IND vs SA: ಭಾರತ - ಸೌತ್ ಆಫ್ರಿಕಾ 3ನೇ ಟಿ20 ಮ್ಯಾಚ್​, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲುತ್ತಾ ಟೀಂ ಇಂಡಿಯಾ?

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಮೂರನೇ ಟಿ20 (3rd T20) ಪಂದ್ಯವು ಇಂದು ವಿಶಾಖಪಟ್ಟಣದ ರಾಜಶೇಖರ ರೆಡ್ಡಿ ವಿಸಿಎ ಕ್ರೀಡಾಂಗಣದಲ್ಲಿ (Dr. Y.S.R. ACA VDCA Cricket Stadium) ನಡೆಯಲಿದೆ.

IND vs SA

IND vs SA

  • Share this:
ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಮೂರನೇ ಟಿ20 (3rd T20) ಪಂದ್ಯವು ಇಂದು ವಿಶಾಖಪಟ್ಟಣದ ರಾಜಶೇಖರ ರೆಡ್ಡಿ ವಿಸಿಎ ಕ್ರೀಡಾಂಗಣದಲ್ಲಿ (Dr. Y.S.R. ACA VDCA Cricket Stadium) ನಡೆಯಲಿದೆ. ಇಂದಿನ ಪಂದ್ಯವು ಟೀಂ ಇಂಡಿಯಾ (Team India) ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಸೋತಿದ್ದು, ದಕ್ಷಿಣ ಆಫ್ರಿಕಾ 2-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ ಮನ್ ಗಳು ಅದ್ಭುತ ಪ್ರದರ್ಶನ ನೀಡಿ 210ಕ್ಕೂ ಹೆಚ್ಚು ರನ್ ಗಳಿಸಿದ್ದರೂ ಬೌಲರ್ ಗಳು ನಿರಾಸೆ ಮೂಡಿಸಿದರು. ಎರಡನೇ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ವಿಫಲವಾಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಸಂಘಟಿತ ಆಟದ ಅನಿವಾರ್ಯತೆ ಇದೆ. ಇಂದಿನ ಪಂದ್ಯ ಗೆದ್ದಲ್ಲಿ ಮಾತ್ರ ಭಾರತ ತಂಡ ಸರಣಿಯಲ್ಲಿ ಜೀವಂತವಾಗಿರಲಿದೆ. ಇದರ ನಡುವೆ ರಿಷಭ್ ಪಂತ್ (Rishabh pant) ನಾಯಕತ್ವದಲ್ಲಿ ಮೊದಲೆರಡು ಪಂದ್ಯಗಳನ್ನು ಸೋತಿರುವ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲಿ ಏನಾದರೂ ಬದಲಾವಣೆ ಮಾಡಲಿದೆಯಾ ಎಂದು ಕಾದು ನೋಡಬೇಕಿದೆ.

ಪಂದ್ಯದ ವಿವರ:

ಇನ್ನು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯವು ಇಂದು ವಿಶಾಖಪಟ್ಟಣದ ರಾಜಶೇಖರ ರೆಡ್ಡಿ  ವಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯದ ಟಾಸ್​ ಸಂಜೆ 6:30ಕ್ಕೆ ಹಾಗೂ ಪಂದ್ಯವು 7 ಗಂಟೆಗೆ ಆರಂಭವಾಗಲಿದೆ.

ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ:

ಇನ್ನು, ಸತತ 2 ಸೋಲುಗಳಿಂದ ಕಂಗೆಟ್ಟಿರುವ ಟೀಂ ಇಂಡಿಯಾಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ. ಸರಣಿಯಲ್ಲಿ ಜೀವಂತವಾಗಿರಲು ಭಾರತ ತಂಡ ಇಂದು ಸೌತ್ ಆಫ್ರಿಕಾ ವಿರುದ್ಧ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ ಭಾರತ ತಂಡದಲ್ಲಿ ಇಂದು ಕೆಲ ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಮೊದಲೆರಡು ಪಂದ್ಯಗಳಲ್ಲಿ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ವಿಫಲರಾಗುದ್ದಾರೆ. ಆದರೆ ಇಶನ್ ಕಿಶನ್ ಜೊತೆ ವೆಂಕಟೇಶ್ ಅಯ್ಯರ್ ಖಾತೆ ತೆರೆಯುವುದು ಅಷ್ಟು ಸೂಕ್ತವಲ್ಲ ಎನ್ನಲಾಗುತ್ತಿದೆ.

ಐಪಿಎಲ್ 2022ರಲ್ಲಿ ವೆಂಕಟೇಶ್ ಅಯ್ಯರ್ ಅವರ ಪ್ರದರ್ಶನವೂ ಕಳಪೆಯಾಗಿತ್ತು, ಆದ್ದರಿಂದ ಆತ್ಮವಿಶ್ವಾಸದ ಕೊರತೆಯಿರುವ ಅಯ್ಯರ್‌ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ. ಅವೇಶ್ ಖಾನ್ ಎರಡೂ ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರ ಸ್ಥಾನಕ್ಕೆ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಅವಕಾಶ ನೀಡಬಹುದು. ಜೊತೆಗೆ ರವಿ ಬಿಷ್ಣೋಯ್ ಆಯ್ಕೆ ತಂಡಕ್ಕೆ ಲಭ್ಯವಿದೆ.

ಇದನ್ನೂ ಓದಿ: IPL Media Rights: ಒಂದು ಪಂದ್ಯಕ್ಕೆ 107.5 ಕೋಟಿಗೆ ಮಾರಾಟವಾಯ್ತು ಐಪಿಎಲ್ ಪ್ರಸಾರ ಹಕ್ಕು!

ಸರಣಿ ಮುನ್ನಡೆಯಲ್ಲಿ ಆಫ್ರಿಕಾ:

1 ಮತ್ತು 2ನೇ  T20I ಗೆದ್ದ ನಂತರ ದಕ್ಷಿಣ ಆಫ್ರಿಕಾ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳಿಂದ ಟೀಂ ಇಂಡಿಯಾವನ್ನು ಸೋಲಿಸಿತ್ತು. ನಂತರ 2ನೇ ಪಂದ್ಯದಲ್ಲಿಯೂ ಸೌತ್​ ಆಫ್ರಿಕಾ 4 ವಿಕೆಟ್​ಗಳ ಜಯ ದಾಖಲಿಸಿತ್ತು. ಹೀಗಾಗಿ ಇಂದಿನ ಪಂದ್ಯವು ಭಾರತಕ್ಕೆ ತುಂಬಾ ಅವಶ್ಯಕವಾಗಿದೆ. ಆಫ್ರಿಕಾ ಸರಣಿಯಲ್ಲಿ ಇನ್ನೊಂದು ಗೆಲುವಿನ ಮೂಲಕ ಸರಣಿಯನ್ನು ಕೈ ವಶ ಮಾಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: IND vs SA: ಭಾರತ - ಸೌತ್ ಆಫ್ರಿಕಾ 2ನೇ ಟಿ20 ಪಂದ್ಯ, ಸೇಡು ತೀರಿಸಿಕೊಳ್ಳುವ ತವಕದಲ್ಲಿ ಭಾರತ

ಭಾರತ ಮತ್ತು ಆಫ್ರಿಕಾ ಸಂಭಾವ್ಯ ತಂಡ:

ಭಾರತ ತಂಡ: ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್/ವ್ಯಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್/ರವಿ ಬಿಷ್ಣೋಯ್, ಅವೇಶ್ ಖಾನ್/ಅರ್ಷದೀಪ್ ಸಿಂಗ್.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ಸಿ), ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ.
Published by:shrikrishna bhat
First published: