• Home
  • »
  • News
  • »
  • sports
  • »
  • IND vs SA ODI: ಹರಿಣಗಳನ್ನು ಹುರಿದು ಮುಕ್ಕಿದ ಟೀಂ ಇಂಡಿಯಾ ಬೌಲರ್ಸ್! 100ರ ಗಡಿ ದಾಟದೇ ತತ್ತರಿಸಿದ ಸೌತ್​​ ಆಫ್ರಿಕಾ!

IND vs SA ODI: ಹರಿಣಗಳನ್ನು ಹುರಿದು ಮುಕ್ಕಿದ ಟೀಂ ಇಂಡಿಯಾ ಬೌಲರ್ಸ್! 100ರ ಗಡಿ ದಾಟದೇ ತತ್ತರಿಸಿದ ಸೌತ್​​ ಆಫ್ರಿಕಾ!

ಕುಲದೀಪ್​ ಯಾದವ್

ಕುಲದೀಪ್​ ಯಾದವ್

IND vs SA ODI: ಭಾರತೀಯ ಬೌಲರ್​ಗಳ ದಾಳಿಗೆ  ತತ್ತರಿಸಿದ ಆಫ್ರಿಕನ್ನರು ಕೇವಲ 27.1 ಓವರ್​ಗಳಲ್ಲಿ 99 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಭಾರತ ತಂಡಕ್ಕೆ 100 ರನ್​ಗಳ ಅಲ್ಪಮೊತ್ತದ ಟಾರ್ಗೆಟ್​ ನೀಡಿದೆ.

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವೆ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ (Arun Jaitley Stadium) ನಡೆಯುತ್ತಿದೆ. ಈಗಾಗಲೇ ಟಾಸ್​ ಗೆದ್ದಿರುವ ಭಾರತ ತಂಡದ ನಾಯಕ ಶಿಖರ್ ಧವನ್ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು, ದಕ್ಷಿಣ ಆಫ್ರಿಕಾ ತಂಡವು ಮೊದಲು ಬ್ಯಾಟಿಂಗ್​ ಆರಂಭಿಸಿತು. ಆದರೆ ಭಾರತೀಯ ಬೌಲರ್​ಗಳ ದಾಳಿಗೆ  ತತ್ತರಿಸಿದ ಆಫ್ರಿಕನ್ನರು ಕೇವಲ 27.1 ಓವರ್​ಗಳಲ್ಲಿ 99 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಭಾರತ ತಂಡಕ್ಕೆ 100 ರನ್​ಗಳ ಅಲ್ಪಮೊತ್ತದ ಟಾರ್ಗೆಟ್​ ನೀಡಿದೆ. ಭಾರತದ ಪರ ಕುಲದೀಪ್​ ಯಾದವ್​ ಭರ್ಜರಿ ಬೌಲಿಂಗ್  ದಾಳಿ ಮಾಡಿ ಪ್ರಮುಖ 4 ವಿಕೆಟ್​ ಪಡೆದರು.


ಕುಲದೀಪ್​ ದಾಳಿಗೆ ಆಫ್ರಿಕಾ ತತ್ತರ:


ಇನ್ನು, ಟಾಸ್​ ಗೆದ್ದು ಮೊದಲು ಬೌಲಿಂಗ್​ ಆರಂಭಿಸಿದ ಭಾರತೀಯರು. ಇಂದು ಆಫ್ರಿಕನ್ನರನ್ನು ಇನ್ನಿಲ್ಲದಂತೆ ಕಾಡಿದರು. ಭಾರತೀಯರ ದಾಳಿಗೆ ಉತ್ತರವಿಲ್ಲದೇ ಹರಿಣಗಳು ಫೆವೆಲಿಯನ್​ ಹಾದಿ ಹಿಡಿದರು. ಭಾರತದ ಪರ ಕುಲದೀಪ್​ ಯಾವದ್ 3.3 ಓವರ್​ಗಳಲ್ಲಿ 18 ರನ್ ನೀಡಿ ಪ್ರಮುಖ 4 ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ವಾಷಿಂಗ್ಟನ್​ ಸುಂದರ್​ 4 ಓವರ್​ಗೆ 15 ರನ್ ನೀಡಿ 2 ವಿಕೆಟ್​, ಮೊಹಮ್ಮದ್ ಸಿರಾಜ್ 5 ಓವರ್​ಗೆ 17 ರನ್ ನೀಡಿ 2 ವಿಕೆಟ್​ ಮತ್ತು ಶಹಬಾದ್​ ಅಹ್ಮದ್​ 7 ಓವರ್​ಗೆ 32 ರನ್​ ನೀಡಿ 2 ವಿಕೆಟ್​ ಪಡೆದು ಮಿಂಚಿದರು.ಅಲ್ಪ ಮೊತ್ತಕ್ಕೆ ಕುಸಿದ ಆಫ್ರಿಕಾ:


ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಆಫ್ರಿಕಾ ಕೇವಲ 27.1 ಓವರ್​ಗಳಲ್ಲಿ 99 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಭಾರತ ತಂಡಕ್ಕೆ 100 ರನ್​ಗಳ ಅಲ್ಪಮೊತ್ತದ ಟಾರ್ಗೆಟ್​ ನೀಡಿದೆ. ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ 6 ರನ್, ಜಾನ್ನೆಮನ್ ಮಲನ್ 15 ರನ್, ರೀಜಾ ಹೆಂಡ್ರಿಕ್ಸ್ 3 ರನ್, ಐಡೆನ್ ಮಾರ್ಕ್ರಾಮ್ 9 ರನ್, ಹೆನ್ರಿಕ್ ಕ್ಲಾಸೆನ್ 34 ರನ್, ಡೇವಿಡ್ ಮಿಲ್ಲರ್ 7 ರನ್, ಮಾರ್ಕೊ ಯಾನ್ಸೆನ್ 14 ರನ್, ಅಂಡಿಲ್ಲೆ ಫೇಹುಲಕಾವೋ 5 ರನ್, ಇಮಾಧ್ 1 ರನ್ ಮತ್ತು ಎನ್ರಿಚ್ ಮತ್ತು ಲುಂಗಿ ಎನ್​ಗಿಡಿ ಶೂನ್ಯಕ್ಕೆ ಔಟ್​ ಆದರು.ಭಾರತ ಮತ್ತು ಆಫ್ರಿಕಾ ಪ್ಲೇಯಿಂಗ್​ 11:


ಭಾರತ ತಂಡ: ಶಿಖರ್ ಧವನ್ (ನಾಯಕ) , ಶುಭಮನ್ ಗಿಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ವಾಷಿಂಗ್ಟನ್ ಸುಂದರ್ , ಶಹಬಾಜ್ ಅಹ್ಮದ್ , ಶಾರ್ದೂಲ್ ಠಾಕೂರ್ , ಕುಲದೀಪ್ ಯಾದವ್ , ಮೊಹಮ್ಮದ್ ಸಿರಾಜ್ , ಅವೇಶ್ ಖಾನ್.


ಇದನ್ನೂ ಓದಿ: Cristiano Ronaldo: 944 ಪಂದ್ಯ, 700 ಗೋಲು; ಫುಟ್ಬಾಲ್​ ಲೋಕದಲ್ಲಿ ಮತ್ತೊಂದು ದಾಖಲೆ ಬರೆದ ರೊನಾಲ್ಡೊ


ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ , ಜಾನ್ನೆಮನ್ ಮಲನ್ , ರೀಜಾ ಹೆಂಡ್ರಿಕ್ಸ್ , ಐಡೆನ್ ಮಾರ್ಕ್ರಾಮ್ , ಹೆನ್ರಿಕ್ ಕ್ಲಾಸೆನ್ , ಡೇವಿಡ್ ಮಿಲ್ಲರ್ (ನಾಯಕ) , ಮಾರ್ಕೊ ಯಾನ್ಸೆನ್ , ಆಂಡಿಲ್ ಫೆಹ್ಲುಕ್ವಾಯೊ , ಜೋರ್ನ್ ಫೋರ್ಚುಯಿನ್ , ಲುಂಗಿ ಎನ್ಗಿಡಿ , ಅನ್ರಿಕ್ ನೋಕಿಯಾ.

Published by:shrikrishna bhat
First published: