• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs PAK Melbourne Weather: ಭಾರತ-ಪಾಕಿಸ್ತಾನ ಪಂದ್ಯ, ಹೇಗಿದೆ ಮೆಲ್ಬೋರ್ನ್​ ಹವಾಮಾನ? ಪಂದ್ಯ ನಡೆಯುತ್ತದೆಯೇ?

IND vs PAK Melbourne Weather: ಭಾರತ-ಪಾಕಿಸ್ತಾನ ಪಂದ್ಯ, ಹೇಗಿದೆ ಮೆಲ್ಬೋರ್ನ್​ ಹವಾಮಾನ? ಪಂದ್ಯ ನಡೆಯುತ್ತದೆಯೇ?

IND vs PAK

IND vs PAK

IND vs PAK Melbourne Weather: ಭಾನುವಾರ T20 ವಿಶ್ವಕಪ್ ಸೂಪರ್ 12 ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಆದರೆ, ಈ ಪಂದ್ಯದಲ್ಲಿ ಮಳೆಯ ಭೀತಿ ಎದುರಾಗಿದೆ.

  • Share this:

ಇಂದು ಟಿ20 ವಿಶ್ವಕಪ್ ಸೂಪರ್ 12 ರಲ್ಲಿ ಭಾರತ ಮತ್ತು ಪಾಕಿಸ್ತಾನ (IND sv PAK) ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ. ಈ ವರ್ಷ ಎರಡೂ ತಂಡಗಳು ಮೂರನೇ ಬಾರಿ ಮುಖಾಮುಖಿಯಾಗಲಿವೆ. ಈ 'ಬ್ಲಾಕ್‌ಬಸ್ಟರ್' ಪಂದ್ಯಕ್ಕೂ ಮುನ್ನ, ಕಳೆದ ತಿಂಗಳು ಏಷ್ಯಾಕಪ್‌ನಲ್ಲಿ (Asia Cup) ಇಬ್ಬರೂ ಮುಖಾಮುಖಿಯಾಗಿದ್ದರು. ಗುಂಪು ಹಂತದ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿತು, ಆದರೆ ಬಾಬರ್ ಅಜಮ್ (Babar Azam) ನೇತೃತ್ವದ ಪಾಕಿಸ್ತಾನ ತಂಡವು ಅದ್ಭುತವಾದ ಪುನರಾಗಮನವನ್ನು ಮಾಡಿತು ಮತ್ತು ಸೂಪರ್ 4 ಹಂತದಲ್ಲಿ ಭಾರತವನ್ನು ಸೋಲಿಸಿತು. ಇದೇ ಕಾರಣಕ್ಕಾಗಿ ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ ಆ ಸೇಡನ್ನು ತೀರಿಸಿಕೊಳ್ಳಲು ಸಿದ್ದವಾಗಿದೆ.


ಭಾರತ-ಪಾಕ್ ಪಂದ್ಯಕ್ಕೆ ಮಳೆ ಕಾಟ:


ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ಮಳೆಯ ಛಾಯೆ ಆವರಿಸಿದೆ. ಈ ವಾರದ ಆರಂಭದಲ್ಲಿ ಮೆಲ್ಬೋರ್ನ್‌ನಲ್ಲಿ ಭಾರೀ ಮಳೆಯಾಗಿತ್ತು. ಬುಧವಾರ ಮತ್ತು ಗುರುವಾರವೂ ಮಳೆಯ ಪ್ರಕ್ರಿಯೆ ಮುಂದುವರಿದಿದೆ. ಸ್ಥಳೀಯ ಹವಾಮಾನ ಇಲಾಖೆ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ದಿನದಂದು ಮಳೆಯ ಮುನ್ಸೂಚನೆ ಇದೆ.  ಅಲ್ಲದೆ ಆಸ್ಟ್ರೇಲಿಯಾದ  MET ಇಲಾಖೆಯು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿದೆ.



ಹೇಗಿದೆ ಮೆಲ್ಬೋರ್ನ್ ಹವಾಮಾನ ವರದಿ:


ಆಸ್ಟ್ರೇಲಿಯನ್ ಗವರ್ನಮೆಂಟ್ ಬ್ಯೂರೋ ಆಫ್ ಮೆಟ್ರೋಲಜಿ ಪ್ರಕಾರ, ಮೆಲ್ಬೋರ್ನ್ ಅಕ್ಟೋಬರ್ 23 ರಂದು 60 ಪ್ರತಿಶತದಷ್ಟು ಮಳೆಯನ್ನು ಪಡೆಯಬಹುದು. ಬೆಳಗ್ಗೆ ಮತ್ತು ಸಂಜೆ ವೇಳೆ ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ. ಒಂದು ವೇಳೆ ಈ ಪಂದ್ಯ ಮಳೆಯಿಂದ ರದ್ದಾದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವ ಗ್ರೂಪ್ 12 ಪಂದ್ಯದಲ್ಲಿ ಯಾವುದೇ ಮೀಸಲು ದಿನವಿಲ್ಲ. ಸೆಮಿಫೈನಲ್ ಮತ್ತು ಫೈನಲ್‌ಗೆ ಮಾತ್ರ ಮೀಸಲು ದಿನವನ್ನು ಇರಿಸಲಾಗಿದೆ. ಅಲ್ಲದೇ ರದ್ದಾದರೆ ಉಭಯ ತಂಡಗಳಿಗೆ ಒಂದು ಅಂಕ ಹಂಚಿಕೆಯಾಗಲಿದೆ.


ಇದನ್ನೂ ಓದಿ: IND vs PAK: ಭಾರತ-ಪಾಕಿಸ್ತಾನ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ?


ಭಾರತ vs ಪಾಕಿಸ್ತಾನ T20 ವಿಶ್ವಕಪ್:


ಭಾರತೀಯ ಕ್ರಿಕೆಟ್ ತಂಡವು ಭಾರಿ ಮೇಲುಗೈ ಹೊಂದಿದೆ. ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು 6 ಬಾರಿ ಮುಖಾಮುಖಿಯಾಗಿದ್ದು, ಟೀಮ್ ಇಂಡಿಯಾ 5 ಬಾರಿ ಗೆದ್ದಿದ್ದರೆ, ಪಾಕಿಸ್ತಾನ 1 ಪಂದ್ಯವನ್ನು ಗೆದ್ದಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋತಿತ್ತು. ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆ ಸೋಲನ್ನು ಸರಿಗಟ್ಟಲು ಹವಣಿಸುತ್ತಿದೆ.


ಇದನ್ನೂ ಓದಿ: T20 WC 2022 IND vs PAK: ನಾಳೆ ಭಾರತ-ಪಾಕಿಸ್ತಾನ ಪಂದ್ಯ, ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11


ಪಾಕಿಸ್ತಾನದ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್​ 11:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್ (WK), ರವಿಚಂದ್ರನ್ ಅಶ್ವಿನ್/ಯುಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ/ಹರ್ಷಲ್ ಪಟೇಲ್ ಅರ್ಷದೀಪ್ ಸಿಂಗ್.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು