ನಾಳೆಯಿಂದ ಭಾರತ-ನ್ಯೂಜಿಲೆಂಡ್ ಚುಟುಕು ಸಮರ; ಶುಭಾರಂಭದ ನಿರೀಕ್ಷೆಯಲ್ಲಿ ರೋಹಿತ್ ಪಡೆ

ಟಿ-20 ತಂಡದಲ್ಲಿ ಟೀಂ ಇಂಡಿಯಾ ಪರ ಅವಕಾಶ ಪಡೆದಿರುವ ಆಲ್ರೌಂಡರ್ ಕೃನಾಲ್ ಪಾಂಡ್ಯ ತನ್ನ ಅಣ್ಣನ ಜೊತೆಯಲ್ಲಿ ಮೈದಾನಕ್ಕಿಳಿಯಲು ಎದುರು ನೋಡುತ್ತಿದ್ದಾರೆ.

Vinay Bhat | news18
Updated:February 5, 2019, 7:34 PM IST
ನಾಳೆಯಿಂದ ಭಾರತ-ನ್ಯೂಜಿಲೆಂಡ್ ಚುಟುಕು ಸಮರ; ಶುಭಾರಂಭದ ನಿರೀಕ್ಷೆಯಲ್ಲಿ ರೋಹಿತ್ ಪಡೆ
ರೋಹಿತ್ ಶರ್ಮಾ
Vinay Bhat | news18
Updated: February 5, 2019, 7:34 PM IST
ವೆಲ್ಲಿಂಗ್ಟನ್ (ಫೆ. 05): ಏಕದಿನ ಸರಣಿಯನ್ನು ಭರ್ಜರಿಯಾಗಿ ಗೆದ್ದು ಬೀಗಿದ ಟೀಂ ಇಂಡಿಯಾ ನಾಳೆಯಿಂದ ಟಿ-20 ಸರಣಿಯಲ್ಲಿ ಅಖಾಡಕ್ಕಿಳಿಯುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಗೆಲುವಿನ ಬಳಿಕ ಚುಟುಕು ಕ್ರಿಕೆಟ್ ಸವಾಲು ಸ್ವೀಕರಿಸುತ್ತಿದೆ. ಅತ್ತ ವಿಲಿಯಮ್ಸನ್ ಪಡೆ ಟೀಂ ಇಂಡಿಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.

ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲೆ ಭಾರತ ವಿರುದ್ಧ ಹಿಂದೆದೂ ಕಾಣದ ಸೋಲನ್ನು ಕಂಡಿರುವ ಕಿವೀಸ್ ಪಡೆ, ಟೀಂ ಇಂಡಿಯಾವನ್ನು ಚುಟುಕು ಸಮರದಲ್ಲಾದರು ಮಣಿಸಬೇಕೆಂದು ಪಣತೊಟ್ಟಿದೆ. ಹೀಗಾಗೆ ಇಲ್ಲಿನ​ ವೆಸ್ಟ್​ಪ್ಯಾಕ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟಿ-20 ಪಂದ್ಯ ಅಭಿಮಾನಿಗಳ ಕುತೂಹಲದ ಕೇಂದ್ರ ಬಿಂದುವಾಗಿದೆ.

ಚುಟುಕು ಕ್ರಿಕೆಟ್ ಫೈಟ್​​ನಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದ್ದ ಕಿವೀಸ್​ಗೆ ಆರಂಭದಲ್ಲೇ ಆಘಾತವಾಗಿದೆ. ಸ್ಪೋಟಕ ಓಪನರ್ ಮಾರ್ಟಿನ್ ಗಪ್ಟಿಲ್ ಬೆನ್ನು ನೋವಿನಿಂದ ಚೇತರಿಸಿಕೊಂಡಿಲ್ಲ. ಪರಿಣಾಮ ಇಡೀ ಟಿ-20 ಸರಣಿಗೆ ಅಲಭ್ಯರಾಗಿದ್ದಾರೆ. ಗಪ್ಟಿಲ್ ಬದಲು ಅಂತಿಮ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಜೇಮ್ಸ್ ನಿಶಾಮ್​​ಗೆ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಕಳೆದ ಏಕದಿನ ಪಂದ್ಯಗಳಲ್ಲಿದ್ದ ಬಹುತೇಕ ಕಿವೀಸ್ ಆಟಗಾರರೇ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: ಐಪಿಎಲ್: ಟೂರ್ನಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ಟಾಪ್ 5 ಬ್ಯಾಟ್ಸ್​ಮನ್​ಗಳು ಇವರೆ ನೋಡಿ!

ಇತ್ತ ಟಿ-20 ತಂಡದಲ್ಲಿ ಟೀಂ ಇಂಡಿಯಾ ಪರ ಅವಕಾಶ ಪಡೆದಿರುವ ಆಲ್ರೌಂಡರ್ ಕೃನಾಲ್ ಪಾಂಡ್ಯ ತನ್ನ ಅಣ್ಣನ ಜೊತೆಯಲ್ಲಿ ಮೈದಾನಕ್ಕಿಳಿಯಲು ಎದುರು ನೋಡುತ್ತಿದ್ದಾರೆ. ಹಾರ್ದಿಕ್ ಜೊತೆಗೆ ಕೃನಾಲ್​ಗೂ ಪ್ಲೇಯಿಂಗ್ ಇಲೆವೆನ್​​ನಲ್ಲಿ ಅವಕಾಶ ಸಿಕ್ಕರೆ ಮೊದಲ ಬಾರಿಗೆ ಪಾಂಡ್ಯಾ ಬ್ರದರ್ಸ್ ಭಾರತದ ಪರ ಆಡುವ ಕನಸು ಈಡೇರಲಿದೆ. ಇನ್ನುಳಿದಂತೆ ಅಂತಿಮ ಏಕದಿನ ಪಂದ್ಯದಲ್ಲಿ ಆಡಿದ ರೋಹಿತ್ ಬಳಗ ವೆಲ್ಲಿಂಗ್ಟನ್​ನಲ್ಲಿ ವಿಲಿಯಮನ್ಸ್ ಪಡೆಯ ಸವಾಲು ಸ್ವೀಕರಿಸಲಿದೆ.

ಇದನ್ನೂ ಓದಿ: ಹರ್ಭಜನ್​ರಿಂದ ಮತ್ತೊಂದು ಕಪಾಳ ಮೋಕ್ಷ: ಈ ಬಾರಿ ಪೊಲೀಸ್​ಗೆ ಹೊಡೆದ ಭಜ್ಜಿ

ಒಟ್ಟಿನಲ್ಲಿ ಉಭಯ ತಂಡಗಳು ಶುಭಾರಂಭದ ನಿರೀಕ್ಷೆಯಲ್ಲಿದ್ದು, ಟಿ-20 ಕ್ರಿಕೆಟ್​​ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ಬಲಿಷ್ಠ ಸವಾಲೊಡ್ಡಬಲ್ಲದು ಎಂಬುದು ಈ ಹಿಂದೆ ಅನೇಕ ಬಾರಿ ಸಾಭೀತಾಗಿದೆ. ಹೀಗಾಗಿ 3 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿ ಭಾರತಕ್ಕೆ ಕಠಿಣ ಸವಾಲಾಗದೇ ಇರದು.
Loading...

ಪಂದ್ಯ ಆರಂಭ: ಭಾರತದ ಕಾಲ ಮಾನದ ಪ್ರಕಾರ ಮಧ್ಯಾಹ್ನ 12:30ಕ್ಕೆ

First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...