• Home
  • »
  • News
  • »
  • sports
  • »
  • IND vs SA: ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ಆಫ್ರಿಕಾ, ಅಲ್ಪ ಮೊತ್ತಕ್ಕೆ ಕುಸಿದ ಹರಿಣಗಳು

IND vs SA: ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ಆಫ್ರಿಕಾ, ಅಲ್ಪ ಮೊತ್ತಕ್ಕೆ ಕುಸಿದ ಹರಿಣಗಳು

ಭಾರತ ತಂಡ

ಭಾರತ ತಂಡ

IND vs SA: ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಸೌತ್​ ಆಫ್ರಿಕಾ ತಂಡವು ಟೀಂ ಇಂಡಿಯಾ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿಯಿತು. ಆಫ್ರಿಕಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 106 ರನ್ ಗಳಿಸಿತು.

  • Share this:

ಆಸ್ಟ್ರೇಲಿಯಾ ವಿರುದ್ಧದ ಯಶಸ್ವಿ T20I ಸರಣಿಯ ನಂತರ, ಭಾರತವು ದಕ್ಷಿಣ ಆಫ್ರಿಕಾವನ್ನು ಮೂರು ಪಂದ್ಯಗಳ T20I ಸರಣಿಗೆ ಆತಿಥ್ಯ ವಹಿಸಲು ಸಿದ್ಧವಾಗಿದೆ. ಇಂದಿನಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಮೊದಲ ಪಂದ್ಯವು ತಿರುವನಂತಪುರ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈಗಾಗಲೇ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಸೌತ್​ ಆಫ್ರಿಕಾ ತಂಡವು ಟೀಂ ಇಂಡಿಯಾ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿಯಿತು. ಆಫ್ರಿಕಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 106 ರನ್ ಗಳಿಸುವ ಮೂಲಕಭಾರತ ತಂಡಕ್ಕೆ 107 ರನ್​​ಗಳ ಸಾಧಾರಣ ಮೊತ್ತದ ಟಾರ್ಗೆಟ್​ ನೀಡಿದೆ.


ಅಲ್ಪ ಮೊತ್ತಕ್ಕೆ ಕುಸಿದ ದಕ್ಷಿಣ ಆಫ್ರಿಕಾ:


ಆಫ್ರಿಕಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 106 ರನ್ ಗಳಿಸಿತು. ಕ್ವಿಂಟನ್ ಡಿ ಕಾಕ್ 1 ರನ್, ನಾಯಕ ಟೆಂಬಾ ಬವುಮಾ ಶೂನ್ಯ, ರಿಲೆ ರುಸ್ಸೋ ಶೂನ್ಯ, ಏಡನ್ ಮಾರ್ಕ್ರಾಮ್ 25 ರನ್​​, ಡೇವಿಡ್ ಮಿಲ್ಲರ್ ಶೂನ್ಯ, ಟ್ರಿಸ್ಟಾನ್ ಸ್ಟಬ್ಸ್ ಶೂನ್ಯ, ವೇಯ್ನ್ ಪೆರ್ನೆಲ್ 24 ರನ್, ಕೇಶವ್ ಮಹಾರಾಜ್ 41 ರನ್, ಕಗಿಸೊ ರಬಾಡ 7 ರನ್, ಅನ್ರಿಕ್ ನೋಕಿಯಾ 2 ರನ್ ಗಳಿಸುವ ಮೂಲಕ ಅಲ್ಪ ಮೊತ್ತಕ್ಕೆ ಕುಸಿಯಿತು.ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಟೀಂ ಇಂಡಿಯಾ:


ಟಾಸ್​ ಗೆದ್ದು ಮೊದಲು ಬೌಲಿಂಗ್​ ಮಾಡಿದ ಟೀಂ ಇಂಡಿಯಾ ಅದ್ಭುತ ಬೌಲಿಂಗ್​ ಮಾಡುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿತು. ಭಾರತದ ಪರ ಪವರ್ ಪ್ಲೇ ಆರಂಭದಲ್ಲಿ ದೀಪಕ್​ ಚಹರ್​ ಮತ್ತು ಆರ್ಶದೀಪ್​ ಸಿಂಗ್​ ಭರ್ಜರಿ ಬೌಲಿಂಗ್ ಮಾಡುವ ಮೂಲಕ ಆಫ್ರಿಕಾದ ಆರಂಭಿಕರನ್ನು ಫೆವೆಲಿಯನ್​ಗೆ ಅಟ್ಟಿದರು. ದೀಪಕ್ ಚಹರ್​ 4 ಓವರ್​ಗೆ 24 ರನ್​ಗೆ 2 ವಿಕೆಟ್​ ಮತ್ತು ಹರ್ಷಲ್​ ಪಟೇಲ್​ 4 ಓವರ್​ಗೆ 26 ರನ್​​ಗೆ 2 ವಿಕೆಟ್​ ಪಡೆದು ಮಿಂಚಿದರು. ಅರ್ಶದೀಪ್​ ಸಿಂಗ್​ 4 ಓವರ್​ಗೆ 32 ರನ್​ಗೆ 3 ವಿಕೆಟ್​ ಪಡೆದು ಅಬ್ಬರಿಸಿದರೆ, ಅಕ್ಷರ್​ ಪಟೇಲ್​ 1 ವಿಕೆಟ್​ ಪಡೆದು ಮಿಂಚಿದರು.


ಇದನ್ನೂ ಓದಿ: Womens Asia Cup 2022: ಮಹಿಳಾ ಏಷ್ಯಾ ಕಪ್​ 2022 ವೇಳಾಪಟ್ಟಿ ಪ್ರಕಟ, ಹೇಗಿದೆ ಟೀಂ ಇಂಡಿಯಾ ವುಮೆನ್ಸ್ ಟೀಂ?


ಭಾರತ-ಆಫ್ರಿಕಾ ಪಂದ್ಯ:


ಭಾರತ ತಂಡ:  ರೋಹಿತ್ ಶರ್ಮಾ (c), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಆರ್​. ಅಶ್ವಿನ್​, ದೀಪಕ್​ ಚಹರ್​, ಅರ್ಷ್ದೀಪ್ ಸಿಂಗ್.


ಇದನ್ನೂ ಓದಿ: Sunil Chhetri: ಇದು ರೊನಾಲ್ಡೊ, ಮೆಸ್ಸಿ ಕಥೆಯಲ್ಲ, ನಮ್ಮ ನಾಯಕ ಸುನೀಲ್​ ಛೆಟ್ರಿ ಸ್ಟೋರಿ! ಫಿಫಾದಿಂದಲೇ ಗೌರವ


ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಿಲೆ ರುಸ್ಸೋ, ಡೇವಿಡ್ ಮಿಲ್ಲರ್, ಏಡನ್ ಮಾರ್ಕ್ರಾಮ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪೆರ್ನೆಲ್, ಕಗಿಸೊ ರಬಾಡ, ಅನ್ರಿಕ್ ನೋಕಿಯಾ, ತಬರಿಜ್ ಶಮ್ಸಿ, ಕೇಶವ್ ಮಹಾರಾಜ್

Published by:shrikrishna bhat
First published: