• Home
  • »
  • News
  • »
  • sports
  • »
  • IND vs SA ODI: ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರನಿಗೆ ಉಪನಾಯಕನ ಪಟ್ಟ?

IND vs SA ODI: ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರನಿಗೆ ಉಪನಾಯಕನ ಪಟ್ಟ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs SA ODI: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ (ODI Series) ಭಾರತ ತಂಡವನ್ನು ಬಿಸಿಸಿಐ (BCCI) ಸದ್ಯದಲ್ಲಿಯೇ ಪ್ರಕಟಿಸಲಿದೆ. ಈ ತಂಡದಲ್ಲಿ ಈಗಾಗಲೇ ತಿಳಿದಿರುವಂತೆ ನಾಯಕನಾಗಿ ಶಿಖರ್ ಧವನ್ (Shikhar Dhawan) ಆಯ್ಕೆ ಆಗುವ ಸಾಧ್ಯತೆ ಇದೆ.

  • Share this:

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ (IND vs SA) ವಿರುದ್ಧ ಟಿ20 ಆಡಲಿದೆ. ಇಂದಿನಿಂದ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಆರಂಭವಾಗಲಿದೆ. ಇದರ ಬಳಿಕ ಏಕದಿನ ಸರಣಿ ಆಡಲಿದೆ. ಆದರೆ ಟಿ20 ಸರಣಿ ಬಳಿಕ ಟೀಂ ಇಂಡಿಯಾ ಆಟಗಾರರು ಟಿ20 ವಿಶ್ಚಕಪ್ಗಾಗಿ ಆಸ್ಟ್ರೇಲಿಯಾಗೆ ಹಾರಲಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ (ODI Series) ಭಾರತ ತಂಡವನ್ನು ಬಿಸಿಸಿಐ (BCCI) ಸದ್ಯದಲ್ಲಿಯೇ ಪ್ರಕಟಿಸಲಿದೆ. ಈ ತಂಡದಲ್ಲಿ ಈಗಾಗಲೇ ತಿಳಿದಿರುವಂತೆ ನಾಯಕನಾಗಿ ಶಿಖರ್ ಧವನ್ (Shikhar Dhawan) ಆಯ್ಕೆ ಆಗುವ ಸಾಧ್ಯತೆ ಇದೆ. ಅಲ್ಲದೇ ಉಪ ನಾಯಕಕನ ಪಟ್ಟಕ್ಕೆ ಸ್ಟಾರ್ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಸಂಜು ಸ್ಯಾಮ್ಸನ್​ಗೆ ಉಪನಾಯಕನ ಪಟ್ಟ?:


ಹೌದು, ಟಿ20 ವಿಶ್ವಕಪ್​ಗೆ ಈಗಾಗಲೆ ಟೀಂ ಇಂಡಿಯಾ ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಆದರೆ ಈ ತಂಡದಲ್ಲಿ ಸಂಜು ಸ್ಯಾಮ್ಸನ್ ಗೆ ಸ್ಥಾನ ನೀಡದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಸಂಜು ಫ್ಯಾನ್ಸ್ ಬಿಸಿಸಿಐ ವಿರುದ್ಧ ಕಿಡಿಕಾರಿದ್ದರು. ಹೀಗಾಗಿ ಸಂಜು ಸ್ಯಾಮ್ಸನ್ ಅವರನ್ನು ಕಿವೀಸ್ ವಿರುದ್ಧದ A ತಂಡಕ್ಕೆ ನಾಕರನ್ನಾಗಿ ಆಯ್ಕೆ ಮಾಡಿತ್ತು. ಅದರಂತೆ ಇದೀಗ ಸಂಜು ಅವರ ಅಭಿಮಾನಿಗಳಿಗೆ ಕೊಂಚ ಸಂತಸ ನೀಡುವ ಸಲುವಾಗಿ ಬಿಸಿಸಿಐ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಸಂಜು ಅವರನ್ನು ಉಪ ನಾಯಕಕರನ್ನಾಗಿ ಆಯ್ಕೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದರಂತೆ ತಂಡದ ನಾಯಕರನ್ನಾಗಿ ಶಿಖರ್ ಧವನ್ ಅವರನ್ನು ಆಯ್ಕೆ ಮಾಡಲಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.


ಸ್ಟಾರ್​ ಆಟಗಾರರ ಅಲಭ್ಯತೆ:


ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಪ್ರಮುಖ ಆಟಗಾರರನ್ನು ಕಳೆದುಕೊಂಡಿರುವುದರಿಂದ, ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು. ಪಿಟಿಐ ವರದಿಯ ಪ್ರಕಾರ, ಭಾರತದ ಸ್ಟಾರ್ ಆಟಗಾರ ದೀಪಕ್ ಹೂಡಾ ಗಾಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರೆ, ಬೌಲರ್ ಮೊಹಮ್ಮದ್ ಶಮಿ ಕೊರೋನಾ ವೈರಸ್‌ನಿಂದ ಹೊರಗುಳಿದಿದ್ದಾರೆ. ಅಲ್ಲದೆ, ಆಟಗಾರ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಈ ಪ್ರಮುಖ ಆಟಗಾರರು ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ, ಆದ್ದರಿಂದ ತಂಡವು ಅವರಿಲ್ಲದೆ ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡಬೇಕಾಗಿದೆ.


ಇದನ್ನೂ ಓದಿ: IND vs SA: ನಾಳೆ ಭಾರತ-ಆಫ್ರಿಕಾ ಮೊದಲ ಟಿ20 ಪಂದ್ಯ, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್​ 11


ಭಾರತ Vs ದಕ್ಷಿಣ ಆಫ್ರಿಕಾ ಏಕದಿನ ಸರಣಿ ವೇಳಾಪಟ್ಟಿ:


1ನೇ ಏಕದಿನ ಪಂದ್ಯ: ಅಕ್ಟೋಬರ್ 6, ಲಕ್ನೋ
2ನೇ ಏಕದಿನ ಪಂದ್ಯ: ಅಕ್ಟೋಬರ್ 9, ರಾಂಚಿ
3ನೇ ಏಕದಿನ ಪಂದ್ಯ: 11 ಅಕ್ಟೋಬರ್, ದೆಹಲಿ


ಇದನ್ನೂ ಓದಿ: Explained: ಎಂ ಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಲೆಜೆಂಡ್ಸ್ ಟೂರ್ನಿ ಏಕೆ ಆಡುತ್ತಿಲ್ಲ? ಇಲ್ಲಿದೆ ಫುಲ್ ಡೀಟೇಲ್ಸ್


ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಸಂಭಾವ್ಯ ಭಾರತ ತಂಡ:


ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಪೃಥ್ವಿ ಶಾ, ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಪ್ರಸಿದ್ಧ್ ಕೃಷ್ಣ , ಕುಲದೀಪ್ ಸೇನ್

Published by:shrikrishna bhat
First published: