• Home
  • »
  • News
  • »
  • sports
  • »
  • IND vs SA: ನಾಳೆ ಭಾರತ-ಆಫ್ರಿಕಾ ಮೊದಲ ಟಿ20 ಪಂದ್ಯ, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs SA: ನಾಳೆ ಭಾರತ-ಆಫ್ರಿಕಾ ಮೊದಲ ಟಿ20 ಪಂದ್ಯ, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs SA

IND vs SA

IND vs SA: ನಾಳೆಯಿಂದ ತಿರುವನಂತಪುರಂನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿ ಆರಂಭವಾಗಲಿದೆ. ಮುಂದಿನ ಎರಡು ಟಿ20 ಪಂದ್ಯಗಳು ಗುವಾಹಟಿ (ಅಕ್ಟೋಬರ್ 2) ಮತ್ತು ಇಂದೋರ್ (ಅಕ್ಟೋಬರ್ 4) ನಲ್ಲಿ ನಡೆಯಲಿವೆ.

  • Share this:

ಟಿ20 ವಿಶ್ವಕಪ್ (T20 World Cup) ಮುನ್ನ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ತವರಿನಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಈಗಾಗಲೇ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ. ಹೀಗಾಗಿ ಈ ಸರಣಿಯು ವಿಶ್ವಕಪ್​ನ ಪೂರ್ವ ಸಿದ್ಧತಾ ಪಂದ್ಯವೆಂದು ಪರಿಗಣಿಸಲಾಗಿದೆ.  ಟಿ20 ವಿಶ್ವಕಪ್​ನಂತೆ ಆಫ್ರಿಕಾ ಸರಣಿಗೂ ರೋಹಿತ್ ಶರ್ಮಾ (Rohit Sharma) ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಅಲ್ಲದೇ ಈ ಸರಣಿಯನ್ನು ಗೆದ್ದು, ಆತ್ಮವಿಶ್ವಸದಲ್ಲಿ ಭಾರತ ತಂಡ ಆಸ್ಟ್ರೇಲಿಯಾಘೆ ಪ್ರಯಾಣಿಸಲು ಸಿದ್ಧತೆ ಮಾಡಿಕೊಂಡಿದೆ. ಹಾಗಿದ್ದರೆ ಮೊದಲ ಪಂದ್ಯದ ಆರಂಭ ಸೇರಿದಂತೆ ವಿವರಗಳನ್ನು ತಿಳಿಯೋಣ ಬನ್ನಿ.


ಪಂದ್ಯದ ವಿವರ:


ಇನ್ನು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ನಾಳೆ  ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಸರಣಿಯನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.


ಟಿ20 ಮತ್ತು ಏಕದಿನ ಸರಣಿಗಾಗಿ ಆಗಮಿಸುತ್ತಿದೆ ಆಫ್ರಿಕಾ:


ಇನ್ನು, ದಕ್ಷಿಣ ಆಫ್ರಿಕಾ ತಂಡವು ಭಾರತಕ್ಕೆ ಏಕದಿನ ಮತ್ತು ಟಿ20 ಸರಣಿಗಾಗಿ ಆಗಮಿಸುತ್ತಿದೆ. ಅದರಂತೆ ಟಿ20 ಸರಣಿಯನ್ನು ಮುಗಿಸಿಕೊಂಡು ಭಾರತವು ಆಸೀಸ್​ಗೆ ಪ್ರಯಾಣಿಸಲಿದೆ. ಏಕದಿನ ಸರಣಿಗೆ ಶಿಖರ್ ಧವನ್ ನಾಯಕತ್ವವನ್ನು ವಹಿಸಕೊಳ್ಳಲಿದ್ದಾರೆ.  ಇದರ ನಡುವೆ ಟಿ20 ಸರಣಿಯಿಂದ ತಂಡದ ಸ್ಟಾರ್​ ಆಲ್​ ರೌಂಡರ್​ ಆದ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಉಳಿದಂತೆ 2 ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.


ಇದನ್ನೂ ಓದಿ: MS Dhoni: ಮಹತ್ವದ ಘೋಷಣೆ ಮಾಡಿದ ಧೋನಿ, ವಿಶ್ವಕಪ್​ ಕುರಿತು ಭವಿಷ್ಯ ನುಡಿದ ಕ್ಯಾಪ್ಟನ್​ ಕೂಲ್


ಭಾರತ Vs ದಕ್ಷಿಣ ಆಫ್ರಿಕಾ :


ಸೆಪ್ಟೆಂಬರ್ 28, 1ನೇ ಟಿ20 (ತಿರುವನಂತಪುರಂ)
ಅಕ್ಟೋಬರ್ 2, 2 ನೇ ಟಿ20 (ಗುವಾಹಟಿ)
4 ಅಕ್ಟೋಬರ್, 3ನೇ T20I (ಇಂಧೋರ್)


ಅಕ್ಟೋಬರ್ 6, 1 ನೇ ODI (ಲಕ್ನೋ)
ಅಕ್ಟೋಬರ್ 9, ಎರಡನೇ ODI (ರಾಂಚಿ)
11 ಅಕ್ಟೋಬರ್, ಮೂರನೇ ODI (ದೆಹಲಿ)


ಗ್ರೀನ್ ಫೀಲ್ಡ್ ಸ್ಟೇಡಿಯಂ ದಾಖಲೆ:


ಭಾರತ vs ನ್ಯೂಜಿಲೆಂಡ್: ನವೆಂಬರ್ 2017 - ಭಾರತ 6 ರನ್‌ಗಳಿಂದ ಗೆದ್ದಿತು
ಭಾರತ vs ವೆಸ್ಟ್ ಇಂಡೀಸ್: ಡಿಸೆಂಬರ್ 2019 - ವೆಸ್ಟ್ ಇಂಡೀಸ್ 8 ವಿಕೆಟ್‌ಗಳಿಂದ ಗೆದ್ದಿತು.


ದಾಖಲೆ ಮಾಡಲು ಸಿದ್ಧವಾಗಿದೆ ಟೀಂ ಇಂಡಿಯಾ:


ದಕ್ಷಿಣ ಆಫ್ರಿಕಾ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಐದು ಪಂದ್ಯಗಳ T20I ಸರಣಿಯನ್ನು ಆಡಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ನಿರ್ಣಾಯಕ ಪಂದ್ಯ ಮಳೆಯಿಂದಾಗಿ ರದ್ದಾಗುವುದರೊಂದಿಗೆ ಸರಣಿಯು 2-2ರಲ್ಲಿ ಕೊನೆಗೊಂಡಿತು. 2018 ರಿಂದ ತವರಿನಲ್ಲಿ ನಡೆದ T20I ದ್ವಿಪಕ್ಷೀಯ ಸರಣಿಯಲ್ಲಿ ಭಾರತವು ಇನ್ನೂ ದಕ್ಷಿಣ ಆಫ್ರಿಕಾವನ್ನು ಸೋಲಿಸಿಲ್ಲ.


ಇದನ್ನೂ ಓದಿ: ICC T20 World Cup: ಟಿ20 ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು, ಶ್ರೀಲಂಕಾ ಆಟಗಾರರ ಪ್ರಾಬಲ್ಯವೇ ಹೆಚ್ಚು


ಭಾರತ-ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ:


ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಆರ್. ಅಶ್ವಿನ್.


ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ: ಟೆಂಬಾ ಬವುಮಾ (C), ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಆನ್ರಿಚ್ ನಾರ್ಟ್ಜೆ, ಕಗಿಸೊ ರಬಡಾ, ರಿವ್ಸಿ ರಬಾಡಾ, ಟ್ರಿಸ್ಟಾನ್ ಸ್ಟಬ್ಸ್/ ಜಾರ್ನ್ ಫಾರ್ಟುಯಿನ್.

Published by:shrikrishna bhat
First published: