IND vs SA: ಹರ್ಷಲ್ ಪಟೇಲ್ ಅಬ್ಬರಕ್ಕೆ ತತ್ತರಿಸಿದ ಆಫ್ರಿಕಾ, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ

ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್​ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 131 ರನ್ ಗಳಿಸುವ ಮೂಲಕ 48 ರನ್​ ಗಳ ಸೋಲನ್ನಪ್ಪಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲು ಗೆಲುವು ದಾಖಲಿಸಿತು. ಈ ಮೂಲಕ 2-1 ಅಂತರದ ಗೆಲುವು ಉಭಯ ತಂಡಗಳು ಸಾದಿಸಿವೆ.

ಭಾರತ ತಂಡಕ್ಕೆ ಗೆಲುವು

ಭಾರತ ತಂಡಕ್ಕೆ ಗೆಲುವು

  • Share this:
ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಮೂರನೇ ಟಿ20 (3rd T20) ಪಂದ್ಯವು ಇಂದು ವಿಶಾಖಪಟ್ಟಣದ ರಾಜಶೇಖರ ರೆಡ್ಡಿ ವಿಸಿಎ ಕ್ರೀಡಾಂಗಣದಲ್ಲಿ (Dr. Y.S.R. ACA VDCA Cricket Stadium) ನಡೆಯಿತು. ಸರಣಿಯ 3ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬೌಮಾ (Temba Bavuma) ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಮೂಲಕ ಮೊದಲು ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ (Rishabh Pant) ನಾಯಕತ್ವದ ಟಿಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ನಿಗದಿತ 19.1 ಓವರ್​ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 131 ರನ್ ಗಳಿಸುವ ಮೂಲಕ 48 ರನ್​ ಗಳ ಸೋಲನ್ನಪ್ಪಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲು ಗೆಲುವು ದಾಖಲಿಸಿತು. ಈ ಮೂಲಕ 2-1 ಅಂತರದ ಗೆಲುವು ಉಭಯ ತಂಡಗಳು ಸಾದಿಸಿವೆ.

ಅಬ್ಬರಿಸಿದ ಟೀಂ ಇಂಡಿಯಾ ಆರಂಭಿಕರು:

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ ನಾಯಕತ್ವದ ಟಿಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಟೀಂ ಇಂಡಿಯಾ ಆರಂಭಿಕರು ಇಂದಿನ ಪಂದ್ಯದಲ್ಲಿ ಅಬ್ಬರಿಸಿದರು. ರುತುರಾಜ್ ಗಾಯಕ್ವಾಡ 35 ಎಸೆತದಲ್ಲಿ 2 ಸಿಕ್ಸ್ 7 ಫೋರ್​ ಮೂಲಕ 57 ರನ್ ಗಳಿಸಿದರು. ಇಶಾನ್ ಕಿಶನ್ 35 ಎಸೆತದಲ್ಲಿ 2 ಸಿಕ್ಸ್ ಮತ್ತು 5 ಫೋರ್​ ಮೂಲಕ 54 ರನ್ ಗಳಿಸುವ ಮೂಲಕ ಉತ್ತಮ ಆರಂಭವನ್ನು ಒದಗಿಸಿದರು. ಉಳಿದಂತೆ ಶ್ರೇಯಸ್​ ಐಯ್ಯರ್ 14 ರನ್, ನಾಯಕ ರಿಷಭ್ ಪಂತ್ 6 ರನ್, ಹಾರ್ದಿಕ್ ಪಾಂಡ್ಯ 31 ರನ್ ದಿನೇಶ್ ಕಾರ್ತಿಕ್ 6 ರನ್ ಮತ್ತು ಅಕ್ಷರ್ ಪಟೇಲ್ 5 ರನ್ ಗಳಸಿ ಮಿಂಚಿದರು.





ಬೌಲಿಂಗ್​ನಲ್ಲಿ ಎಡವಿದ ಆಫ್ರಿಕಾ:

ಇನ್ನು, ಟಾಸ್​ ಗೆದ್ದು ಮೊದಲು ಬೌಲಿಂಗ್ ಮಾಡಿದ ಆಫ್ರಿಕಾ ಬೌಲರ್​ ಗಳ ಬೆವರಿಳಿಸಿದ ಟೀಂ ಇಂಡಿಯಾ ಬ್ಯಾಟರ್​ಗಳು ಉತ್ತಮ ಮೊತ್ತ ಕಲೆಹಾಕಿದರು. ಆಫ್ರಿಕಾ ಪರ ಡ್ವೈನ್ 2 ವಿಕೆಟ್, ಕಗಿಸೋ ರಬಾಡಾ, ಟರ್ಬಾಸಿ ಮತ್ತು ಕೇಶವ್ ಮಹರಾಜ್ ತಲಾ 1 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: Anushka Sharma: ಮತ್ತೆ ಗುಡ್ ನ್ಯೂಸ್ ಕೊಡಲಿದ್ದಾರಾ ವಿರಾಟ್ -ಅನುಷ್ಕಾ ಜೋಡಿ? ಅನುಮಾನ ಹುಟ್ಟಿಸಿದ ವೈರಲ್ ವಿಡಿಯೋ

ಮೊದಲ ಸೋಲುಂಡ ಸೌತ್ ಆಫ್ರಿಕಾ:

179 ರನ್ ಗಳ ಮೊತ್ತ ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡವು ನಿಗದಿತ 19.1 ಓವರ್​ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 131 ರನ್ ಗಳಿಸುವ ಮೂಲಕ 48 ರನ್​ ಗಳ ಸೋಲನ್ನಪ್ಪಿತು. ದಕ್ಷಿಣ ಆಫ್ರಿಕಾ ಪರ ಟಿಂಬ ಬುವಾಮಾ 8 ರನ್, ಹೆಂಡ್ರಿಕ್ಸ್ 23 ರನ್, ಡ್ವೈನ್ 20 ರನ್, ವಾನ್​ ಡೆರ್ ಡುಸೇನಾ 1 ರನ್, ಹೆನ್ರಿಚ್ 29 ರನ್, ಡೇವಿಡ್ ಮಿಲ್ಲರ್ 3 ರನ್, ಪರ್ನೆಲಾ 9 ರನ್, ಕೇಶವ್ ಮಹಾರಾಜ್ 11 ರನ್ ಗಳಿಸಿಸುವ ಮೂಲಕ ತಂಡವು ಸೋಲನ್ನಪ್ಪಿತು.

ಇದನ್ನೂ ಓದಿ: Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ಧ ಅತ್ಯಾಚಾರ ಪ್ರಕರಣ, ಕೋರ್ಟ್ ತೀರ್ಪು ಪ್ರಕಟ

ಅಬ್ಬರಿಸಿದ ಹರ್ಷಲ್ ಪಟೇಲ್:

ಇನ್ನು, ಟೀಂ ಇಂಡಿಯಾ ಪರ ಹರ್ಷಲ್ ಪಟೇಲ್ 3.1 ಓವರ್ ಮಾಡಿ 25 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಚಹಾಲ್ 4 ಓವರ್ ಮಾಡಿ 20 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಭುವನೇಶ್ವರ್ ಕುಮಾರ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.
Published by:shrikrishna bhat
First published: