• Home
  • »
  • News
  • »
  • sports
  • »
  • IND vs SA: ಬೆಂಗಳೂರಲ್ಲಿ ಭಾರತ - ಆಫ್ರಿಕಾ ಫೈನಲ್ ಫೈಟ್, ಇತಿಹಾಸ ಸೃಷ್ಟಿಸುತ್ತಾ ಟೀಂ ಇಂಡಿಯಾ?

IND vs SA: ಬೆಂಗಳೂರಲ್ಲಿ ಭಾರತ - ಆಫ್ರಿಕಾ ಫೈನಲ್ ಫೈಟ್, ಇತಿಹಾಸ ಸೃಷ್ಟಿಸುತ್ತಾ ಟೀಂ ಇಂಡಿಯಾ?

IND vs SA

IND vs SA

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಐದನೇ ಹಾಗೂ ಕೊನೆಯ ಟಿ20 (5th T20) ಪಂದ್ಯವು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆಯಲಿದೆ.

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಐದನೇ ಹಾಗೂ ಕೊನೆಯ ಟಿ20 (5th T20) ಪಂದ್ಯವು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆಯಲಿದೆ. ಈಗಾಗಲೇ ಟೂರ್ನಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 2-2 ರ ಸಮಬಲ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯ ನಿರ್ಣಾಯಕವಾಗಿದ್ದು, ಕೊನೆಯ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯನ್ನು ಗೆಲ್ಲಲಿದೆ. ಹೀಗಾಗಿ ಇಂದಿನ ಕೊನೆಯ ಟಿ20 ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.  ಇನ್ನು, ಸತತ 2 ಗೆಲುವುಗಳನ್ನು ಕಂಡಿರುವ ರಿಷಭ್ ಪಂತ್ (Rishabh pant) ನಾಯಕತ್ವದ ಟೀಂ ಇಂಡಿಯಾ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಳ್ಳಲು ಎದುರು ನೋಡುತ್ತಿದೆ.


ಪಂದ್ಯದ ವಿವರ:


ಇನ್ನು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯವು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆಯಲಿದೆ. ಪಂದ್ಯದ ಟಾಸ್​ ಸಂಜೆ 6:30ಕ್ಕೆ ಹಾಗೂ ಪಂದ್ಯವು 7 ಗಂಟೆಗೆ ಆರಂಭವಾಗಲಿದೆ. ಇದರ ನಡುವೆ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಆಗುತ್ತಿರುವುದರಿಂದ ಪಂದ್ಯಕ್ಕೆ ವರುಣನು ಅಡ್ಡಿ ಪಡಿಸುವ ಸಾಧ್ಯತೆಗಳೂ ಇವೆ.


ಪಿಚ್ ವರದಿ:


ಚಿಕ್ಕ ಬೌಂಡರಿಗಳು ಇವರುವುದರಿಂದ ಚಿನ್ನಸ್ವಾಮಿ ಮೈದಾನ ಬ್ಯಾಟಿಂಗ್ ಗೆ ಉತ್ತಮವಾಗಿದೆ. ಇದರಿಂದ ಇಂದಿನ ಪಂದ್ಯದಲ್ಲಿ ದೊಡ್ಡ ಮೊತ್ತದ ಸ್ಕೋರ್ ಬರುವ ನಿರೀಕ್ಷೆಗಳಿವೆ. ಆದರೂ ಸ್ಪಿನ್ನರ್‌ ಗಳಿಗೂ ಮೈದಾನ ಉತ್ತಮವಾಗಿದ್ದು, ಬ್ಯಾಟರ್​ಗಳಿಗೆ ಸ್ಪಿನ್ನರ್​ಗಳು ಉತ್ತಮ ಪ್ರತಿರೋಧ ಒಡ್ಡುವ ಸಾಧ್ಯತೆಯಿದೆ. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಶೇ.70ರಷ್ಟು ಮಳೆ ಆಗುವ ಸಂಬವವಿದೆ ಎನ್ನಲಾಗಿದ್ದು, ಪಂದ್ಯದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.


ಇದನ್ನೂ ಓದಿ: IND vs SA: ಬೆಂಗಳೂರಲ್ಲಿ ಭಾರತ - ದಕ್ಷಿಣ ಆಫ್ರಿಕಾ ಮುಖಾಮುಖಿ, ಚಿನ್ನಸ್ವಾಮಿ ಸುತ್ತ ಸಂಚಾರ ನಿರ್ಬಂಧ


ಇತಿಹಾಸ ಸೃಷ್ಟಿಸಲಿದೆಯಾ ಟೀಂ ಇಂಡಿಯಾ?:


ಇನ್ನು, 5 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಈಗಾಗಲೇ 2-2 ಪಂದ್ಯಗಳ ಗೆಲುವಿನಿಂದ ಸಮಬಲ ಸಾಧಿಸಿದೆ. ಇದರ ನಡುವೆ ಇಂದಿನ ಪಂದ್ಯವು ನಿರ್ಣಾಯಕವಾಗಿದ್ದು, ಎರಡೂ ತಂಡಗಳು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ. ಅಲ್ಲದೇ ಭಾರತ ತಂಡ ಇಂದಿನ ಪಂದ್ಯ ಗೆದ್ದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ. ಹೌದು, ಈವರೆಗೂ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ದ್ವಿಪಕ್ಷೀಯ T20I ಸರಣಿಯನ್ನೂ ಗೆದ್ದಲ್ಲಿ. ಹೀಗಾಗಿ ಇಂದಿನ ಪಂದ್ಯ ಗೆಲ್ಲುವುದರೊಂದಿಗೆ ಹೊಸ ಇತಿಹಾಸವನ್ನು ಭಾರತ ತಂಡ ಮಾಡಲಿದೆಯಾ ಎಂದು ಕಾದು ನೋಡಬೇಕಿದೆ.


ಇದನ್ನೂ ಓದಿ: Shah Rukh Khan: ಶಾರುಖ್ ಈಗ ಮಹಿಳಾ ಕ್ರಿಕೆಟ್ ತಂಡದ ಮಾಲೀಕ, ಕೆರಿಬಿಯನ್​ ಲೀಗ್​ಗೂ ಕಾಲಿಟ್ಟ SRK


ಭಾರತ ಮತ್ತು ಆಫ್ರಿಕಾ ಸಂಭಾವ್ಯ ತಂಡ:


ಭಾರತ ತಂಡ:  ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (c & wk), ಹಾರ್ದಿಕ್ ಪಾಂಡ್ಯ  ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್.


ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್ / ಟೆಂಬಾ ಬವುಮಾ (ಸಿ), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡ್ವೈನ್ ಪ್ರಿಟೋರಿಯಸ್, ಹೆನ್ರಿಕ್ ಕ್ಲಾಸೆನ್ (ವಾಕ್), ಡೇವಿಡ್ ಮಿಲ್ಲರ್, ತಬ್ರೈಜ್ ಶಮ್ಸಿ, ಲುಂಗಿ ಎನ್‌ಗಿಡಿ, ಕಗಿಸೊ ರಬಾಡ, ಕೇಶವ್ ಮಹಾರಾಜ್, ಅನ್ರಿಚ್ ನಾರ್ಟ್ಜೆ.

Published by:shrikrishna bhat
First published: