ಡೇವಿಸ್ ಕಪ್ ಟೆನಿಸ್: ಪಾಕಿಸ್ತಾನಕ್ಕೆ 4-0ಯಿಂದ ಮಣ್ಣುಮುಕ್ಕಿಸಿದ ಭಾರತ

ಭಾರತ ತಂಡ ಈ ಗೆಲುವಿನೊಂದಿಗೆ ವಿಶ್ವ ಗುಂಪಿನ ಅರ್ಹತಾ ಹಂತಕ್ಕೆ ಏರುವಲ್ಲಿ ಸಫಲವಾಗಿದೆ. ಮಾರ್ಚ್ 6-7ರಂದು ನಡೆಯುವ ಕ್ವಾಲಿಫೈಯರ್​ನಲ್ಲಿ ಎರಡು ಬಾರಿಯ ಚಾಂಪಿಯನ್ಸ್ ಕ್ರೊವೇಷಿಯಾ ದೇಶದ ತಂಡವನ್ನು ಭಾರತ ಇದಿರುಗೊಳ್ಳಲಿದೆ.

Vijayasarthy SN | news18
Updated:November 30, 2019, 4:39 PM IST
ಡೇವಿಸ್ ಕಪ್ ಟೆನಿಸ್: ಪಾಕಿಸ್ತಾನಕ್ಕೆ 4-0ಯಿಂದ ಮಣ್ಣುಮುಕ್ಕಿಸಿದ ಭಾರತ
ಭಾರತ ಡೇವಿಸ್ ಕಪ್ ತಂಡ
  • News18
  • Last Updated: November 30, 2019, 4:39 PM IST
  • Share this:
ಬೆಂಗಳೂರು(ನ. 30): ಪ್ರಮುಖ ಆಟಗಾರರಿಲ್ಲದೇ ಕಣಕ್ಕಿಳಿದಿದ್ದ ಪಾಕಿಸ್ತಾನ ಟೆನಿಸ್ ತಂಡವು ಭಾರತೀಯರಿಗೆ ಬಹಳ ಸುಲಭ ತುತ್ತಾಯಿತು. ಕಜಕಸ್ತಾನದ ನೂರ್-ಸುಲ್ತಾನ್​ನ ಟೆನಿಸ್ ಅಂಗಳದಲ್ಲಿ ಮೈನಸ್ 9 ಡಿಗ್ರಿಯ ಕೊರೆಯುವ ಚಳಿಯಲ್ಲಿ ನಡೆದ ಹಣಾಹಣಿಯಲ್ಲಿ ಭಾರತ 4-0 ಪಂದ್ಯಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿಯಿತು. ಈ ಮೂಲಕ ಡೇವಿಸ್ ಕಪ್​ನ ಪ್ರಧಾನ ಹಂತಕ್ಕೆ ನಡೆಯುವ ಕ್ವಾಲಿಫಯರ್ಸ್​ಗೆ ಭಾರತ ತಂಡ ಅರ್ಹತೆ ಗಿಟ್ಟಿಸಿತು. ಮಾರ್ಚ್ ತಿಂಗಳಲ್ಲಿ ನಡೆಯುವ ಕ್ವಾಲಿಫಯರ್ಸ್ ನಾಕೌಟ್ ಪಂದ್ಯದಲ್ಲಿ ಭಾರತ ತಂಡ ಪ್ರಬಲ ಕ್ರೊವೇಷಿಯಾವನ್ನು ಎದುರಿಸಲಿದೆ.

ಪಾಕಿಸ್ತಾನ ವಿರುದ್ಧದ ಹಣಾಹಣಿಯಲ್ಲಿ ಭಾರತೀಯ ಟೆನಿಸ್ ಆಟಗಾರರು ನಿರೀಕ್ಷೆಮೀರಿ ಸುಲಭ ಗೆಲುವು ಸಂಪಾದಿಸಿದರು. ಪಾಕಿಸ್ತಾನದ ಮೊಹಮ್ಮದ್ ಶೋಯಬ್ ವಿರುದ್ಧ ರಾಮಕುಮಾರ್ ರಾಮನಾಥನ್ ಒಂದೂ ಅಂಕ ಬಿಟ್ಟುಕೊಡದೆ ವೈಟ್ ವಾಶ್ ಮಾಡಿದರು. ನಂತರದ ಪಂದ್ಯದಲ್ಲಿ ಸುಮಿತ್ ನಗಾಲ್ ಅವರು 6-0, 6-2 ಸೆಟ್​​ಗಳಿಂದ ಹುಜೇಫಾ ಅಬ್ದುಲ್ ರೆಹ್ಮಾನ್ ಅವರನ್ನು ಮಣಿಸಿದರು.

ಇದನ್ನೂ ಓದಿ: ಆರ್​ಆರ್​ ತಂಡ ಸೇರಿಕೊಂಡ ವೆಸ್ಟ್​ ಇಂಡೀಸ್ ಸ್ಫೋಟಕ ಬ್ಯಾಟ್ಸ್​ಮನ್​ ಆ್ಯಂಡ್ರೊ ರಸೆಲ್

ಇವತ್ತು ಎರಡನೇ ದಿನ ನಡೆದ ಡಬಲ್ಸ್ ಪಂದ್ಯದಲ್ಲಿ ಹಳೆಯ ಹುಲಿ ಲಿಯಾಂಡರ್ ಪೇಸ್ ಮತ್ತು ಜೀವನ್ ನೆಡುಂಚೆಳಿಯಾನ್ ಜೋಡಿಯು 6-1, 6-3ರಿಂದ ಹುಜೇಫಾ ಅಬ್ದುಲ್ ರೆಹಮಾನ್ ಮತ್ತು ಮುಹಮ್ಮದ್ ಶೋಯಬ್ ಅವರನ್ನು ಸೋಲಿಸಿತು.

ರಿವರ್ಸ್ ಸಿಂಗಲ್ಸ್ ಪಂದ್ಯಗಳ ಪೈಕಿ ಸುಮಿತ್ ನಗಾಲ್ ಕೇವಲ 32 ನಿಮಿಷಗಳಲ್ಲಿ 6-1, 6-0 ಸೆಟ್​ಗಳಿಂದ ಯೂಸೆಫ್ ಕಲೀಲ್ ಅವರ ವಿರುದ್ಧ ಗೆದ್ದರು. ರೋಹಿತ್ ರಾಜಪಾಲ್ ನೇತೃತ್ವ ಭಾರತ ಟೆನಿಸ್ ತಂಡ ಈ ನಾಲ್ಕು ಪಂದ್ಯಗಳಲ್ಲಿ ಕೇವಲ 6 ಪಾಯಿಂಟನ್ನು ಮಾತ್ರ ಪಾಕಿಸ್ತಾನೀಯರಿಗೆ ಬಿಟ್ಟುಕೊಟ್ಟಿತು.

ಇದನ್ನೂ ಓದಿ: ವೈರಲ್ ಆಗುತ್ತಿದೆ ಅರ್ಧ ಗಡ್ಡ, ಮೀಸೆ ಬೋಳಿಸಿದ ಜಾಕ್ ಕಾಲಿಸ್ ಪೋಟೋ; ಇದರ ಹಿಂದಿದೆ ಒಳ್ಳೆಯ ಉದ್ದೇಶ!

ಇತ್ತೀಚಿನ ವರ್ಷಗಳಲ್ಲಿ ಇಷ್ಟು ಏಕಪಕ್ಷೀಯ ಪಂದ್ಯಗಳನ್ನು ಭಾರತ ಆಡಿದ್ದು ಇದೇ ಮೊದಲು. ಪಾಕಿಸ್ತಾನದಿಂದ ದುರ್ಬಲ ಆಟಗಾರರು ಕಣಕ್ಕಿಳಿದಿದ್ದು ಇದಕ್ಕೆ ಪ್ರಮುಖ ಕಾರಣ. ಸೆಪ್ಟೆಂಬರ್ ತಿಂಗಳಲ್ಲಿ ಇಸ್ಲಾಮಾಬಾದ್​ನಲ್ಲಿ ಈ ಹಣಾಹಣಿ ನಡೆಯಬೇಕಿತ್ತು. ಆದರೆ, ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದಲ್ಲಿ ಸೂಕ್ಷ್ಮ ವಾತಾವರಣ ನೆಲಸಿರುವ ಕಾರಣವೊಡ್ಡಿ ಪಂದ್ಯ ಮುಂದೂಡಲು ಭಾರತ ಮನವಿ ಮಾಡಿಕೊಂಡಿತು. ಬಳಿಕ ಬೇರೆ ದೇಶದಲ್ಲಿ ಪಂದ್ಯ ನಡೆಸಲು ಭಾರತ ಮಾಡಿಕೊಂಡ ಮನವಿಗೆ ಸ್ಪಂದಿಸಿದ ಅಂತಾರಾಷ್ಟ್ರೀಯ ಟೆನಿಸ್ ಒಕ್ಕೂಟ (ಐಟಿಎಫ್) ಕಜಕಸ್ತಾನದಲ್ಲಿ ಪಂದ್ಯ ಫಿಕ್ಸ್ ಮಾಡಿತು. ಪಾಕಿಸ್ತಾನದ ಪ್ರಮುಖ ಆಟಗಾರರಾದ ಐಸಮುಲ್ ಹಕ್ ಖುರೇಷಿ ಮತ್ತು ಅಖೀಲ್ ಖಾನ್ ಅವರು ಐಟಿಎಫ್ ನಿರ್ಧಾರವನ್ನು ಪ್ರತಿಭಟಿಸಿ, ಕಣದಿಂದ ಹಿಂಸರಿದರು. ಹೀಗಾಗಿ, ಪಾಕಿಸ್ತಾನ ಟೆನಿಸ್ ಸಂಸ್ಥೆಯು ಎರಡನೇ ಸಾಲಿನ ಆಟಗಾರರನ್ನು ಅಖಾಡಕ್ಕೆ ಇಳಿಸುವುದು ಅನಿವಾರ್ಯವಾಯಿತು.ಭಾರತ ತಂಡ ಈ ಗೆಲುವಿನೊಂದಿಗೆ ವಿಶ್ವ ಗುಂಪಿನ ಅರ್ಹತಾ ಹಂತಕ್ಕೆ ಏರುವಲ್ಲಿ ಸಫಲವಾಗಿದೆ. ಮಾರ್ಚ್ 6-7ರಂದು ನಡೆಯುವ ಕ್ವಾಲಿಫೈಯರ್​ನಲ್ಲಿ ಎರಡು ಬಾರಿಯ ಚಾಂಪಿಯನ್ಸ್ ಕ್ರೊವೇಷಿಯಾ ದೇಶದ ತಂಡವನ್ನು ಭಾರತ ಇದಿರುಗೊಳ್ಳಲಿದೆ. ಅಂದು ಭಾರತ-ಕ್ರೊವೇಷಿಯಾ ಪಂದ್ಯ ಸೇರಿ ಒಟ್ಟು 6 ಪಂದ್ಯಗಳು ನಡೆಯಲಿವೆ. ಇದರಲ್ಲಿ ಗೆದ್ದವರು ಡೇವಿಸ್ ಕಪ್ ಪ್ರಧಾನ ಹಂತಕ್ಕೆ ಅರ್ಹತೆ ಗಿಟ್ಟಿಸಲಿದ್ಧಾರೆ. ಸ್ಪೇನ್, ಕೆನಡಾ, ಬ್ರಿಟನ್, ರಷ್ಯಾ, ಫ್ರಾನ್ಸ್ ಮತ್ತು ಸರ್ಬಿಯಾ ದೇಶಗಳು ಈಗಾಗಲೇ ಪ್ರಧಾನ ಹಂತ ಪ್ರವೇಶ ಪಡೆದಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: November 30, 2019, 4:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading