• Home
  • »
  • News
  • »
  • sports
  • »
  • IND vs NZ: ಭಾರತ vs ನ್ಯೂಜಿಲೆಂಡ್ ಸರಣಿ; ಸ್ಥಳ, ಸಮಯ, ಲೈವ್ ಸ್ಟ್ರೀಮಿಂಗ್ ವಿವರ

IND vs NZ: ಭಾರತ vs ನ್ಯೂಜಿಲೆಂಡ್ ಸರಣಿ; ಸ್ಥಳ, ಸಮಯ, ಲೈವ್ ಸ್ಟ್ರೀಮಿಂಗ್ ವಿವರ

IND vs NZ

IND vs NZ

IND sv NZ 2022: ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಲುಪಿದೆ. ಮೂರು ಟಿ20 ಪಂದ್ಯಗಳ ಸರಣಿಯ ಹೊರತಾಗಿ ಭಾರತ ತಂಡ ಇಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ನವೆಂಬರ್ 18 ರಂದು ಮೊದಲ ಟಿ20 ಪಂದ್ಯ ನಡೆಯಲಿದೆ.

  • Share this:

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಶುಕ್ರವಾರದಿಂದ (ನವೆಂಬರ್ 18) ಆರಂಭವಾಗಲಿದೆ. ಈಗಾಗಲೇ ಭಾರತ ತಂಡ ನ್ಯೂಜಿಲೆಂಡ್ (IND vs NZ) ತಲುಪಿದೆ. ಟಿ20 ಸರಣಿಯ ಮೊದಲ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ (Wellington) ನಡೆಯಲಿದೆ. ಭಾರತ ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆ ಈ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ. ಇವರಲ್ಲದೆ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ (Virat Kohli), ಕೆಎಲ್ ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಮತ್ತು ಭಾರತ ತಂಡ ಸೋತಿದೆ. ಭಾರತ ತಂಡವನ್ನು ಈಗಾಗಲೇ ಪ್ರಕಟಿಸಿದೆ. ಆದರೆ, ನ್ಯೂಜಿಲೆಂಡ್ ಇನ್ನೂ ತನ್ನ ತಂಡವನ್ನು ಪ್ರಕಟಿಸಿಲ್ಲ.


ಭಾರತ vs ನ್ಯೂಜಿಲೆಂಡ್ ಟಿ20 ಸರಣಿಯ ವೇಳಾಪಟ್ಟಿ
1ನೇ ಟಿ20ಐ ಪಂದ್ಯ: ನವೆಂಬರ್ 18, ವೆಲ್ಲಿಂಗ್ಟನ್
2ನೇ ಟಿ20ಐ ಪಂದ್ಯ: ನವೆಂಬರ್ 20, ಮೌಂಟ್ ಮೌಂಗನ್ಯೂಕ್
3ನೇ ಟಿ20ಐ ಪಂದ್ಯ: 22ನೇ ನವೆಂಬರ್, ನೇಪಿಯರ್


ಭಾರತ vs ನ್ಯೂಜಿಲೆಂಡ್ ODI ಸರಣಿಯ
ಮೊದಲ ODI ಪಂದ್ಯ: ನವೆಂಬರ್ 25, ಆಕ್ಲೆಂಡ್
2 ನೇ ODI ಪಂದ್ಯ: 27th ನವೆಂಬರ್, ಹ್ಯಾಮಿಲ್ಟನ್
3 ನೇ ODI ಪಂದ್ಯ: 30th ನವೆಂಬರ್, ಕ್ರೈಸ್ಟ್‌ಚರ್ಚ್


ಇದನ್ನೂ ಓದಿ: IPL 2023: ಐಪಿಎಲ್​ 2023ರಲ್ಲಿ ಈ ಆಟಗಾರರಿಗೆ ಭರ್ಜರಿ ಡಿಮ್ಯಾಂಡ್​, ಎಲ್ಲಕ್ಕೂ ಕಾರಣ ಟಿ20 ವಿಶ್ವಕಪ್​ ಅಂತೆ!


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು T20 ಪಂದ್ಯಗಳ ಸರಣಿ ಯಾವಾಗ ಪ್ರಾರಂಭವಾಗುತ್ತದೆ?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ T20I ಸರಣಿಯು ನವೆಂಬರ್ 18 ರಿಂದ ಪ್ರಾರಂಭವಾಗಲಿದೆ.


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು T20 ಪಂದ್ಯಗಳ ಸರಣಿ ಎಲ್ಲಿ ನಡೆಯಲಿದೆ?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಟಿ20 ಪಂದ್ಯಗಳ ಸರಣಿಯು ವೆಲ್ಲಿಂಗ್ಟನ್, ಮೌಂಟ್ ಮೌಂಗನ್ಯೂಕ್ ಮತ್ತು ನೇಪಿಯರ್‌ನಲ್ಲಿ ನಡೆಯಲಿದೆ.


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು T20 ಪಂದ್ಯಗಳ ಸರಣಿಯು ಎಷ್ಟು ಗಂಟೆಗೆ ನಡೆಯಲಿದೆ?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಟಿ20 ಪಂದ್ಯಗಳ ಸರಣಿಯ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 12 ರಿಂದ ನಡೆಯಲಿವೆ.


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು T20 ಪಂದ್ಯಗಳ ಸರಣಿಯ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬೇಕು?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು T20 ಪಂದ್ಯಗಳ ಸರಣಿಯ ನೇರ ಪ್ರಸಾರವು ಚಾನಲ್‌ಗಳಲ್ಲಿ ಇರುವುದಿಲ್ಲ.


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು T20 ಪಂದ್ಯಗಳ ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬೇಕು?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು T20 ಪಂದ್ಯಗಳ ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು. ಪಂದ್ಯದ ಲೈವ್ ಅಪ್‌ಡೇಟ್‌ಗಳಿಗಾಗಿ ನಮ್ಮ ವೆಬ್‌ಸೈಟ್ News18 ಕನ್ನಡವನ್ನು  ಅನುಸರಿಸಿ.


ನ್ಯೂಜಿಲೆಂಡ್ ವಿರುದ್ಧದ ಭಾರತ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್, ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಹರಸ್‌ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್ ಮತ್ತು ಉಮ್ರಾನ್ ಮಲಿಕ್.


ನ್ಯೂಜಿಲೆಂಡ್ ವಿರುದ್ಧದ ಏಕದಿನ ತಂಡ: ಶಿಖರ್ ಧವನ್ (ನಾಯಕ), ರಿಷಬ್ ಪಂತ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಶಿಂಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಸಿಂಗ್, ಕುಲ್ದೀಪ್ ಯಾದ್, ಕುಲ್ದೀಪ್ ಯಾದ್ ದೀಪಕ್ ಚಹಾರ್, ಕುಲದೀಪ್ ಸೇನ್ ಮತ್ತು ಉಮ್ರಾನ್ ಮಲಿಕ್.

Published by:shrikrishna bhat
First published: