ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಹೀನಾಯ ಸೋಲು; ಕಿವೀಸ್ ಭರ್ಜರಿ ಶುಭಾರಂಭ

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಸ್ಪೋಟಕ ಬ್ಯಾಟಿಂಗ್ ನಡೆಸಿತು. ಅದರಲ್ಲು ದಾಂಡಿಗ ಟಿಮ್ ಸೀಫರ್ಟ್‌ ಭಾರತೀಯ ಬೌಲರ್​​ಳ ಬೆವರಿಸಿಳಿಸಿದರು.

ಸಂಭ್ರಮದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರರು

ಸಂಭ್ರಮದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರರು

  • News18
  • Last Updated :
  • Share this:
ವೆಲ್ಲಿಂಗ್ಟನ್ (ಫೆ. 06): ಏಕದಿನ ಸರಣಿಯಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿದೆ.

ಕಿವೀಸ್ ಬ್ಯಾಟ್ಸ್​ಮನ್​​-ಬೌಲರ್​ಗಳ ಅಬ್ಬರಕ್ಕೆ ಮಕಾಡೆ ಮಲಗಿದ ಭಾರತೀಯರು 80 ರನ್​ಗಳಿಂದ ಸೋಲುಂಡಿದೆ. ಈ ಮೂಲಕ ಟಿ-20 ಕ್ರಿಕೆಟ್​ ಇತಿಹಾಸದಲ್ಲೇ ಭಾರತಕ್ಕಿದ್ದು ಅತ್ಯಂತ ಹೀನಾಯ ಸೋಲಾಗಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಸ್ಪೋಟಕ ಬ್ಯಾಟಿಂಗ್ ನಡೆಸಿತು. ಅದರಲ್ಲು ದಾಂಡಿಗ ಟಿಮ್ ಸೀಫರ್ಟ್‌ ಭಾರತೀಯ ಬೌಲರ್​​ಳ ಬೆವರಿಸಿಳಿಸಿದರು. ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದ ಟಿಮ್ ಕೇವಲ 43 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸ್​ನೊಂದಿಗೆ 84 ರನ್ ಚಚ್ಚಿದರು.

ನಂತರದಲ್ಲಿ ನಾಯಕ ಕೇನ್ ವಿಲಿಯಮ್ಸನ್​(34) ಹಾಗೂ ಕೊನೆಯಲ್ಲಿ ಆರ್ಭಟಿಸಿದ ಸ್ಕಾಟ್ ಕುಗ್ಲೀಲೀಜನ್​​ (7 ಬಾಲ್, 20 ರನ್) ನೆರವಿನಿಂದ ತಂಡ ನಿಗದಿತ 20 ಓವರ್​ಗೆ 6 ವಿಕೆಟ್ ಕಳೆದುಕೊಂಡು ಬರೋಬ್ಬರಿ 219 ರನ್ ಕಲೆಹಾಕಿತು. ಭಾರತ ಪರ ಹಾರ್ದಿಕ್ ಪಾಂಡ್ಯ 2 ವಿಕೆಟ್ ಕಿತ್ತರೆ, ಭುವನೇಶ್ವರ್, ಖಲೀಲ್ ಅಹ್ಮದ್, ಕ್ರುನಾಲ್ ಪಾಂಡ್ಯ ಹಾಗೂ ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದರು.

LIVE: India vs New Zealand, 1st T20I Live: ಟಿ-20 ಸರಣಿಯಲ್ಲಿ ನ್ಯೂಜಿಲೆಂಡ್ ಭರ್ಜರಿ ಶುಭಾರಂಭ

220 ರನ್​​ಗಳ ಬೃಹತ್ ಮೊತ್ತ ಬೆನ್ನತ್ತಿದ ಭಾರತ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ(1) ವಿಕೆಟ್ ಕಳೆದುಕೊಂಡಿತು. ನಂತರದಲ್ಲಿ ಶಿಖರ್ ಧವನ್ 29 ಹಾಗೂ ವಿಜಯ್ ಶಂಕರ್ 27 ರನ್ ಗಳಿಸಿ ನಿರ್ಗಮಿಸಿದ್ದು ಬಿಟ್ಟರೆ, ಪ್ರಮುಖ ಬ್ಯಾಟ್ಸ್​ಮನ್​​ಗಳಾದ ರಿಷಭ್ ಪಂತ್(4), ದಿನೇಶ್ ಕಾರ್ತಿಕ್(5), ಹಾರ್ದಿಕ್ ಪಾಂಡ್ಯ(4), ಕ್ರುನಾಲ್ ಪಾಂಡ್ಯ(20) ಬೇಗನೆ ಬ್ಯಾಟ್ ಕೆಳಗಿಟ್ಟು ತಂಡದ ಸೋಲಿಗೆ ಪ್ರಮುಖ ಕಾರಣರಾದರು.

ಇತ್ತ ಬ್ಯಾಟ್ ಬೀಸುತ್ತಿದ್ದ ಧೋನಿ ಕೂಡ ಕೊನೆ ಹಂತದಲ್ಲಿ 39 ರನ್​ಗೆ ನಿರ್ಗಮಿಸಿದರು. ಪರಿಣಾಮ ಇನ್ನೂ 4 ಎಸೆತ ಬಾಕಿ ಇರುವಂತೆಯೆ ಭಾರತ 139 ರನ್​ಗೆ ಆಲೌಟ್ ಆಗಿ ಸೋಲೊಪ್ಪಿಗೊಂಡಿತು. ಕಿವೀಸ್ ಪರ ಟಿಮ್ ಸೌದಿ 3 ವಿಕೆ್ಟ ಕಿತ್ತರೆ, ಲೂಕಿ ಫೆರ್ಗಸನ್, ಮಿಚೆಲ್ ಸ್ಯಾಂಟನರ್ ಹಾಗೂ ಇಶ್ ಸೋಧಿ ತಲಾ 2 ವಿಕೆಟ್ ಪಡೆದರು.

ಇತ್ತ ನ್ಯೂಜಿಲೆಂಡ್ 80 ರನ್​ಗಳ ಭರ್ಜರಿ ಜಯದೊಂದಿಗೆ 3 ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅದ್ಭುತ ಬ್ಯಾಟಿಂಗ್ ನಡೆಸಿದ ಟಿಮ್ ಸೀಫರ್ಟ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಮುಂದಿನ ಎರಡನೇ ಏಕದಿನ ಪಂದ್ಯ ಫೆ. 08 ರಂದು ಈಡನ್ ಪಾರ್ಕ್​​​​ನಲ್ಲಿ ನಡೆಯಲಿದೆ.
First published: