• Home
  • »
  • News
  • »
  • sports
  • »
  • IND vs NZ: ಭಾರತ-ನ್ಯೂಜಿಲೆಂಡ್‌ ಏಕದಿನ ಸರಣಿ ಮೇಲೆ ವಿಶ್ವದ ಕಣ್ಣು, ಸೀರಿಸ್ ಬಳಿಕ ಬಿಗ್ ಅನೌನ್ಸ್ ಮಾಡಲಿದೆ ಐಸಿಸಿ!

IND vs NZ: ಭಾರತ-ನ್ಯೂಜಿಲೆಂಡ್‌ ಏಕದಿನ ಸರಣಿ ಮೇಲೆ ವಿಶ್ವದ ಕಣ್ಣು, ಸೀರಿಸ್ ಬಳಿಕ ಬಿಗ್ ಅನೌನ್ಸ್ ಮಾಡಲಿದೆ ಐಸಿಸಿ!

IND VS NZ 2023

IND VS NZ 2023

IND vs NZ: ನ್ಯೂಜಿಲೆಂಡ್‌ಗೆ ಆತಿಥ್ಯ ವಹಿಸಲು ಟೀಂ ಇಂಡಿಯಾ ಸಿದ್ಧವಾಗಿದೆ. ಎರಡು ತಂಡಗಳ ನಡುವೆ ODI ಮತ್ತು ನಂತರ T20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿ ನಾಳೆಯಿಂದ ಆರಂಭವಾಗಲಿದೆ.

  • Share this:

ಭಾರತ ತಂಡವು ಶ್ರೀಲಂಕಾ (IND vs SL) ವಿರುದ್ಧದ ಮೊದಲ ಟಿ20 ಮತ್ತು ನಂತರ ಏಕದಿನ ಸರಣಿಯಲ್ಲಿ ಅಮೋಘ ಜಯದೊಂದಿಗೆ ವರ್ಷವನ್ನು ಪ್ರಾರಂಭಿಸಿದೆ. ಇದೀಗ ಟೀಂ ಇಂಡಿಯಾ ನ್ಯೂಜಿಲೆಂಡ್‌ (IND vs NZ) ವಿರುದ್ಧದ ಸರಣಿಗೆ ಸಿದ್ಧವಾಗಿದೆ. ಉಭಯ ತಂಡಗಳ ನಡುವೆ ಏಕದಿನ ಸರಣಿ ಮತ್ತು ನಂತರ ಟಿ20 ಪಂದ್ಯಗಳು ನಡೆಯಲಿವೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಈ ಸರಣಿಗಾಗಿ ಕಾಯುತ್ತಿದ್ದಾರೆ. ಭಾರತ ತಂಡ ವರ್ಷದ ಎರಡನೇ ದೊಡ್ಡ ಪರೀಕ್ಷೆಗೆ ಸಿದ್ಧವಾಗಿದೆ. ಈಗ ಏಕದಿನ ಮತ್ತು ಟಿ20 ಸ್ವರೂಪದಲ್ಲಿ ತಂಡವು ನ್ಯೂಜಿಲೆಂಡ್ ತಂಡವನ್ನು ಎದುರಿಸಬೇಕಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 18 ಬುಧವಾರದಿಂದ ಪ್ರಾರಂಭವಾಗಲಿದೆ. ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿದ ನಂತರ, ಟೀಂ ಇಂಡಿಯಾ (Team India) ಕಿವೀಸ್ ತಂಡದ ವಿರುದ್ಧ ಮತ್ತೆ ರೀತಿ ಅಬ್ಬರಿಸಲು ಸಿದ್ಧವಾಗಿದೆ.


ಏಕದಿನ ಸರಣಿಯ ಮೇಲೆ ಐಸಿಸಿ ಕಣ್ಣು:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಏಕದಿನ ಸರಣಿಗಾಗಿ ವಿಶ್ವದಾದ್ಯಂತದ ಅಭಿಮಾನಿಗಳ ಜೊತೆಗೆ ಐಸಿಸಿ ಕೂಡ ಕಾತುರವಾಗಿದೆ. ವಾಸ್ತವವಾಗಿ, ಶ್ರೀಲಂಕಾವನ್ನು 3-0 ಅಂತರದಿಂದ ಸೋಲಿಸಿದ ನಂತರ, ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾ ನಂಬರ್ ಒನ್ ಆಗುವ ಅವಕಾಶವನ್ನು ಹೊಂದಿದೆ. ಸದ್ಯ ನ್ಯೂಜಿಲೆಂಡ್ 117 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತ ತಂಡ 110 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಒಂದು ವೇಳೆ ಟೀಂ ಇಂಡಿಯಾಚನ್ಯೂಜಿಲ್ಯಾಂಡ್ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿದರೆ ಭಾರತ 114 ಅಂಕ ಗಳಿಸುತ್ತದೆ. ಸೋಲಿನಿಂದ ನ್ಯೂಜಿಲೆಂಡ್ ತಂಡ 111 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಕುಸಿಯಲಿದೆ. ಪ್ರತಿ ಸರಣಿಯ ಅಂತ್ಯದ ನಂತರ ICC ಹೊಸ ಶ್ರೇಯಾಂಕಗಳನ್ನು ಬಿಡುಗಡೆ ಮಾಡುತ್ತದೆ.


ವಿಶ್ವಕಪ್​ ಮೇಲೆ ರೋಹಿತ್ ಕಣ್ಣು:


ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೂ ಮುನ್ನ ವಿರಾಟ್ ಕೊಹ್ಲಿ ಅಗ್ರ ಫಾರ್ಮ್‌ಗೆ ಮರಳಿದ್ದಾರೆ. ಬಾಂಗ್ಲಾದೇಶ ಪ್ರವಾಸದಲ್ಲಿ ಶತಕ ಬಾರಿಸಿದ ನಂತರ, ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಶತಕಗಳನ್ನು ಗಳಿಸಿದರು. ಬೌಲಿಂಗ್ ಮೂಲಕ ಮೊಹಮ್ಮದ್ ಸಿರಾಜ್ ತೋರಿದ ರೀತಿ, ಜಸ್ಪ್ರೀತ್ ಬುಮ್ರಾ ಕೊರತೆಯನ್ನು ನೀಗಿಸಿದೆ. ನಾಯಕ ರೋಹಿತ್ ಶರ್ಮಾ T20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದರು. ಆದರೆ ತವರಿನಲ್ಲಿ ODI ವಿಶ್ವಕಪ್ ಗೆಲ್ಲುವ ಮೂಲಕ ಮತ್ತೆ 2011ರ ಕ್ಷಣವನ್ನು ಮರುಕಳಿಸಲು ಸಿದ್ಧರಾಗಿದ್ದಾರೆ.  ಈ ಸರಣಿಗೂ ಮುನ್ನ ಶ್ರೇಯಸ್​​ ಅಯ್ಯರ್ ತಂಡದಿಂದ ಹೊರನಡೆದಿದ್ದಾರೆ.


ಇದನ್ನೂ ಓದಿ: IND vs NZ ODI: ಕಿವೀಸ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್; ಸ್ಟಾರ್​​ ಬ್ಯಾಟ್ಸ್​ಮನ್ ಔಟ್, RCB ಆಟಗಾರನಿಗೆ ಸಿಕ್ತು ಚಾನ್ಸ್!


ನ್ಯೂಜಿಲೆಂಡ್ ವಿರುದ್ಧ ಭಾರತದ ODI ತಂಡ:


ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರಜತ್ ಪಾಟಿದಾರ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.
ಭಾರತ-ನ್ಯೂಜಿಲೆಂಡ್ ODI ಸರಣಿ ವೇಳಾಪಟ್ಟಿ:


ಮೊದಲ ಏಕದಿನ, ಜನವರಿ 18, ಮಧ್ಯಾಹ್ನ 1.30, ಹೈದರಾಬಾದ್
ಎರಡನೇ ಏಕದಿನ, ಜನವರಿ 21, ಮಧ್ಯಾಹ್ನ 1.30, ರಾಯ್‌ಪುರ
ಮೂರನೇ ಏಕದಿನ, ಜನವರಿ 24, ಮಧ್ಯಾಹ್ನ 1.30, ಇಂದೋರ್

Published by:shrikrishna bhat
First published: