8 ಬ್ಯಾಟ್ಸ್​ಮನ್​​ಗಳಿದ್ದರು ಭಾರತದ ಮೊತ್ತ 150ರ ಗಡಿ ದಾಟಲಿಲ್ಲ: ಇಲ್ಲಿದೆ ಪಂದ್ಯದ ಹೈಲೈಟ್ಸ್​

ಭಾರತ ಪರ 3 ಆಲ್ರೌಂಡರ್​​ಗಳು, 3 ವಿಕೆಟ್ ಕೀಪರ್​​​ಗಳು ಸೇರಿದಂತೆ ಒಟ್ಟು 8 ಮಂದಿ ಬ್ಯಾಟ್ಸ್​ಮನ್​ಗಳು ಕಣಕ್ಕಿಳಿದಿದ್ದರು. ಆದರೂ ತಂಡದ ಮೊತ್ತವನ್ನು ಕನಿಷ್ಠ 150ರ ಗಡಿ ದಾಟಿಸಲು ಸಾಧ್ಯವಾಗಿಲ್ಲ.

Vinay Bhat | news18
Updated:February 6, 2019, 6:11 PM IST
8 ಬ್ಯಾಟ್ಸ್​ಮನ್​​ಗಳಿದ್ದರು ಭಾರತದ ಮೊತ್ತ 150ರ ಗಡಿ ದಾಟಲಿಲ್ಲ: ಇಲ್ಲಿದೆ ಪಂದ್ಯದ ಹೈಲೈಟ್ಸ್​
ನಿರಾಸೆಯಿಂದ ಪೆವಿಲಿಯನ್​ನತ್ತ ಹೆಜ್ಜೆ ಹಾಕುತ್ತಿರುವ ವಿಜಯ್ ಶಂಕರ್ (pic: twitter)
Vinay Bhat | news18
Updated: February 6, 2019, 6:11 PM IST
ವೆಲ್ಲಿಂಗ್ಟನ್​​: ಇಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ಟೀಂ ಇಂಡಿಯಾ ವಿರುದ್ಧ ಸೇಡು ತೀರಿಸಿಕೊಂಡಿದೆ. ಏಕದಿನ ಸರಣಿಯಲ್ಲಿ ಹೀನಾಯ ಸೋಲು ಕಂಡ ಬಳಿಕ ನಡೆದ ಮೊದಲ ಚುಟುಕು ಫೈಟ್​​ನಲ್ಲಿ ಅಬ್ಬರದ ಬ್ಯಾಟಿಂಗ್ ಜೊತೆಗೆ ಜಬರ್ದಸ್ತ್​ ಬೌಲಿಂಗ್​ ಪ್ರದರ್ಶನದಿಂದಾಗಿ ಕೇನ್ ಪಡೆ ಗೆಲುವಿನ ಆರಂಭ ಪಡೆದುಕೊಂಡಿದ್ದಾರೆ.

ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ರೋಹಿತ್‌ ಶರ್ಮಾ ಪಡೆಯ ಲೆಕ್ಕಾಚಾರವನ್ನು ಎದುರಾಳಿ ತಂಡದ ಆರಂಭಿಕ ದಾಂಡಿಗ ಟಿಮ್ ಸೀಫರ್ಟ್‌ ತಲೆಕೆಳಗಾಗಿಸಿದರು. ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ ಅರಂಭಿಕ ಜೋಡಿ ಟೀಂ ಇಂಡಿಯಾ ಬೌಲರ್​ಗಳ ಬೆವರಿಳಿಸಿಬಿಟ್ಟರು. 34 ರನ್​ಗಳಿಸಿದ ಕಾಲಿನ್ ಮನ್ರೊ ಜೊತೆಗೂಡಿ ಅಬ್ಬರಿಸಿದ ಟಿಮ್ ಸೀಫರ್ಟ್​​ ಸಿಕ್ಸರ್​​ಗಳ ಸುರಿಮಳೆಗೈದರು.

43 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್​ ಜೊತೆಗೆ 84ರನ್​ ಸಿಡಿಸಿದ ಸೀಫರ್ಟ್​ಗೆ ಕೊನೆಗೂ ಖಲೀಲ್ ಅಹ್ಮದ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಆದರೆ ಅದಾಗಲೇ ಭುವನೇಶ್ವರ್ ಕುಮಾರ್​, ಮೊದಲ ಬಾರಿಗೆ ಅಂತರಾಷ್ಟ್ರೀಯ ಪಂದ್ಯದಲ್ಲಿ ಜೊತೆಯಾಗಿ ಕಣಕ್ಕಿಳಿದಿದ್ದ ಪಾಂಡ್ಯಾ ಬ್ರದರ್ಸ್​ ಹೆಚ್ಚು ರನ್​ ಬಿಟ್ಟುಕೊಟ್ಟಿದ್ದರು. ಪರಿಣಾಮ 20 ಓವರ್​ಗೆ ಕಿವೀಸ್ 6 ವಿಕೆಟ್ ನಷ್ಟಕ್ಕೆ 219ರನ್​ಗಳ ಬೃಹತ್​ ಮೊತ್ತ ದಾಖಲಿಸಿತು.

ಇದನ್ನೂ ಓದಿ: (VIDEO): ಬೌಂಡರಿ ಲೈನ್​​​ ಬಳಿ ದಿನೇಶ್ ಕಾರ್ತಿಕ್​​​ರಿಂದ ಸೂಪರ್ ಕ್ಯಾಚ್

220 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್​​ಗೆ ಶಿಖರ್ ಧವನ್​, ವಿಜಯ್ ಶಂಕರ್ ಸ್ವಲ್ಪ ಮಟ್ಟಿಗೆ ಹೋರಾಟ ಪ್ರದರ್ಶಿಸಿದರು ಹೆಚ್ಚು ಹೊತ್ತು ಆಟ ನಡೆಯಲಿಲ್ಲ. ಉತ್ತಮವಾಗೇ ಆಡುತ್ತಿದ್ದ ಶಿಖರ್ ಧವನ್​ 29ರನ್​ಗೆ ಔಟಾಗುತ್ತಿದ್ದಂತೆ, ರಿಷಭ್​ ಪಂತ್​​​ ಪೆವಿಲಿಯನ್ ಸೇರಿಕೊಂಡರು. ಫಿನಿಷರ್​ಗಳಾದ ದಿನೇಶ್ ಕಾರ್ತಿಕ್​, ಹಾರ್ದಿಕ್ ಪಾಂಡ್ಯ ಆಟ ಕೂಡ ನಡೆಯಲಿಲ್ಲ. ಧೋನಿ ಕೊನೆಯಲ್ಲಿ ಬಂದು ಪೆವಿಲಿಯನ್ ಸೇರಿಕೊಂಡರು. ಪರಿಣಾಮ ಇನ್ನೂ 4ಎಸೆತಗಳಿರುವಂತೆ ಭಾರತ 139 ರನ್​​​ಗಳಿಗೆ ಆಲೌಟ್ ಆಯಿತು

80 ರನ್​ಗಳ ಭರ್ಜರಿ ಜಯ ಸಾಧಿಸಿದ ನ್ಯೂಜಿಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರೆ, ಟಿ-20 ಕ್ರಿಕೆಟ್​ ಇತಿಹಾಸದಲ್ಲಿ ಭಾರತಕ್ಕಿದ್ದು ಅತ್ಯಂತ ಹೀನಾಯ ಸೋಲಾಯಿತು.

ಇದನ್ನೂ ಓದಿ: ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಹೀನಾಯ ಸೋಲು; ಕಿವೀಸ್ ಭರ್ಜರಿ ಶುಭಾರಂಭ
Loading...

ಭಾರತ ಪರ 3 ಆಲ್ರೌಂಡರ್​​ಗಳು, 3 ವಿಕೆಟ್ ಕೀಪರ್​​​ಗಳು ಸೇರಿದಂತೆ ಒಟ್ಟು 8 ಮಂದಿ ಬ್ಯಾಟ್ಸ್​ಮನ್​ಗಳು ಕಣಕ್ಕಿಳಿದಿದ್ದರು. ಆದರೂ ತಂಡದ ಮೊತ್ತವನ್ನು ಕನಿಷ್ಠ 150ರ ಗಡಿ ದಾಟಿಸಲು ಸಾಧ್ಯವಾಗಿಲ್ಲ. ಪ್ರಮುಖ ಆಟಗಾರರಾದ ಕುಲ್ದೀಪ್ ಯಾದವ್ ಹಾಗೂ ಕೇದರ್ ಜಾಧವ್​​ರನ್ನು ಯಾಕೆ ಕಣಕ್ಕಿಳಿಸಿಲ್ಲ ಎಂಬ ಪ್ರಶ್ನೆಯೂ ನೆಟ್ಟಗರಿಂದ ಕೇಳಿಬರುತ್ತಿದೆ.

ಇಲ್ಲಿದೆ ಪಂದ್ಯದ ಸಂಪೂರ್ಣ ಹೈಲೈಟ್ಸ್​:

First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...