ಧವನ್ ಫಿಫ್ಟಿ, ಕುಲ್ದೀಪ್ 4 ವಿಕೆಟ್: ನ್ಯೂಜಿಲೆಂಡ್​​ನಲ್ಲಿ ಭಾರತ ಭರ್ಜರಿ ಶುಭಾರಂಭ

ನಾಯಕ ವಿಲಿಯಮ್ಸನ್ ಏಕಾಂಗಿ ಹೋರಾಟ ನಡೆಸುತ್ತಿದ್ದರಾದರು ಯಾವೋಬ್ಬ ಆಟಗಾರ ಇವರಿಗೆ ಸಾತ್ ನೀಡಲಿಲ್ಲ. ಅಂತಿಮವಾಗಿ ವಿಲಿಯಮ್ಸನ್ ಕೂಡ 81 ಎಸೆತಗಳಲ್ಲಿ 64 ರನ್ ಬಾರಿಸಿ ನಿರ್ಗಮಿಸಿದರು.

Vinay Bhat | news18
Updated:January 23, 2019, 2:51 PM IST
ಧವನ್ ಫಿಫ್ಟಿ, ಕುಲ್ದೀಪ್ 4 ವಿಕೆಟ್: ನ್ಯೂಜಿಲೆಂಡ್​​ನಲ್ಲಿ ಭಾರತ ಭರ್ಜರಿ ಶುಭಾರಂಭ
ಶಿಖರ್ ಧವನ್ (ಟೀಂ ಇಂಡಿಯಾ ಬ್ಯಾಟ್ಸ್​ಮನ್​​​)
  • News18
  • Last Updated: January 23, 2019, 2:51 PM IST
  • Share this:
ನೇಪಿಯರ್​​ (. 23): ಇಲ್ಲಿನ ಮೆಕ್​​​ಲೀನ್ ಪಾರ್ಕ್​​​ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಕಿವೀಸ್ ನಾಡಿನಲ್ಲಿ ಶುಭಾರಂಭ ಮಾಡಿದೆ.

ನ್ಯೂಜಿಲೆಂಡ್ ನೀಡಿದ್ದ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಕೊಹ್ಲಿ ಪಡೆ 8 ವಿಕೆಟ್​​ಗಳ ಜಯದೊಂದಿಗೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ 2ನೇ ಓವರ್​​ ಆಗುವ ಹೊತ್ತಿಗೆನೆ ತನ್ನ ಪ್ರಮುಖ ವಿಕೆಟ್ ಕಳೆದುಕೊಂಡಿತು. ಕಿವೀಸ್ ಓಪನರ್​ಗಳಾದ ಮಾರ್ಟಿನ್ ಗಪ್ಟಿಲ್(5) ಹಾಗೂ ಕಾಲಿನ್ ಮುನ್ರೊ(8) ಅವರಿಗೆ ಆರಂಭದಲ್ಲೇ ಶಮಿ ಪೆವಿಲಿಯನ್ ಹಾದಿ ತೋರಿಸಿದರು.

ಬಳಿಕ ಬಂದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಅನುಭವಿ ಆಟಗಾರ ರಾಸ್ ಟೇಲರ್ ಎಚ್ಚರಿಕೆಯ ಆಟಕ್ಕೆ ಮುಂದಾದರಾದರು ಚಹಾಲ್ ಮಾರಕವಾಗಿ ಪರಿಣಮಿಸಿದರು. ಉತ್ತಮವಾಗಿಯೆ ಆಡುತ್ತಿದ್ದ ಟೇಲರ್ 24 ರನ್ ಗಳಿಸಿರುವಾಗ ಚಹಾಲ್​​ ಬೌಲಿಂಗ್​ನಲ್ಲಿ ಔಟ್ ಆದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು​ ಕುಲ್ದೀಪ್ ಸ್ಪಿನ್ ಮೋಡಿಗೆ ಬಲಿಯಾಗಿ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಹಾದಿ ಹಿಡಿದರು.

LIVE BLOG: India vs New Zealand, Live Cricket Score: ಕಿವೀಸ್ ನಾಡಲ್ಲಿ ಭಾರತ ಶುಭಾರಂಭ: 8 ವಿಕೆಟ್​ಗಳ ಭರ್ಜರಿ ಜಯ

ಇತ್ತ ನಾಯಕ ವಿಲಿಯಮ್ಸನ್ ಏಕಾಂಗಿ ಹೋರಾಟ ನಡೆಸುತ್ತಿದ್ದರಾದರು ಯಾವೋಬ್ಬ ಆಟಗಾರ ಇವರಿಗೆ ಸಾತ್ ನೀಡಲಿಲ್ಲ. ಅಂತಿಮವಾಗಿ ವಿಲಿಯಮ್ಸನ್ ಕೂಡ 81 ಎಸೆತಗಳಲ್ಲಿ 64 ರನ್ ಬಾರಿಸಿ ನಿರ್ಗಮಿಸಿದರು. ಪರಿಣಾಮ ನ್ಯೂಜಿಲೆಂಡ್ 38 ಓವರ್​ ಆಗುವ ಹೊತ್ತಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 157 ರನ್​​ ಗಳಿಸಲಷ್ಟೆ ಶಕ್ತವಾಯಿತು. ಭಾರತ ಪರ ಕುಲ್ದೀಪ್ ಯಾದವ್ 4 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ 3, ಯಜುವೇಂದ್ರ ಚಹಾಲ್ 2 ಹಾಗೂ ಕೇದರ್ ಜಾಧವ್ 1 ವಿಕೆಟ್ ಪಡೆದರು.

158 ರನ್​ಗಳ ಸುಲಭ ಗುರಿ ಬೆನ್ನತ್ತಿದ ಭಾರತ 41 ರನ್ ಕಲೆಹಾಕುವ ಹೊತ್ತಿಗೆ 11 ರನ್ ಗಳಿಸಿದ್ದ ರೋಹಿತ್ ಶರ್ಮಾ ಔಟ್ ಆದರು. ಈ ಸಂದರ್ಭ ಶಿಖರ್ ಧವನ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಜೊತೆಯಾಟ ಆಡಿದರು.ಈ ಮಧ್ಯೆ ಸೂರ್ಯನ ಬೆಳಕಿನಿಂದಾಗಿ ಕೆಲಕಾಲ ಆಟವನ್ನು ಸ್ಥಗಿತ ಗೊಳಿಸಲಾಯಿತು. ಬಳಿಕ ಡಕ್​ವರ್ತ್​​​ ಲುಯಿಸ್ ನಿಯಮದ ಅನ್ವಯ ಭಾರತಕ್ಕೆ 1 ಓವರ್ ಖಡಿತ ಗೊಳಿಸಿ ಗೆಲ್ಲಲು 156 ರನ್​ಗಳ ಟಾರ್ಗೆಟ್ ನೀಡಲಾಯಿತು.

ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ ಮಳೆಯಿಂದ ಅಲ್ಲ ಬಿಸಿಲಿನಿಂದ ಸ್ಥಗಿತ

ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ 91 ರನ್​​ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವನ್ನು ಸನಿಹ ಮಾಡಿದರು. ವಿರಾಟ್ ಕೊಹ್ಲಿ ಗೆಲುವಿನ ಅಂಚಿನಲ್ಲಿ 45 ರನ್​ಗೆ ಎಡವಿದರೆ, ಧವನ್ ಏಕದಿನ ಕ್ರಿಕೆಟ್​ನಲ್ಲಿ 26ನೇ ಅರ್ಧಶತಕ ಸಿಡಿಸಿ ಮಿಂಚಿದರು.

ಕೊನೆಯಲ್ಲಿ ಅಂಬಟಿ ರಾಯುಡು(ಅಜೇಯ 13) ಜೊತೆಗೂಡಿ ಧವನ್(ಅಜೇಯ 75) 34.5 ಓವರ್​ನಲ್ಲೇ 2 ವಿಕೆಟ್ ನಷ್ಟಕ್ಕೆ 156 ರನ್ ಕಲೆಹಾಕುವ ಮೂಲಕ ಭಾರತಕ್ಕೆ ಜಯ ತಂದಿಟ್ಟರು. ಕಿವೀಸ್ ಪರ ಡಫ್ ಬ್ರೇಸ್​​​ವೆಲ್​ ಹಾಗೂ ಲಾಕಿ ಫರ್ಗ್ಯುಸನ್ ತಲಾ 1 ವಿಕೆಟ್ ಪಡೆದರು.

ನ್ಯೂಜಿಲೆಂಡ್ ಮಣ್ಣಲ್ಲಿ ಭರ್ಜರಿ ಆರಂಭ ಪಡೆದುಕೊಂಡಿರುವ ಭಾರತ ಉಳಿದ ನಾಲ್ಕು ಏಕದಿನ ಪಂದ್ಯದಲ್ಲಿ ಯಾವರೀತಿ ಪ್ರದರ್ಶನ ತೋರಲಿದೆ ಎಂಬುದು ಕುತೂಹಲ ಕೆರಳಿಸಿದೆ. ಮುಂದಿನ ಎರಡನೇ ಏಕದಿನ ಪಂದ್ಯ ಮೌಂಟ್ ಮೌಂಗನ್ಯುಯಿ ಕ್ರೀಡಾಂಗಣದಲ್ಲಿ ಜ. 26 ಶನಿವಾರದಂದು ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 157/10 (38 ಓವರ್​​)

(ಕೇನ್ ವಿಲಿಯಮ್ಸನ್ 64, ಕುಲ್ದೀಪ್ ಯಾದವ್ 39/4, ಮೊಹಮ್ಮದ್ ಶಮಿ 19/3)

ಭಾರತ: 156/2 (34.5)(D/L)

(ಶಿಖರ್ ಧವನ್ 75*, ವಿರಾಟ್ ಕೊಹ್ಲಿ 45, ಡಫ್ ಬ್ರೇಸ್​​​ವೆಲ್​ 23/1)

ಪಂದ್ಯ ಶ್ರೇಷ್ಠ: ಮೊಹಮ್ಮದ್ ಶಮಿ

First published:January 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading