Asia Cup 2022: ಇಂಡಿಯಾ-ಪಾಕ್​ ಮ್ಯಾಚ್​ ಬಗ್ಗೆ ಹಿಂಗ್ಯಾಕ್​ ಅಂದ್ರು ದಾದಾ? ಕ್ರಿಕೆಟ್​ ನೋಡೋ ರೀತಿ ಬದಲಾಯಿಸಿಕೊಳ್ಳಿ ಅಂತ ಎಚ್ಚರಿಕೆ

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವು ಪಾಕ್​ ವಿರುದ್ದ 10 ವಿಕೆಟ್‌ಗಳ ಸೋಲನ್ನು ಕಂಡಿತ್ತು. ಇದರಿಂದಾಗಿ ಏಷ್ಯಾಕಪ್​ 2022ರಲ್ಲಿ ಇಂಡೋ-ಪಾಕ್ ಪಂದ್ಯವು ಸೇಡಿನ ಪಂದ್ಯ ಎಂದು ಎಲ್ಲಡೆ ಬಿಂಬಸಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದ್ದು, ಇದೇ ತಿಂಗಳ 23ರಂದು ಭಾರತ ತಂಡವು ದುಬೈಗೆ ತೆರಳಲಿದ್ದಾರೆ. ಭಾರತ ತಂಡವನ್ನು ರೋಹಿತ್​ ಶರ್ಮಾ (Rohit Sharma) ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದರೆ, ಕನ್ನಡಿಗ ಕೆಎಲ್​ ರಾಹುಲ್ (KL Rahul)​ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಿದೆ. ಅನೇಕ ದಿನಗಳ ನಂತರ ವಿರಾಟ್ ಕೊಹ್ಲಿ (Virat Kohli) ಮತ್ತು ಕೆಎಲ್ ರಾಹುಲ್ ಮತ್ತೆ ಟೀಂ ಇಂಡಿಯಾಗೆ ಮರಳಿದ್ದಾರೆ. ಹೀಗಾಗಿ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಇದರ ನಡುವೆ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಭಾರತ ಮತ್ತು ಪಾಕಿಸ್ತಾನ ಮೂಖಾಮುಖಿ ಆಗುತ್ತಿದ್ದು, ಪ್ರೇಕ್ಷಕರು ಈ ಪಂದ್ಯಕ್ಕಾಗಿ ಕಾತುರತೆಯಿಂದ ಕಾಯುತ್ತಿದ್ದಾರೆ. ಅದರೆ ಈ ಪಂದ್ಯದ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಮಾತನಾಡಿದ್ದಾರೆ.

ಇದು ಕೇವಲ ಭಾರತ - ಪಾಕ್ ಪಂದ್ಯವಲ್ಲ:

ಹೌದು, ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವು ಪಾಕ್​ ವಿರುದ್ದ 10 ವಿಕೆಟ್‌ಗಳ ಸೋಲನ್ನು ಕಂಡಿತ್ತು. ಇದರಿಂದಾಗಿ ಏಷ್ಯಾಕಪ್​ 2022ರಲ್ಲಿ ಇಂಡೋ-ಪಾಕ್ ಪಂದ್ಯವು ಸೇಡಿನ ಪಂದ್ಯ ಎಂದು ಎಲ್ಲಡೆ ಬಿಂಬಸಲಾಗುತ್ತಿದೆ. ಆದರೆ 2 ದೇಶದ ಜನರು ಕಾತುರತೆಯಿಂದ ಕಾಯುತ್ತಿರುವ ಇಂಡೋ - ಪಾಕ್​ ಕದನದ ಕುರಿತು ಸೌರವ್ ಗಂಗೂಲಿ ಮಾತಾಡಿದ್ದು, ‘ಭಾರತ ಮತ್ತು ಪಾಕ್ ಪಂದ್ಯವು ಉಳಿದ ಎಲ್ಲಾ ಪಂದ್ಯಗಳಂತೆಯೇ. ಇದರಲ್ಲಿ ಹೊಸದಾಗಿ ಯಾವುದೇ ವಿಶೇಷತೆಗಳಿಲ್ಲ. ಅಲ್ಲದೆ ಭಾರತ ತಂಡವು ಪಾಕ್ ವಿರುದ್ದದ ಗೆಲುವಿಗಿಂತಲೂ ಏಷ್ಯಾಕಪ್ ಅನ್ನು ಗೆಲ್ಲುವ ಕುರಿತು ಆಲೋಚಿಸಬೇಕು.

ಜೊತೆಗೆ ಈ ಟೂರ್ನಿಯನ್ನು ನಾನು ಕೇವಲ ಏಷ್ಯಾಕಪ್​ ಆಗಿ ಮಾತ್ರ ನೋಡುತ್ತಿರುವೆ. ನಾನು ಕ್ರಿಕೆಟ್​ ಆಡುವಾಗ ಸಹ ಪಾಕ್ ಜೊತೆಗಿನ ಪಂದ್ಯಾವಳಿಗಳನ್ನು ಎಲ್ಲಾ ಪಂದ್ಯಗಳಂತೆ ನೋಡುತ್ತಿದ್ದೆ. ಹೀಗಾಗಿ ಭಾರತ ತಂಡ ಸಹ ಕೇವಲ ಟೂರ್ನಿಯನ್ನು ಗೆಲ್ಲುವತ್ತ ಗಮನಹರಿಸಬೇಕು. ಇನ್ನು, ಟೀಂ ಇಂಡಿಯಾ ತಂಡ ಬಲಿಷ್ಠವಾಗಿದ್ದು, ಕಳೆದ ಕೆಲ ದಿನಗಳಿಂದ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದೆ. ಏಷ್ಯಾಕಪ್‌ನಲ್ಲೂ ಅದೇ ರೀತಿ ಮಾಡುವ ನಿರೀಕ್ಷೆಯಿದೆ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: IND vs PAK: ಭಾರತ- ಪಾಕಿಸ್ತಾನಕ್ಕೆ ಪಂದ್ಯಕ್ಕೆ ದಿನಗಣನೆ, ಟಿಕೆಟ್​ ಬೆಲೆ ನೋಡಿ ಶಾಕ್ ಆದ ಕ್ರಿಕೆಟ್​ ಫ್ಯಾನ್ಸ್!

ಹೇಗಿದೆ ಭಾರತ-ಪಾಕ್ ಹಣಾಹಣಿ ಅಂಕಿಅಂಶ:

ಕಳೆದ 14 ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಫೈನಲ್​ನಲ್ಲಿ ಮುಖಾಮುಖಿಯಾಗಿಲ್ಲ. ಅಚ್ಚರಿ ಆದರೂ ಇದು ಸತ್ಯ. ಈವರೆಗೂ ಭಾರತ ಮತ್ತು ಪಾಕ್​ ಫೈನಲ್​ನಲ್ಲಿ ಮುಖಾಮುಖಿ ಆಗಲಿಲ್ಲ. ಏನಾದರೂ ಈ ಬಾರಿ 2 ತಂಡಗಳು ಫೈನಲ್​ ನಲ್ಲಿ ಎದುರಾದರೆ, ಕ್ರಿಕೆಟ್​ ಪ್ರೇಮಿಗಳ ನಿರೀಕ್ಷೆಗೆ ಮಿತಿ ಇಲ್ಲದಂತಾಗುತ್ತದೆ. ಭಾರತ ಈವರೆಗೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳನ್ನು ಫೈನಲ್​ ಪಂದ್ಯದಲ್ಲಿ ಎದುರಿಸಿದೆ.

ಭಾರತ ಏಷ್ಯಾಕಪ್​ನಲ್ಲಿ ಈವರೆಗೆ  14 ಬಾರಿ ಪಾಕಿಸ್ತಾನವನ್ನು ಎದುರಿಸಿದೆ. ಇದರಲ್ಲಿ ಭಾರತ 8 ಪಂದ್ಯಗಳನ್ನು ಗೆದ್ದರೆ, 5 ಪಂದ್ಯಗಳಲ್ಲಿ ಸೋತಿದೆ. ಅಲ್ಲದೇ  7 ಬಾರಿ ಚಾಂಪಿಯನ್ ಆಗಿದೆ. ಕಳೆದ ಏಷ್ಯಾ ಕಪ್​ನಲ್ಲಿಯೂ ಭಾರತ ಗೆದ್ದಿದ್ದು, ಈ ಬಾರಿ ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿಯಲಿದೆ.

ಇದನ್ನೂ ಓದಿ: IND vs ZIM: ನಾಳೆಯಿಂದ ಭಾರತ-ಜಿಂಬಾಬ್ವೆ ಸರಣಿ ಆರಂಭ, ಯಾವ ಚಾನೆಲ್​ನಲ್ಲಿ ಪ್ರಸಾರ? ಎಷ್ಟು ಗಂಟೆಗೆ? ಇಲ್ಲಿದೆ ವಿವರ

ಏಷ್ಯಾ ಕಪ್​ಗೆ ಟೀಂ ಇಂಡಿಯಾ: 

ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.
Published by:shrikrishna bhat
First published: