ನಮಗೆ ಕೊಹ್ಲಿ ಬದಲು ಟೀಂ ಇಂಡಿಯಾ ಓಪವರ್​​​ಗಳ ಬಗ್ಗೆ ಹೆಚ್ಚು ಚಿಂತೆ

ಜಿಲೆಂಡ್​ಗೆ ಟೀಂ ಇಂಡಿಯಾ ಆಟಗಾರರ ಬಗ್ಗೆ ಚಿಂತೆ ಶುರುವಾಗಿದೆಯಂತೆ. ಆದರೆ ಕಿವೀಸ್​​ ಆಟಗಾರರಿಗೆ ನಾಯಕ ವಿರಾಟ್ ಕೊಹ್ಲಿಗಿಂತ ಭಾರತೀಯ ಓಪನರ್​ಗಳ ಬಗ್ಗೆ ಹೆಚ್ಚು ಟೆನ್ಶನ್​​ ಅಂತೆ.

Vinay Bhat | news18
Updated:January 21, 2019, 4:37 PM IST
ನಮಗೆ ಕೊಹ್ಲಿ ಬದಲು ಟೀಂ ಇಂಡಿಯಾ ಓಪವರ್​​​ಗಳ ಬಗ್ಗೆ ಹೆಚ್ಚು ಚಿಂತೆ
Pic: Twitter (Edited)
Vinay Bhat | news18
Updated: January 21, 2019, 4:37 PM IST
ಆಕ್ಲೆಂಡ್ (ಜ. 21): ಈಗಾಗಲೇ ನ್ಯೂಜಿಲೆಂಡ್ ಪ್ರವಾಸ ಬೆಳೆಸಿರುವ ಭಾರತ ಕ್ರಿಕೆಟ್ ತಂಡ ಬುಧವಾರದಿಂದ ಏಕದಿನ ಸರಣಿ ಆರಂಭಿಸಲಿದೆ. ಈ ಮಧ್ಯೆ ನ್ಯೂಜಿಲೆಂಡ್​ಗೆ ಟೀಂ ಇಂಡಿಯಾ ಆಟಗಾರರ ಬಗ್ಗೆ ಚಿಂತೆ ಶುರುವಾಗಿದೆಯಂತೆ. ಆದರೆ ಕಿವೀಸ್​​ ಆಟಗಾರರಿಗೆ ನಾಯಕ ವಿರಾಟ್ ಕೊಹ್ಲಿಗಿಂತ ಭಾರತೀಯ ಓಪನರ್​ಗಳ ಬಗ್ಗೆ ಹೆಚ್ಚು ಟೆನ್ಶನ್​​ ಅಂತೆ.

ಈ ಬಗ್ಗೆ ಮಾತನಾಡಿದ ನ್ಯೂಜಿಲೆಂಡ್ ಬ್ಯಾಟ್ಸ್​ಮನ್​​ ರಾಸ್ ಟೇಲರ್, ವಿರಾಟ್ ಕೊಹ್ಲಿ ಒಬ್ಬ ಅದ್ಭುತ ಆಟಗಾರ, ಏಕದಿನ ಕ್ರಿಕೆಟ್​ನಲ್ಲಿ ಆತನೇ ಬೆಸ್ಟ್​. ಆದರೆ, ಈ ಬಾರಿ ಕೊಹ್ಲಿ ಬಗ್ಗೆ ಹೆಚ್ಚು ಆಲೋಚಿಸಿಲ್ಲ ಬದಲಾಗಿ ಟೀಂ ಇಂಡಿಯಾದ ಸ್ಟಾರ್ ಓಪವರ್​​ಗಳಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಬಗ್ಗೆ ಚಿಂತಿಸಿದ್ದೇವೆ ಎಂದಿದ್ದಾರೆ.

ಇದನ್ನೂ ಒದಿ: ಐಪಿಎಲ್ 2019: ಸ್ಟಾರ್ ಆಟಗಾರರಿಂದ ಬಲಿಷ್ಠವಾಗಿದೆ ಈ ಮೂರು ತಂಡಗಳು

ಕಳೆದ ಕೆಲ ವರ್ಷಗಳಿಂದ ರೋಹಿತ್ ಶರ್ಮಾ ಭರ್ಜರಿ ಫಾರ್ಮ್​​ನಲ್ಲಿದ್ದಾರೆ. ರೋಹಿತ್ ಮೈದಾನಕ್ಕಿಳಿದು ಬ್ಯಾಟಿಂಗ್​​ನಲ್ಲಿ ಸೆಟ್​ ಆದರೆಂದರೆ ಅವರನ್ನು ಪೆವಿಲಿಯನ್​ಗೆ ಅಟ್ಟುವುದು ಕಷ್ಟ ಸಾಧ್ಯ. ಧವನ್-ರೋಹಿತ್ ಜೋಡಿಯನ್ನು ಕಟ್ಟಿಹಾಕಲು ನಾವು ಸ್ವಿಂಗ್ ಬೌಲರ್​​ಗಳನ್ನು ತಯಾರು ಮಾಡಿತ್ತಿದ್ದೆವೆ. ಇದು ಕೆಲಸ ಮಾಡಬಹದು ಎಂಬುದು ನನ್ನ ಆಲೋಚನೆ ಎಂದು ಟೇಲರ್ ಹೇಳಿದ್ದಾರೆ.

ನ್ಯೂಜಿಲೆಂಡ್​​ನಲ್ಲಿ ಭಾರತ ಒಟ್ಟು ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ. ಈ ಪೈಕಿ ಮೊದಲ ಏಕದಿನ ಪಂದ್ಯ ಬುಧವಾರ ನಡೆಯಲಿದೆ.

ಏಕದಿನ ಸರಣಿ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಕೇದರ್ ಜಾಧವ್, ಎಂ ಎಸ್ ಧೋನಿ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ, ವಿಜಯ್ ಶಂಕರ್, ಶುಭ್ಮನ್ ಗಿಲ್.
Loading...

ಟಿ-20 ಸರಣಿಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೇದರ್ ಜಾಧವ್, ಎಂ ಎಸ್ ಧೋನಿ, ಕ್ರುನಾಲ್ ಪಾಂಡ್ಯ ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್,  ಭುವನೇಶ್ವರ್ ಕುಮಾರ್, ಸಿದ್ಧಾರ್ಥ್​ ಕೌಲ್, ಖಲೀಲ್ ಅಹ್ಮದ್, ವಿಜಯ್ ಶಂಕರ್, ಶುಭ್ಮನ್ ಗಿಲ್.

First published:January 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...