• Home
  • »
  • News
  • »
  • sports
  • »
  • IND vs PAK Asia Cup 2022: ದೀಪ್ತಿ ಶರ್ಮಾ ದಾಳಿಗೆ ತತ್ತರಿಸಿದ ಪಾಕ್​, ಟೀಂ ಇಂಡಿಯಾಗೆ ಸಾಧಾರಣ ಗುರಿ

IND vs PAK Asia Cup 2022: ದೀಪ್ತಿ ಶರ್ಮಾ ದಾಳಿಗೆ ತತ್ತರಿಸಿದ ಪಾಕ್​, ಟೀಂ ಇಂಡಿಯಾಗೆ ಸಾಧಾರಣ ಗುರಿ

IND vs PAK

IND vs PAK

IND vs PAK Asia Cup 2022: ಟಾಸ್​ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್​ ಆರಂಭಿಸಿದ ಪಾಕ್​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 137 ರನ್​ ಗಳಿಸಿದೆ. ಈ ಮೂಲಕ ಟೀಂ ಇಂಡಿಯಾಗೆ (Team India) 138 ರನ್​ಗಳ ಟಾರ್ಗೆಟ್​ ನೀಡಿದೆ.

ಮುಂದೆ ಓದಿ ...
  • Share this:

ಮಹಿಳೆಯರ ಏಷ್ಯಾಕಪ್‌ನಲ್ಲಿ (womens Team India) ಶುಕ್ರವಾರ ಭಾರತ ಮತ್ತು ಪಾಕಿಸ್ತಾನ (IND W vs PAK W) ಮಹತ್ವದ ಪಂದ್ಯ ನಡೆಯುತ್ತಿದೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur) ನೇತೃತ್ವದ ಭಾರತ ತಂಡ ಟೂರ್ನಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ.  ಈಗಾಗಲೇ ಟಾಸ್​ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್​ ಆರಂಭಿಸಿದ ಪಾಕ್​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 137 ರನ್​ ಗಳಿಸಿದೆ. ಈ ಮೂಲಕ ಟೀಂ ಇಂಡಿಯಾಗೆ (Team India) 138 ರನ್​ಗಳ ಟಾರ್ಗೆಟ್​ ನೀಡಿದೆ.


ಉತ್ತಮ ಬ್ಯಾಟಿಂಗ್ ಮಾಡಿದ ನಿದಾ ದಾರ್:


ಟಾಸ್​ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್​ ಮಾಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 137 ರನ್​ ಗಳಿಸಿತು. ಭಾರತ ವನಿತೆಯರ ದಾಳಿಗೆ ತತ್ತರಿಸಿದ ಪಾಕ್​ ಆಟಗಾರ್ತಿಯರು ಅಲ್ಪ ಮೊತ್ತಕ್ಕೆ ಕುಸಿದರು. ಆದರೆ ಪಾಕ್​ ಪರ ನಿದಾ ದಾರ್ ಮಾತ್ರ 37 ಎಸೆತದಲ್ಲಿ 1 ಸಿಕ್ಸ್ ,5 ಪೋರ್​ ಮೂಲಕ ಆಕರ್ಷಕ 56 ರನ್ ಗಳಿಸಿದರು. ಉಳಿದಂತೆ ಮುನೀಬಾ ಅಲಿ 17 ರನ್, ಸಿದ್ರಾ ಅಮೀನ್ 11 ರನ್, ಬಿಸ್ಮಾ ಮರೂಫ್ 32 ರನ್, ಆಯೇಶಾ ನಸೀಮ್ 9 ರನ್, ಆಲಿಯಾ ರಿಯಾಜ್ 7 ರನ್, ಒಮೈಮಾ ಸೊಹೈಲ್ ಶೂನ್ಯ ಮತ್ತು ತುಬಾ ಹಸನ್ 1 ರನ್ ಗಳಿಸಿದರು.ದೀಪ್ತಿ ಶರ್ಮಾ ದಾಳಿಗೆ ತತ್ತರಿಸಿದ ಪಾಕ್:


ಇನ್ನು, ಭಾರತೀಯ ವನಿತೆಯರು ಪಾಕ್ ವಿರುದ್ಧ ಸಂಘಟಿತ ಬೌಲಿಂಗ್ ದಾಳಿ ಮಾಡುವ ಮೂಲಕ ಪಾಕಿಸ್ತಾನವನ್ನು ಅಲ್ಪಮೊತ್ತಕ್ಕೆ ಕುಸಿಯುವಂತೆ ಮಾಡಿದರು. ಭಾರತದ ಪರ  ದೀಪ್ತಿ ಶರ್ಮಾ 4 ಓವರ್ ಮಾಡಿ 27 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಉಳಿದಂತೆ ಪೂಜಾ ವರ್ಸರ್ಕರ್ 2 ವಿಕೆಟ್ ಮತ್ತು ರಿಂಕು ಸಿಂಗ್​ 1 ವಿಕೆಟ್​ ಪಡೆದು ಮಿಂಚಿದರು.


ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ ಇತಿಹಾಸದ ರೋಚಕ ಕ್ಷಣ, ಭಾರತೀಯರು ಎಂದಿಗೂ ಮರೆಯದ ಆ ಒಂದು ರನೌಟ್​


ಭಾರತ-ಪಾಕ್​ ಹೆಡ್​ ಟು ಹೆಡ್​:


ಭಾರತ ಮತ್ತು ಪಾಕಿಸ್ತಾನ ಮಹಿಳೆಯರ ತಂಡ ಟಿ20ಯಲ್ಲಿ ಇದುವರೆಗೆ ಒಟ್ಟು 12 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ ತಂಡ 10 ಪ.ದ್ಯಗಳನ್ನು ಗೆದ್ದರೆ ಪಾಕಿಸ್ತಾನ ಕೇವಲ 2ರಲ್ಲಿ ಗೆದ್ದಿದೆ. ಅಲ್ಲದೇ ಈ ಏಷ್ಯಾ ಕಪ್​ನಲ್ಲಿ ಟೀಂ ಇಂಡಿಯಾ ವನಿತೆಯರು ಭರ್ಜರಿ ಫಾರ್ಮ್​ನಲ್ಲಿದ್ದು, ಸತತ 3 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಇಂದು ಪಾಕ್​ ವಿರುದ್ಧ ಭಾರತ ಗೆಲ್ಲುವ ಫೆವರೇಟ್​ ಟೀಂ ಆಗಿದೆ.


ಇದನ್ನೂ ಓದಿ:  Shubman Gill: ಏಕದಿನ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಶುಭಮನ್ ಗಿಲ್, ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್


IND W vs PAK W ತಂಡ:


ಭಾರತ ತಂಡ: ಸ್ಮೃತಿ ಮಂಧಾನ, ಸಬಿನೇನಿ ಮೇಘನಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದಯಾಲನ್ ಹೇಮಲತಾ, ರಿಚಾ ಘೋಷ್ (WK), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರೇಣುಕಾ ಸಿಂಗ್ ಮತ್ತು ರಾಜೇಶ್ವರಿ ಗಾಯಕ್‌ವಾಡ್.


ಪಾಕಿಸ್ತಾನ ತಂಡ: ಮುನೀಬಾ ಅಲಿ, ಸಿದ್ರಾ ಅಮೀನ್, ಬಿಸ್ಮಾ ಮರೂಫ್ (ನಾಯಕ), ನಿದಾ ದಾರ್, ಆಯೇಶಾ ನಸೀಮ್, ಆಲಿಯಾ ರಿಯಾಜ್, ಒಮೈಮಾ ಸೊಹೈಲ್, ಸಾದಿಯಾ ಇಕ್ಬಾಲ್, ಡಯಾನಾ ಬೇಗ್, ತುಬಾ ಹಸನ್, ನಶ್ರಾ ಸಂಧು

Published by:shrikrishna bhat
First published: