ಶುಭ್ಮನ್ ಗಿಲ್​​ಗೆ ಅವಕಾಶ ನೀಡಿ, ವಿಶ್ವಕಪ್​ಗೆ ಒಬ್ಬ ಉತ್ತಮ ಆಟಗಾರ ಸಿಗಬಹುದು

ಬೆಂಚ್ ಕಾಯುವುದನ್ನು ಬಿಟ್ಟು ನ್ಯೂಜಿಲೆಂಡ್ ವಿರುದ್ಧದ 4ನೇ ಹಾಗೂ 5ನೇ ಏಕದಿನ ಪಂದ್ಯದಲ್ಲಿ ಗಿಲ್ ಕಣಕ್ಕಿಳಿಯಬೇಕು. ಅವರು ತಂಡದಲ್ಲಿ ಸೇರಲು ಅರ್ಹತೆ ಹೊಂದಿದ್ದಾರೆ- ಸೌರವ್ ಗಂಗೂಲಿ

Vinay Bhat | news18
Updated:May 2, 2019, 3:23 PM IST
ಶುಭ್ಮನ್ ಗಿಲ್​​ಗೆ ಅವಕಾಶ ನೀಡಿ, ವಿಶ್ವಕಪ್​ಗೆ ಒಬ್ಬ ಉತ್ತಮ ಆಟಗಾರ ಸಿಗಬಹುದು
ಸೌರವ್ ಗಂಗೂಲಿ ಹಾಗೂ ಶುಭ್ಮನ್ ಗಿಲ್
  • News18
  • Last Updated: May 2, 2019, 3:23 PM IST
  • Share this:
2018ರಲ್ಲಿ ಭಾರತ ಅಂಡರ್-19 ತಂಡದ ಪರ 372 ರನ್ ಗಳಿಸಿ ಅಂಡರ್-19 ವಿಶ್ವಕಪ್​​​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಶುಭ್ಮನ್ ಗಿಲ್ ಈಗ ಅಂತರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡುವ ಸಮಯ ಬಂದಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

'ಬೆಂಚ್ ಕಾಯುವುದನ್ನು ಬಿಟ್ಟು ನ್ಯೂಜಿಲೆಂಡ್ ವಿರುದ್ಧದ 4ನೇ ಹಾಗೂ 5ನೇ ಏಕದಿನ ಪಂದ್ಯದಲ್ಲಿ ಗಿಲ್ ಕಣಕ್ಕಿಳಿಯಬೇಕು. ಅವರು ತಂಡದಲ್ಲಿ ಸೇರಲು ಅರ್ಹತೆ ಹೊಂದಿದ್ದಾರೆ. ಯಾರಿಗೆ ಗೊತ್ತು ಗಿಲ್​ಗೆ ಈಗ ಅವಕಾಶ ನೀಡಿದರೆ, ಮುಂಬರುವ ವಿಶ್ವಕಪ್​​ಗೆ ಟೀಂ ಇಂಡಿಯಾಕ್ಕೆ ಒಬ್ಬ ಉತ್ತಮ ಆಟಗಾರ ಸಿಕ್ಕರು ಸಿಗಬಹುದು' ಎಂದಿದ್ದಾರೆ.

ಶುಭ್ಮನ್ ಗಿಲ್ ಅವರು ಕಳೆದ ಒಂದು ವರ್ಷದಿಂದ ಭರ್ಜರಿ ಫಾರ್ಮ್​ನಲ್ಲಿದ್ದಾರೆ. 2018ರ ಐಪಿಎಲ್ ಸೀಸನ್​ನಲ್ಲು ಕೋಲ್ಕತ್ತಾ ನೈಟ್ ರೈಡರ್ಸ್​​ ಪರ 19 ವರ್ಷ ಪ್ರಾಯದ ಗಿಲ್ ಒಟ್ಟು 203 ರನ್ ಕಲೆಹಾಕಿದ್ದರು. ಅಂತೆಯೆ ರಣಜಿ ಟ್ರೋಫಿಯಲ್ಲಿ ಪಂಜಾಬ್ ತಂಡದ ಪರ ಆಡಿದ ಗಿಲ್ ತಮಿಳುನಾಡು ತಂಡದ ವಿರುದ್ಧ 328 ಎಸೆತಗಳಲ್ಲಿ 268 ರನ್ ಬಾರಿಸಿದ್ದರು.

ಇದನ್ನೂ ಓದಿ: ನಾಳೆ 4ನೇ ಏಕದಿನ: ವಿರಾಟ್ ಕೊಹ್ಲಿ ಅನುಪಸ್ಥಿತಿ; ಮಾನ ಉಳಿಸಿಕೊಳ್ಳುತ್ತಾ ಕಿವೀಸ್?

ಇನ್ನು ಮೂರನೇ ಏಕದಿನ ಪಂದ್ಯ ಮುಗಿದ ಬಳಿಕ ಸ್ವತಃ ಕೊಹ್ಲಿ ಅವರೆ ಶುಭ್ಮನ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದರು. 'ಟೀಂ ಇಂಡಿಯಾದಲ್ಲಿ ಮುಂದೊಂದು ದಿನ ನನ್ನ ಸ್ಥಾನವನ್ನು ಯಾರಾದರೊಬ್ಬರು ತುಂಬಲೇ ಬೇಕು. ಸದ್ಯ ಯುವ ಪ್ರತಿಭಾವಂತ ಆಟಗಾರರು ತಂಡ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅದರಲ್ಲು ಶುಭ್ಮನ್​ ಗಿಲ್ ಹಾಗೂ ಪೃಥ್ವಿ ಶಾ ಸ್ಟಾರ್ ಆಟಗಾರರು. ಸಿಕ್ಕ ಅವಕಾಶವನ್ನು ಸರಿಯಾಗೆ ಉಪಯೋಗಿಸಿ ಕೊಳ್ಳುತ್ತಿದ್ದಾರೆ. ಗಿಲ್ 19 ವರ್ಷಕ್ಕೆ ಈ ಮಟ್ಟಕ್ಕೇರಿದ್ದಾರೆ. ಅವರು ನೆಟ್​​ನಲ್ಲಿ ಅಭ್ಯಾಸ ಮಾಡುತ್ತಿರುವುದನ್ನು ಗಮನಿಸಿದೆ. ನಾನು 19 ವರ್ಷದವನಾಗಿದ್ದಾಗ ಗಿಲ್​ಗಿರುವ ಶೇ. 10 ರಷ್ಟು ಕೌಶಲ್ಯ ನನ್ನಲ್ಲಿರಲಿಲ್ಲ. ಅವರ ಮುಂದೆ ನಾನೇನು ಇಲ್ಲ. ಗಿಲ್ ಅವರಿಗೆ ಉತ್ತಮ ಭವಿಷ್ಯವಿದೆ' ಎಂದು ಹೇಳಿದ್ದರು.

First published:January 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading