ಸ್ 1 ಪೋರ್​ ಮೂಲಕ 17 ರನ್ ಗಳಿಸಿದರು.

Published by:shrikrishna bhat
First published: