• Home
  • »
  • News
  • »
  • sports
  • »
  • IND vs SA: ಸೂರ್ಯಕುಮಾರ್ ಯಾದವ್​ ಅಬ್ಬರಕ್ಕೆ ತತ್ತರಿಸಿದ ಆಫ್ರಿಕಾ, ಬೃಹತ್​ ಮೊತ್ತದ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

IND vs SA: ಸೂರ್ಯಕುಮಾರ್ ಯಾದವ್​ ಅಬ್ಬರಕ್ಕೆ ತತ್ತರಿಸಿದ ಆಫ್ರಿಕಾ, ಬೃಹತ್​ ಮೊತ್ತದ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

ಕೊಹ್ಲಿ-ಯಾದವ್

ಕೊಹ್ಲಿ-ಯಾದವ್

IND vs SA: ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತದ ಬ್ಯಾಟ್ಸ್​ಮನ್​ಗಳು ಇಂದು ಅಕ್ಷರ ಸಹ ಆಫ್ರಿಕನ್ನರನ್ನು ಕಾಡಿದ್ದಾರೆ. ಭಾರತ ತಂಡವು ನಿಗದಿತ 20 ಓವರ್​ ಗಳಲ್ಲಿ 3 ವಿಕೆಟ್​ ನಷ್ಟ್ಕಕೆ 237 ರನ್​ಗಳ ಬೃಹತ್​ ಮೊತ್ತದ ಟಾರ್ಗೆಟ್​ ನೀಡಿದೆ. 

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವಿನ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯವು ಇಂದು ಗುವಾಹಟಿಯಲ್ಲಿ ನಡೆಯುತ್ತಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ರೋಹಿತ್ ಶರ್ಮಾ ಪಡೆ (Rohit Sharma)  ಇಂದಿನ ಪಂದ್ಯ ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಈಗಾಗಲೇ ಟಾಸ್​ ಗೆದ್ದ ದಕ್ಷಿಣ ಆಪ್ರಿಕಾ (South Africa) ತಂಡದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತದ ಬ್ಯಾಟ್ಸ್​ಮನ್​ಗಳು ಇಂದು ಅಕ್ಷರ ಸಹ ಆಫ್ರಿಕನ್ನರನ್ನು ಕಾಡಿದ್ದಾರೆ. ಭಾರತ ತಂಡವು ನಿಗದಿತ 20 ಓವರ್​ ಗಳಲ್ಲಿ 3 ವಿಕೆಟ್​ ನಷ್ಟ್ಕಕೆ 237 ರನ್​ಗಳ ಬೃಹತ್​ ಮೊತ್ತದ ಟಾರ್ಗೆಟ್​ ನೀಡಿದೆ. 


ಗುವಾಹಟಿಯಲ್ಲಿ ಉದಯಿಸಿದ ಸೂರ್ಯ:


ಹೌದು, ಇಂದು ಗುವಾಹಟಿಯಲ್ಲಿ ಭಾರತೀಯ ಆಟಗಾರರು ಭರ್ಜರಿ ಬ್ಯಾಟಿಂಗ್ ಂಆಡುವ ಮೂಲಕ ಆಫ್ರಿಕಾದ ಬೌಲರ್​ಗಳ ಬೆವರಿಳಿಸಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆಎಲ್ ರಾಹುಲ್​ ಉತ್ತಮ ಓಫನಿಂಗ್ ನಿಡಿದರು. ರೋಹಿತ್​ 37 ಎಸೆತದಲ್ಲಿ 7 ಫೋರ್​ ಮತ್ತು 1 ಸಿಕ್ಸ್ ನೆರವಿನಿಂದ 43 ರನ್, ಕೆಎಲ್ ರಾಹುಲ್ 28 ಎಸೆತದಲ್ಲಿ 4 ಸಿಕ್ಸ್, 5 ಬೌಂಡರಿಯಿಂದ ಆಕರ್ಷಕ 57 ರನ್, ಗಳಿಸಿ ಉತ್ತಮ ಆರಂಭ ನೀಡಿದರು.


ಬಳಿಕ ಬಂದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಇಂದು ಗುವಾಹಟಿಯಲ್ಲಿ ಬೌಲ್​ಗೆ ಮೂಲೆ ಮೂಲೆಗಳ ದರ್ಶನ ಮಾಡಿಸಿದ್ದಾರೆ. ಈ ಅದ್ಭುತ ಇನ್ನಿಂಗ್ಸ್ ನಲ್ಲಿ ಸೂರ್ಯಕುಮಾರ್ ಯಾದವ್ 22 ಬೌಲ್​ಗೆ 5 ಸಿಕ್ಸ್ ಮತ್ತು 5 ಪೋರ್​ ಸಿಡಿಸಿ 61 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಬೌಲ್​ಗೆ 7 ಪೋರ್​ 1 ಸಿಕ್ಸ್ ಮೂಲಕ 49 ರನ್ ಗಳಿಸಿ ಅಜೇಯರಾಗಿ ಉಳಿದರೆ, ಫಿನಿಶರ್​ ಕಾರ್ತಿಕ್ 7 ಎಸೆತದಲ್ಲಿ 2 ಸಿಕ್ಸ್ 1 ಪೋರ್​ ಮೂಲಕ 17 ರನ್ ಗಳಿಸಿದರು.



ಬೌಲಿಂಗ್​ನಲ್ಲಿ ಫೇಲ್​ ಆದ ಆಫ್ರಿಕಾ:


ಇನ್ನು, ಟಾಸ್​ ಗೆದ್ದು ಮೊದಲು ಬೌಲ್ ಮಾಡಿದ ದಕ್ಷಿಣ ಆಫ್ರಿಕಾ ತೀರಾ ಕಳಪೆ ಮಟ್ಟದ ಬೌಲಿಂಗ್ ಪ್ರದರ್ಶನ ನೀಡಿತು. ಆಫ್ರಿಕಾ ಪರ ಕೇಶವರ್​ ಮಹರಾಜ್​ ಹೊರತು ಪಡಿಸಿ ಯಾವೊಬ್ಬ ಬೌಲರ್ ಸಹ ಭಾರತೀಯ ಬ್ಯಾಟ್ಸ್​ಮನ್​ಗಳ ವಿಕೆಟ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಕೇಶವ್ 4 ಓವರ್ ಮಾಡಿ 23 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದರು. ಆದರೆ ಉಳಿದ ಬೌಲರ್​ಗಳು ದಾರಾಳವಾಗಿ ಟೀಂ ಇಂಡಿಯಾಗೆ ರನ್​ ಬಿಟ್ಟುಕೊಟ್ಟರು.


ಇದನ್ನೂ ಓದಿ: Sarfaraz Khan: ಟೀಂ ಇಂಡಿಯಾಗೆ ಎಂಟ್ರಿ ಕೊಡಲಿದ್ದಾರೆ ಮತ್ತೊಬ್ಬ ಯಂಗ್​ ಪ್ಲೇಯರ್​, 29 ಪಂದ್ಯಗಳಲ್ಲಿ 10 ಶತಕ


ಭಾರತ-ದಕ್ಷಿಣ ಆಫ್ರಿಕಾ ತಂಡ: 


ಭಾರತ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಅಶ್ವಿನ್, ಅರ್ಷದೀಪ್, ಹರ್ಷಲ್ ಪಟೇಲ್, ದೀಪಕ್ ಚಹಾರ್.


ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ, ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಿಯನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ,  ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ.

Published by:shrikrishna bhat
First published: