• Home
  • »
  • News
  • »
  • sports
  • »
  • IND vs NZ: ಭಾರತ-ಕಿವೀಸ್​ ಪಂದ್ಯಕ್ಕೆ ಮಳೆ ಅಡ್ಡಿ, ಟಾಸ್​ ಮತ್ತಷ್ಟು ವಿಳಂಬ

IND vs NZ: ಭಾರತ-ಕಿವೀಸ್​ ಪಂದ್ಯಕ್ಕೆ ಮಳೆ ಅಡ್ಡಿ, ಟಾಸ್​ ಮತ್ತಷ್ಟು ವಿಳಂಬ

IND sv NZ

IND sv NZ

IND vs NZ: ವೆಲ್ಲಿಂಗ್ಟನ್ ಮೈದಾನದಲ್ಲಿ ಮಳೆಯಾಗುತ್ತಿದೆ. ಕಾಮೆಂಟೇಟರ್ ಗಳು ಛತ್ರಿ ಹಿಡಿದು ಕಾಮೆಂಟರಿ ಮಾಡುತ್ತಿದ್ದಾರೆ. ಟಾಸ್ ವಿಳಂಬವಾಗlide

  • Share this:

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾ ಇಂದು ನ್ಯೂಜಿಲ್ಯಾಂಡ್ (India vs New Zealand)​ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಟಿ20 ಸರಣಿಯ ಮೊದಲ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ (Wellington) ನಡೆಯಲಿದೆ.  ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಿದೆ.  ವೆಲ್ಲಿಂಗ್ಟನ್‌ನಲ್ಲಿ ಧಾರಾಕಾರಾ ಮಳೆ ಸುರಿಯುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ಪಂದ್ಯದ ಟಾಸ್​ ವಿಳಂಬವಾಗಲಿದೆ ಎಂದು ತಿಳಿದುಬಂದಿದೆ. ಆದರೆ ಇದೀಗ ಮಳೆಯ ಪ್ರಮಾಣ ತಗ್ಗಿದೆ ಎನ್ನಲಾಗಿದೆ. ಆದರೂ ಪಿಚ್​ ಒಣಗುವ ತನಕ ಪಂದ್ಯ ಆರಂಭವಾಗುವುದಿಲ್ಲ.


ಪಂದ್ಯಕ್ಕೆ ಮಳೆ ಅಡ್ಡಿ:


ಇನ್ನು, ವೆಲ್ಲಿಂಗ್‌ಟನ್ ಮೈದಾನದಲ್ಲಿ ಮತ್ತೆ ಮಳೆ ಶುರುವಾಗಿದೆ. ಮಳೆಯಿಂದಾಗಿ ಇನ್ನೂ ಟಾಸ್ ನಡೆದಿಲ್ಲ. ಇಂದು ಸಂಜೆ ವೇಳೆಗೆ ವೆಲ್ಲಿಂಗ್ಟನ್ ನಗರದಲ್ಲಿ ಶೇ.54 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಲ್ಲದೇ ತಾಪಮಾನವು 15 ರಿಂದ 19 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ. ಅಲ್ಲದೇ ಅಂಪೈರ್‌ಗಳು ಮತ್ತೊಮ್ಮೆ ಪಿಚ್‌ ಪರಿಶೀಲಿಸಿ ಟಾ್ಸ್ ಮತ್ತು ಪಂದ್ಯದ ಆರಂಭದ ಬಗ್ಗೆ ಮುಂದಿನ ಮಾಹಿತಿ ನೀಡಬೇಕಿದೆ.ವೆಲ್ಲಿಂಗ್ಟನ್ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಇಂದು ರಾತ್ರಿ 10ರ ವೇಳೆಗೆ ಮಳೆ ಸಾಧ್ಯತೆ ಶೇ.76ಕ್ಕೆ ಏರಿಕೆಯಾಗಲಿದೆ. 12ರ ನಂತರ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅದೇ ಸಮಯದಲ್ಲಿ, ಗಾಳಿಯು 10-15 ಕಿಮೀ ವೇಗದಲ್ಲಿ ಬೀಸುತ್ತದೆ ಮತ್ತು ತೇವಾಂಶವು 52 ಪ್ರತಿಶತದವರೆಗೆ ಇರುತ್ತದೆ. ತಾಪಮಾನವು 20 ಡಿಗ್ರಿಗಳಷ್ಟು ಇರುತ್ತದೆ, ಅಂದರೆ ಮಳೆ, ಬಲವಾದ ಗಾಳಿ ಜೊತೆಗೆ ಚಳಿ ಇರುತ್ತದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಒಂದು ವೇಳೆ ಮಳೆ ಬಂದರೆ ಪಂದ್ಯ ಸಂಪೂರ್ಣ ರದ್ದಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಉಭಯ ತಂಡಗಳಿಗೆ ಉಳಿದ 2 ಪಂದ್ಯ ಮಹತ್ವದ್ದಾಗಿರುತ್ತದೆ.


ನ್ಯೂಜಿಲ್ಯಾಂಡ್​ ಪ್ರವಾಸದ ವೇಳಾಪಟ್ಟಿ:


ಮೊದಲ ಟಿ20 ಪಂದ್ಯ - ನವೆಂಬರ್ 18 - ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂ
ಎರಡನೇ ಟಿ20 ಪಂದ್ಯ - ನವೆಂಬರ್ 20 - ಬೇ ಓವಲ್ ಮೌಂಟ್ ಮೌಂಗನುಯಿ
ಮೂರನೇ ಟಿ20 ಪಂದ್ಯ - ನವೆಂಬರ್ 22 - ಮೆಕ್ಲೀನ್ ಪಾರ್ಕ್, ಸ್ಕೈ ಸ್ಟೇಡಿಯಂ


ಮೊದಲ ODI - 25 ನವೆಂಬರ್ - ಈಡನ್ ಪಾರ್ಕ್, ಆಕ್ಲೆಂಡ್
ಎರಡನೇ ODI - ನವೆಂಬರ್ 27 - ಸೆಡನ್ ಪಾರ್ಕ್, ಹ್ಯಾಮಿಲ್ಟನ್
ಮೂರನೇ ODI - 30 ನವೆಂಬರ್ - ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್


ಇದನ್ನೂ ಓದಿ: IND vs NZ: ಈ ಮೂವರು ಕಿವೀಸ್ ವಿರುದ್ಧ ಅಬ್ಬರಿಸಲೇ ಬೇಕು; ಆಡಿದ್ರೆ ಪಾಸ್, ಇಲ್ಲಾಂದ್ರೆ ಟೀಂ ಇಂಡಿಯಾದಿಂದ ಗೇಟ್‌ಪಾಸ್!


IND vs NZ ಸಂಭಾವ್ಯ ಪ್ಲೇಯಿಂಗ್ 11:


ಭಾರತ ಸಂಭಾವ್ಯ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ(C), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ , ಶ್ರೇಯಸ್ ಅಯ್ಯರ್ , ದೀಪಕ್ ಹೂಡಾ , ರಿಷಭ್ ಪಂತ್, ಇಶಾನ್ ಕಿಶನ್, ಯಜ್ವುಂದ್ರ ಚಹಾಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್.


ನ್ಯೂಜಿಲ್ಯಾಂಡ್​ ಸಂಭಾವ್ಯ ಪ್ಲೇಯಿಂಗ್ 11: ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಲೂಕಿ ಫರ್ಗುಸನ್, ಟಿಮ್ ಸೌಥಿ ಮತ್ತು ಇಶ್ ಸೋಧಿ.

Published by:shrikrishna bhat
First published: