2ನೇ ಟಿ-20 ಪಂದ್ಯದಲ್ಲಿ ನೀವ್ಯಾರು ಗಮನಿಸದ 3 ಪ್ರಮುಖ ವಿಷಯಗಳು ಇಲ್ಲಿವೆ ನೋಡಿ

27 ವರ್ಷ ಪ್ರಾಯದ ಕ್ರುನಾಲ್ ಪಾಂಡ್ಯ ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲಲು ಪ್ರಮುಖ ಪಾತ್ರ ವಹಿಸಿದರು. ತಾನು ಮಾಡಿದ 4 ಓವರ್​ನಲ್ಲಿ ಕೇವಲ 28 ರನ್ ನೀಡಿ ಕಿವೀಸ್​ನ ಪ್ರಮುಖ 3 ವಿಕೆಟ್ ಕಿತ್ತರು.

Vinay Bhat | news18
Updated:February 8, 2019, 4:37 PM IST
2ನೇ ಟಿ-20 ಪಂದ್ಯದಲ್ಲಿ ನೀವ್ಯಾರು ಗಮನಿಸದ 3 ಪ್ರಮುಖ ವಿಷಯಗಳು ಇಲ್ಲಿವೆ ನೋಡಿ
ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು
  • News18
  • Last Updated: February 8, 2019, 4:37 PM IST
  • Share this:
ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ನಾಯಕ ರೋಹಿತ್ ಶರ್ಮಾರ ಅರ್ಧಶತಕ ಹಾಗೂ ಕ್ರುನಾಲ್ ಪಾಂಡ್ಯರ ಸ್ಪಿನ್ ತಂತ್ರದಿಂದ ಭಾರತ ಗೆದ್ದು ಬೀಗಿದ್ದು, ಸರಣಿ ಗೆಲ್ಲುವ ಆಸೆ ಜೀವಂತವಾಗಿರಿಸಿದೆ.

ಅಂತೆಯೆ ಇಂದಿನ ಎರಡನೇ ಟಿ-20 ಪಂದ್ಯದಲ್ಲಿ ನೀವ್ಯಾರು ಗಮನಿಸದಂತಹ ಕೆಲವು ವಿಷಯಗಳಿವೆ. ಅವು ಏನು? ಇಲ್ಲಿ ಓದಿ..

ಕ್ರುನಾಲ್ ಪಾಂಡ್ಯ:

27 ವರ್ಷ ಪ್ರಾಯದ ಕ್ರುನಾಲ್ ಪಾಂಡ್ಯ ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲಲು ಪ್ರಮುಖ ಪಾತ್ರ ವಹಿಸಿದರು. ತಾನು ಮಾಡಿದ 4 ಓವರ್​ನಲ್ಲಿ ಕೇವಲ 28 ರನ್ ನೀಡಿ ಕಿವೀಸ್​ನ ಪ್ರಮುಖ 3 ವಿಕೆಟ್ ಕಿತ್ತರು. ಅದುಕೂಡ ಕಾಲಿನ್ ಮನ್ರೊ, ಡಾರ್ಲ್​​ ಮಿಚೆಲ್ ಹಾಗೂ ನಾಯಕ ಕೇನ್ ವಿಲಿಯಮ್ಸನ್​​ರಂತಹ ಪ್ರಮುಖ ಬ್ಯಾಟ್ಸ್​ಮನ್​​ಗಳನ್ನು ಪೆವಿಲಿಯನ್​​ಗೆ ಅಟ್ಟಿದರು. ಈ ಮೂಲಕ ಕ್ರುನಾಲ್ ನ್ಯೂಜಿಲೆಂಡ್ ವಿರುದ್ಧ 3 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಂಡರು.

ರೋ'ಹಿಟ್' ದಾಖಲೆ:

ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ 4 ಸಿಕ್ಸ್​ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ. ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​​ನಲ್ಲಿ ರೋಹಿತ್ ಒಟ್ಟು 100 ಸಿಕ್ಸರ್​​ ಸಿಡಿಸಿದ ಮೂಲಕ ಹೊಸ ದಾಖಲೆ ಬರೆದರು. ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಕ್ರಿಸ್ ಗೇಲ್ ಹಾಗೂ ಮಾರ್ಟಿನ್ ಗಪ್ಟಿಲ್ 100 ಸಿಕ್ಸ್​​ ಬಾರಿಸಿದ ಸಾಧನೆ ಮಾಡಿದ್ದರು. ಸದ್ಯ ರೋಹಿತ್ ಕೂಡ ಈ ಸಾಧನೆ ಮಾಡಿದ ವಿಶ್ವದ ಮೂರನೇ ಹಾಗೂ ಭಾರತದ ಮೊತ್ತ ಮೊದಲ ಬ್ಯಾಟ್ಸ್​ಮನ್​​​ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಇದರ ಜೊತೆಗೆ ರೋಹಿತ್ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ 2288 ರನ್ ಕಲೆಹಾಕಿ, ಅತಿ ಹೆಚ್ಚು ರನ್​ ಗಳಿಸಿದ ಬ್ಯಾಟ್ಸ್​ಮನ್​​​ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಇದನ್ನೂ ಓದಿ: ರೋಹಿತ್ ಅಬ್ಬರ, ಕ್ರುನಾಲ್ ಸ್ಪಿನ್ ಮೋಡಿ; ಸರಣಿ ಸಮಬಲ ಮಾಡಿಕೊಂಡ ಭಾರತ
Loading...

ಡೆತ್ ಓವರ್​​ನಲ್ಲಿ ಕೇವಲ 29 ರನ್:

ಜಸ್​​ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್​​ರಂತಹ ಸ್ಟಾರ್ ಬೌಲರ್​ಗಳು ಇಂದಿನ ಪಂದ್ಯದಲ್ಲಿ ಇದ್ದಿಲ್ಲವಾದರು ಟೀಂ ಇಂಡಿಯಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಅದರಲ್ಲು ಕೊನೆಯ 4 ಓವರ್​​​ಗಳಲ್ಲಿ ಭಾರತ ಕೇವಲ 29 ರನ್ ನೀಡಿ ನ್ಯೂಜಿಲೆಂಡ್ ಅನ್ನು 160 ರನ್​​​ಗಳೊಳಗೆ ಕಟ್ಟಿಹಾಕುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.

First published:February 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...