• Home
  • »
  • News
  • »
  • sports
  • »
  • IND vs SA ODI: ಮತ್ತೆ ಅಬ್ಬರಿಸಿದ ಮಿಲ್ಲರ್, ಟೀಂ ಇಂಡಿಯಾಗೆ 250 ರನ್​​ಗಳ ಟಾರ್ಗೆಟ್​

IND vs SA ODI: ಮತ್ತೆ ಅಬ್ಬರಿಸಿದ ಮಿಲ್ಲರ್, ಟೀಂ ಇಂಡಿಯಾಗೆ 250 ರನ್​​ಗಳ ಟಾರ್ಗೆಟ್​

IND vs SA ODI

IND vs SA ODI

IND vs SA 1st ODI: ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆಫ್ರಿಕಾ ನಿಗದಿತ 40 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಗಳಿಸುವ ಮೂಲಕ ಭಾರತ ತಂಡಕ್ಕೆ 250 ರನ್ ಗಳ ಟಾರ್ಗೆಟ್​ ನೀಡಿದೆ.

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಮೊದಲ ಏಕದಿನ ಪಂದ್ಯಕ್ಕೆ (ODI Match) ಕೊನೆಗೂ ಮಳೆ ನಿಂತಿರುವ ಕಾರಣ ಪಂದ್ಯ ಆರಂಭವಾಗಿದೆ. ಲಕ್ನೋದ ಇಕಾನಾ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಆರಂಭದಲ್ಲಿ ಮಳೆ ಅಡ್ಡಿಯಾಯಿತು. ಹೀಗಾಗಿ ಪಂದ್ಯ ತಡವಾಗಿ ಆರಂಭವಾಗಿದ್ದು,  ಎರಡೂ ತಂಡಗಳಿಗೂ 40 ಓವರ್​ ಗಳ ಪಂದ್ಯವನ್ನು ನಡೆಸಲಾಗುತ್ತಿದೆ. ಈಗಾಗಲೇ ಟಾಸ್​ ಗೆದ್ದಿರುವ ಭಾರತ ತಂಡ (Team India) ಮೊದಲು ಬೌಲಿಂಗ್ ಮಾಡುವ ಮೂಲಕ ಆಫ್ರಿಕಾ ಬ್ಯಾಟಿಂಗ್​ ಆರಂಭಿಸಿ ನಿಗದಿತ 40 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಗಳಿಸುವ ಮೂಲಕ ಭಾರತ ತಂಡಕ್ಕೆ 250 ರನ್ ಗಳ ಟಾರ್ಗೆಟ್​ ನೀಡಿದೆ.


ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಆಫ್ರಿಕಾ:


ದಕ್ಷಿಣ ಆಫ್ರಿಕಾ ಪರ ಆರಂಭಿಕರಾದ ಜಾನೆಮನ್ ಮಲನ್ 22 ರನ್ ಮತ್ತು ಕ್ವಿಂಟನ್ ಡಿ ಕಾಕ್ 48 ರನ್ ಗಳಿಸಿ ಮಿಂಚಿದರು. ಆದರೆ ಟಿ20 ನಂತರ ಏಕದಿನ ಪಂದ್ಯದಲ್ಲಿಯೂ ಆಫ್ರಿಕಾ ನಾಯಕ ಟೆಂಬಾ ಬವುಮಾ ಬ್ಯಾಟಿಂಗ್​ನಲ್ಲಿ ವಿಫಲರಾಗಿದ್ದು, ಕೇವಲ 8 ರನ್ ಗಳಿಸಿ ಔಟ್​ ಆದರು. ಉಳಿದಂತೆ ಏಡೆನ್ ಮಾರ್ಕ್ರಾಮ್ ಶೂನ್ಯಕ್ಕೆ ಫೆವೆಲಿಯನ್ ದಾರಿ ಹಿಡಿದರೆ, ಹೆನ್ರಿಕ್ ಕ್ಲಾಸೆನ್ 65 ಬೌಲ್​ಗೆ 6 ಪೋರ್​ ಮತ್ತು 2 ಸಿಕ್ಸ ಮೂಲಕ 74 ರನ್ ಮತ್ತು ಡೇವಿಡ್ ಮಿಲ್ಲರ್ 63 ಬೌಲ್​ಗೆ 3 ಸಿಕ್ಸ್ ಮತ್ತು 5 ಪೋರ್​ ನೆರವಿನಿಂದ 75 ರನ್ ಗಳಿಸಿ ಮಿಂಚಿದರು.ಉತ್ತಮ ಬೌಲಿಂಗ್ ದಾಳಿ ಮಾಡಿದ ಭಾರತ:


ಇನ್ನು, ಮಳೆಯಿಂದ ಪಿಚ್​ ಕೊಂಚ ನಿಧಾನವಿದ್ದು, ಇದರ ಸಂಪೂರ್ಣ  ಲಾಭವನ್ನು ಟೀಂ ಇಂಡಿಯಾ ಬಳಸಿಕೊಂಡಿದೆ. ಇದರಿಂದಾಗಿ ಭಾರತದ ಬೌಲರ್​ಗಳು ಇಂದು ದಕ್ಷಿಣ ಆಫ್ರಿಕಾ ಬ್ಯಾಟ್ಸ್​ಮನ್​ಗಳ ಮೇಲೆ ಹಿಡಿತ ಸಾಧಿಸಲು ಸಹಾಯಕವಾಯಿತು. ಭಾರತದ ಪರ ಶಾರ್ದೂಲ್​ ಠಾಕೂರ್​ 8 ಓವರ್​ಗಳ್ಲಿ 35 ರನ್​ ನೀಡಿ 2 ವಿಕೆಟ್​ ಪಡೆದರೆ, ರವಿ ಬಿಷ್ಣೋಯ್​ ಮತ್ತು ಕುಲದೀಪ್​ ಯಾದವ್​ ತಲಾ 1 ವಿಕೆಟ್​ ಪಡೆದರು.


ಇದನ್ನೂ ಓದಿ: Mohammed Shami: ದಸರಾಗೆ ಶುಭಾಶಯ ಕೋರಿದ್ದೇ ತಪ್ಪಾಯ್ತಾ? ಟೀಂ ಇಂಡಿಯಾ ಸ್ಟಾರ್​ ಆಟಗಾರನಿಗೆ ಬೆದರಿಕೆ!


ಚೊಚ್ಚಲ ಏಕದಿನ ಪಂದ್ಯವಾಡಲಿರುವ ಗಾಯಕ್ವಾಡ್:


ಜಿಂಬಾಬ್ವೆ ಪ್ರವಾಸದಲ್ಲಿ ಚೊಚ್ಚಲ ಏಕದಿನ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ಮಹಾರಾಷ್ಟ್ರದ ರಿತುರಾಜ್ ಗಾಯಕ್ವಾಡ್ ಕೊನೆಗೂ ಅವಕಾಶ ದೊರಕಿದೆ. ಅವರು ಲಕ್ನೋದಲ್ಲಿ ಟೀಮ್ ಇಂಡಿಯಾ ಪರ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡುತ್ತಿದ್ದಾರೆ. ರಿತುರಾಜ್ ಜೊತೆಗೆ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ಲಕ್ನೋದಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಲಿದ್ದಾರೆ.


ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ನ ಸ್ಮರಣೀಯ ಕ್ಷಣಗಳಿವು, ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂತದ್ದು


ಭಾರತ-ಆಫ್ರಿಕಾ ಏಕದಿನ ತಂಡ:


ಭಾರತ ತಂಡ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ರಿತುರಾಜ್ ಗಾಯಕ್ವಾಡ್, ಶ್ರೇಯರ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (WK), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್ ಮತ್ತು ಅವೇಶ್ ಖಾನ್


ದಕ್ಷಿಣ ಆಫ್ರಿಕಾ ತಂಡ: ಜಾನೆಮನ್ ಮಲನ್, ಕ್ವಿಂಟನ್ ಡಿ ಕಾಕ್ (ವಾಕ್), ಟೆಂಬಾ ಬವುಮಾ (ಸಿ), ಏಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ ಮತ್ತು ತಬ್ರೇಜ್ ಶಮ್ಸಿ.

Published by:shrikrishna bhat
First published: