ನ್ಯೂಜಿಲೆಂಡ್ ಸರಣಿ ಭಾರತಕ್ಕೆ ನಿಜವಾದ ಅಗ್ನಿಪರೀಕ್ಷೆ: ಟೀಂ ಇಂಡಿಯಾ ಮಾಜಿ ಆಟಗಾರ

ನ್ಯೂಜಿಲೆಂಡ್ ತಂಡ ತುಂಬಾನೆ ಬಲಿಷ್ಠವಾಗಿದೆ. ಭಾರತಕ್ಕೆ ಕಠಿಣ ಸವಾಲೊಡ್ಡುವ ತಂಡಗಳ ಪೈಕಿ ನ್ಯೂಜಿಲೆಂಡ್ ಪ್ರಮುಖ ತಂಡ. ಯಾಕೆಂದರೆ, ಅವರ ತಂಡದಲ್ಲಿ ಅನುಭವಿ ಆಟಗಾರ ದಂಡೆ ಇದೆ.

Vinay Bhat | news18
Updated:January 21, 2019, 12:26 PM IST
ನ್ಯೂಜಿಲೆಂಡ್ ಸರಣಿ ಭಾರತಕ್ಕೆ ನಿಜವಾದ ಅಗ್ನಿಪರೀಕ್ಷೆ: ಟೀಂ ಇಂಡಿಯಾ ಮಾಜಿ ಆಟಗಾರ
ಭಾರತ ಕ್ರಿಕೆಟ್ ತಂಡ
  • News18
  • Last Updated: January 21, 2019, 12:26 PM IST
  • Share this:
ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್​ ಹಾಗೂ ಏಕದಿನ ಸರಣಿಯನ್ನು ಗೆದ್ದು ಬೀಗಿರುವ ಟೀಂ ಇಂಡಿಯಾಕ್ಕೆ ಈಗ ನಿಜವಾದ ಅಗ್ನಿಪರೀಕ್ಷೆ ಶುರುವಾಗಿದೆ. ಆಸೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಅಂತರದಿಂದ ಭಾರತ ಜಯ ಸಾಧಿಸಿ ಇತಿಹಾಸ ಸೃಷ್ಟಿಸಿತ್ತು.

ಸದ್ಯ ಕಿವೀಸ್ ನಾಡಿಗೆ ಬಂದಿಳಿದಿರುವ ಟೀಂ ಇಂಡಿಯಾ ಜ. 23 ರಂದು ಆಕ್ಲೆಂಡ್​​ನಲ್ಲಿ ಮೊದಲ ಏಕದಿನ ಪಂದ್ಯ ಆಡಲಿದೆ. ಈ ಮಧ್ಯೆ ಭಾರತ ತಂಡದ ಮಾಜಿ ಆಟಗಾರ ಮದನ್ ಲಾಲ್​ ಅವರು ನ್ಯೂಜಿಲೆಂಡ್ ಪ್ರವಾಸ ಭಾರತಕ್ಕೆ ಸುಲಭವಲ್ಲ. ಇದು ನಿಜವಾದ ಅಗ್ನಿಪರೀಕ್ಷೆ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್ ತಂಡ ತುಂಬಾನೆ ಬಲಿಷ್ಠವಾಗಿದೆ. ಭಾರತಕ್ಕೆ ಕಠಿಣ ಸವಾಲೊಡ್ಡುವ ತಂಡಗಳ ಪೈಕಿ ನ್ಯೂಜಿಲೆಂಡ್ ಪ್ರಮುಖ ತಂಡ. ಯಾಕೆಂದರೆ, ಅವರ ತಂಡದಲ್ಲಿ ಅನುಭವಿ ಆಟಗಾರ ದಂಡೆ ಇದೆ.

ಇದನ್ನೂ ಒದಿ: ಭಾರತ vs ನ್ಯೂಜಿಲೆಂಡ್: ಕಿವೀಸ್ ನಾಡಿಗೆ ಬಂದಿಳಿದ ಕೊಹ್ಲಿ ಪಡೆ

ವಿಶ್ವಕಪ್​​ಗೂ ಮುನ್ನ ಇಂತಹ ಬಲಿಷ್ಠ ತಂಡವನ್ನು ಎದುರಿಸುವುದು ಭಾರತಕ್ಕೆ ಸಿಕ್ಕಂತಹ ಉತ್ತಮ ಅವಕಾಶ. ಈ ತಂಡದೊಂದಿಗೆ ಭಾರತ ಆಡಿದರೆ ಪ್ರಯೋಜನವಾಗಲಿದೆ. ನಮ್ಮ ತಂಡದಲ್ಲಿನ ತಪ್ಪುಗಳನ್ನು ತಿದ್ದಲು ಇದೆ ಸರಿಯಾದ ಸಮಯ ಎಂದಿದ್ದಾರೆ.

ನ್ಯೂಜಿಲೆಂಡ್​​ನಲ್ಲಿ ಭಾರತ ಒಟ್ಟು ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ. ಈ ಪೈಕಿ ಮೊದಲ ಏಕದಿನ ಪಂದ್ಯ ಬುಧವಾರ ನಡೆಯಲಿದೆ.

ಏಕದಿನ ಸರಣಿ ಭಾರತ ತಂಡ:ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಕೇದರ್ ಜಾಧವ್, ಎಂ ಎಸ್ ಧೋನಿ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ, ವಿಜಯ್ ಶಂಕರ್, ಶುಭ್ಮನ್ ಗಿಲ್.

ಟಿ-20 ಸರಣಿಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೇದರ್ ಜಾಧವ್, ಎಂ ಎಸ್ ಧೋನಿ, ಕ್ರುನಾಲ್ ಪಾಂಡ್ಯ ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್,  ಭುವನೇಶ್ವರ್ ಕುಮಾರ್, ಸಿದ್ಧಾರ್ಥ್​ ಕೌಲ್, ಖಲೀಲ್ ಅಹ್ಮದ್, ವಿಜಯ್ ಶಂಕರ್, ಶುಭ್ಮನ್ ಗಿಲ್.

First published:January 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading