• Home
  • »
  • News
  • »
  • sports
  • »
  • IND vs PAK Asia Cup 2022: ಟೀಂ ಇಂಡಿಯಾ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿದ ಪಾಕಿಸ್ತಾನ ವನಿತೆಯರ ತಂಡ

IND vs PAK Asia Cup 2022: ಟೀಂ ಇಂಡಿಯಾ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿದ ಪಾಕಿಸ್ತಾನ ವನಿತೆಯರ ತಂಡ

ಪಾಕಿಸ್ತಾನಕ್ಕೆ ಜಯ

ಪಾಕಿಸ್ತಾನಕ್ಕೆ ಜಯ

IND vs PAK Asia Cup 2022: ಪಾಕ್​ ನೀಡಿದ 138 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಟಿಂ ಇಂಡಿಯಾ ನಿಗದಿತ 19.4 ಓವರ್​ಗಳಲ್ಲಿ 10 ವಿಕೆಟ್​ ಕಳೆದುಕೊಂಡು 124 ರನ್​ ಗಳಿಸುವ ಮೂಲಕ 13 ರನ್​ಗಳಿಂದ ಸೋಲನ್ನಪ್ಪಿತು. 

  • Share this:

ಮಹಿಳೆಯರ ಏಷ್ಯಾಕಪ್‌ನಲ್ಲಿ (womens Team India) ಶುಕ್ರವಾರ ಭಾರತ ಮತ್ತು ಪಾಕಿಸ್ತಾನ (IND W vs PAK W) ಬಹು ನಿರೀಕ್ಷಿತ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಪಾಕ್​ ಎದುರು ಸೋಲನ್ನಪ್ಪಿತು.  ಹರ್ಮನ್‌ಪ್ರೀತ್ ಕೌರ್ (Harmanpreet Kaur) ನೇತೃತ್ವದ ಭಾರತ ತಂಡ ಟೂರ್ನಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಆದರೆ ಇದೀಗ ಟೂರ್ನಿಯಲ್ಲಿ ಮೊದಲ ಸೋಲನ್ನು ಅನುಭವಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಪಾಕ್​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 137 ರನ್​ ಗಳಿಸಿದೆ. ಈ ಮೂಲಕ ಟೀಂ ಇಂಡಿಯಾಗೆ (Team India) 138 ರನ್​ಗಳ ಟಾರ್ಗೆಟ್​ ನೀಡಿತು. ಈ ಮೊತ್ತ ಬೆನ್ನಟ್ಟಿದ ಟಿಂ ಇಂಡಿಯಾ ನಿಗದಿತ 19.4 ಓವರ್​ಗಳಲ್ಲಿ 10 ವಿಕೆಟ್​ ಕಳೆದುಕೊಂಡು 124 ರನ್​ ಗಳಿಸುವ ಮೂಲಕ 13 ರನ್​ಗಳಿಂದ ಸೋಲನ್ನಪ್ಪಿತು. 


ಬ್ಯಾಟಿಂಗ್​ನಲ್ಲಿ ಮಿಂಚದ ಭಾರತೀಯ ವನಿತೆಯರು:


ಭಾರತ ಮಹಿಳಾ ತಂಡದ ಪರ ಇಂದು ಯಾವುದೇ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡಲಿಲ್ಲ. ಭಾರತದ ಪರ ಸ್ಮೃತಿ ಮಂಧಾನ 17 ರನ್, ಸಬಿನೇನಿ ಮೇಘನಾ 15 ರನ್, ಜೆಮಿಮಾ ರಾಡ್ರಿಗಸ್ 2 ರನ್, ದಯಾಲನ್ ಹೇಮಲತಾ 20 ರನ್, ಪೂಜಾ ವಸ್ತ್ರಾಕರ್ 5 ರನ್, ದೀಪ್ತಿ ಶರ್ಮಾ 16 ರನ್, ನಾಯಕಿ ಹರ್ಮನ್‌ಪ್ರೀತ್ ಕೌರ್ 12 ರನ್, ರಿಚಾ ಘೋಷ್ 26 ರನ್, ರಾಜೇಶ್ವರಿ ಗಾಯಕ್‌ವಾಡ್ 1 ರನ್, ರಾಧಾ ಯಾದವ್ 3 ರನ್ ಮತ್ತು ರೇಣುಕಾ ಸಿಂಗ್ 2 ರನ್ ಗಳಿಸಿದರೂ ತಂಡವನ್ನು ಗೆಲ್ಲಿಸಲುಸಾಧ್ಯವಾಗಲಿಲ್ಲ.ಉತ್ತಮ ಬೌಲಿಂಗ್​ ಮಾಡಿದ ನಶ್ರಾ ಸಂಧು:


ಇನ್ನು, ಸಾಧಾರಣ ಮೊತ್ತವನ್ನು ಡಿಫೆಂಡ್​ ಮಾಡಿಕೊಲ್ಳುವಲ್ಲಿ ಪಾಕ್​ ವನಿತೆಯರ ಬೌಲರ್​ಗಳು ಯಶಸ್ವಿಯಾದರು. ಪಾಕಿಸ್ತಾನ ಪರ ನಶ್ರಾ ಸಂಧು 4 ಓವರ್​ಗೆ 30 ರನ್ ನೀಡಿ 3 ವಿಕೆಟ್​ ಪಡೆದು ಮೀಮಚಿದರು. ಉಳಿದಂತೆ ಸಾದಿಯಾ ಇಕ್ಬಾಲ್ ಮತ್ತು ನಿದಾ ದಾರ್ ತಲಾ 2 ವಿಕೆಟ್ ಪಡೆದರು. ನಿದಾ ದಾರ್ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲಿಯೂ ಉತ್ತಮ ಪ್ರದರ್ಶನ ನೀಡಿದರು. ತುಬಾ ಹಸನ್ ಮತ್ತು ಅಮೀನಾ ಅನ್ವರ್​ ತಲಾ 1 ವಿಕೆಟ್​ ಪಡೆದರು.


ಅಲ್ಪಮೊತ್ತಕ್ಕೆ ಕುಸಿದಿದ್ದ ಪಾಕ್​:


ಟಾಸ್​ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್​ ಮಾಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 137 ರನ್​ ಗಳಿಸಿತು. ಭಾರತ ವನಿತೆಯರ ದಾಳಿಗೆ ತತ್ತರಿಸಿದ ಪಾಕ್​ ಆಟಗಾರ್ತಿಯರು ಅಲ್ಪ ಮೊತ್ತಕ್ಕೆ ಕುಸಿದರು. ಆದರೆ ಪಾಕ್​ ಪರ ನಿದಾ ದಾರ್ ಮಾತ್ರ 37 ಎಸೆತದಲ್ಲಿ 1 ಸಿಕ್ಸ್ ,5 ಪೋರ್​ ಮೂಲಕ ಆಕರ್ಷಕ 56 ರನ್ ಗಳಿಸಿದರು. ಉಳಿದಂತೆ ಮುನೀಬಾ ಅಲಿ 17 ರನ್, ಸಿದ್ರಾ ಅಮೀನ್ 11 ರನ್, ಬಿಸ್ಮಾ ಮರೂಫ್ 32 ರನ್, ಆಯೇಶಾ ನಸೀಮ್ 9 ರನ್, ಆಲಿಯಾ ರಿಯಾಜ್ 7 ರನ್, ಒಮೈಮಾ ಸೊಹೈಲ್ ಶೂನ್ಯ ಮತ್ತು ತುಬಾ ಹಸನ್ 1 ರನ್ ಗಳಿಸಿದರು.


ಇದನ್ನೂ ಓದಿ: Virat Kohli: ವಿರಾಟ್ ಕೈಯಲ್ಲಿ ದುಬಾರಿ ವಾಚ್, ಕೊಹ್ಲಿ ಒಮ್ಮೆ ಹೇರ್​ ಕಟ್ ಮಾಡೋ ದುಡ್ಡಲ್ಲಿ ಸ್ಪ್ಲೆಂಡರ್ ಬೈಕೇ ಕೊಳ್ಬೋದಿತ್ತಂತೆ!


ದೀಪ್ತಿ ಶರ್ಮಾ ದಾಳಿಗೆ ತತ್ತರಿಸಿದ ಪಾಕ್:

 ಇನ್ನು, ಭಾರತೀಯ ವನಿತೆಯರು ಪಾಕ್ ವಿರುದ್ಧ ಸಂಘಟಿತ ಬೌಲಿಂಗ್ ದಾಳಿ ಮಾಡುವ ಮೂಲಕ ಪಾಕಿಸ್ತಾನವನ್ನು ಅಲ್ಪಮೊತ್ತಕ್ಕೆ ಕುಸಿಯುವಂತೆ ಮಾಡಿದರು. ಭಾರತದ ಪರ  ದೀಪ್ತಿ ಶರ್ಮಾ 4 ಓವರ್ ಮಾಡಿ 27 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಉಳಿದಂತೆ ಪೂಜಾ ವರ್ಸರ್ಕರ್ 2 ವಿಕೆಟ್ ಮತ್ತು ರಿಂಕು ಸಿಂಗ್​ 1 ವಿಕೆಟ್​ ಪಡೆದು ಮಿಂಚಿದರು.

Published by:shrikrishna bhat
First published: