ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಭಾರತೀಯರು: ಸರಣಿಯಲ್ಲಿ 2-0 ಮುನ್ನಡೆ

325 ರನ್​ಗಳ ದೊಡ್ಡ ಟಾರ್ಗೆಟ್ ಬೆನ್ನತ್ತಿದ ಕಿವೀಸ್ ಪಡೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡೆ ಸಾಗಿತು. ಪ್ರತಿ ಬಾರಿ ತಂಡಕ್ಕೆ ಆಸರೆಯಾಗುತ್ತಿದ್ದ ಕೇನ್ ವಿಲಿಯಮ್ಸನ್(20) ಕೂಡ ಬೇಗನೆ ಔಟ್ ಆಗಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಿತು.

Vinay Bhat | news18
Updated:January 26, 2019, 3:03 PM IST
ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಭಾರತೀಯರು: ಸರಣಿಯಲ್ಲಿ 2-0 ಮುನ್ನಡೆ
ಕುಲ್ದೀಪ್ ಯಾದವ್ (ಟೀಂ ಇಂಡಿಯಾ ಆಟಗಾರ)
Vinay Bhat | news18
Updated: January 26, 2019, 3:03 PM IST
ಮೌಂಟ್​​​ ಮೌಂಗನ್ಯುಯಿ (. 26): ಟೀಂ ಇಂಡಿಯಾ ಬ್ಯಾಟ್ಸ್​ಮನ್​​ಗಳ ಅಬ್ಬರ ಹಾಗೂ ಬೌಲರ್​​ಗಳ ಮಾರಕ ದಾಳಿಗೆ ಸಿಲುಕಿದ ನ್ಯೂಜಿಲೆಂಡ್ ತಂಡ ಕೊಹ್ಲಿ ಪಡೆಗೆ ಮತ್ತೆ ಶರಣಾಗಿದೆ.

ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 90 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಅಂದುಕೊಂಡಂತೆ ಭರ್ಜರಿ ಆರಂಭ ಪಡೆದುಕೊಂಡಿತು. ಓಪನಿಂಗ್​​ ಬ್ಯಾಟ್ಸ್​ಮನ್​ಗಳಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಬಿರುಸಿನ ಬ್ಯಾಟಿಂಗ್ ನಡೆಸಿ ಕಿವೀಸ್ ಬೌಲರ್​​ಗಳ ಬೆವರಿಳಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ ಬರೋಬ್ಬರಿ 154 ರನ್​ಗಳ ಜೊತೆಯಾಟವಾಡಿದರು. ಅಂತೆಯೆ 25 ಓವರ್​​ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 150ಕ್ಕೆ ತಂದಿಟ್ಟು ನಿರ್ಗಮಿಸಿದರು.

ರೋಹಿತ್ ಶರ್ಮಾ 96 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸ್​ನೊಂದಿಗೆ 87 ರನ್ ಸಿಡಿಸಿದರೆ, ಧವನ್ 66 ರನ್​ಗೆ ಔಟ್ ಆದರು. ಬಳಿಕ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಅಂಬಟಿ ರಾಯಡು ಅದೇ ರನ್​ಗತಿಯನ್ನು ಕಾಪಾಡಿಕೊಂಡು ಅರ್ಧಶತಕದ ಕಾಣಿಕೆ ನೀಡಿದರು. ಆದರೆ, ಕೊಹ್ಲಿ 43 ರನ್​ಗಳಿಸಿರುವಾಗ ಕೆಟ್ಟ ಹೊಡೆತಕ್ಕೆ ಬಲಿಯಾದರು. ಇತ್ತ ರಾಯುಡು ಕೂಡ 47 ರನ್​ಗೆ ಬ್ಯಾಟ್ ಕೆಳಗಿಟ್ಟರು.

ಬಳಿಕ ಕೊನೆ ಹಂತದಲ್ಲಿ ಅಬ್ಬರಿಸಿದ ಎಂ ಎಸ್ ಧೋನಿ ಹಾಗೂ ಕೇದರ್ ಜಾಧವ್ ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಪರಿಣಾಮ ನಿಗದಿತ 50 ಓವರ್​ಗೆ ಭಾರತ 4 ವಿಕೆಟ್ ನಷ್ಟಕ್ಕೆ 324 ರನ್​ಗಳ ಸವಾಲಿನ ಮೊತ್ತ ಕಲೆಹಾಕಿತು. ಧೋನಿ 48 ಹಾಗೂ ಜಾಧವ್ 22 ರನ್​​ ಸಿಡಿಸಿ ಅಜೇಯರಾಗಿ ಉಳಿದರು. ಆಸೀಸ್ ಪರ ಟ್ರೆಂಟ್ ಬೌಲ್ಟ್​ ಹಾಗೂ ಲಾಕಿ ಫರ್ಗ್ಯುಸನ್​​​​ ತಲಾ 2 ವಿಕೆಟ್ ಪಡೆದರು.

India vs New Zealand, Live Cricket Score: ಭಾರತಕ್ಕೆ 90 ರನ್​ಗಳ ಭರ್ಜರಿ: 2-0 ಮುನ್ನಡೆ

325 ರನ್​ಗಳ ದೊಡ್ಡ ಟಾರ್ಗೆಟ್ ಬೆನ್ನತ್ತಿದ ಕಿವೀಸ್ ಪಡೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡೆ ಸಾಗಿತು. ಪ್ರತಿ ಬಾರಿ ತಂಡಕ್ಕೆ ಆಸರೆಯಾಗುತ್ತಿದ್ದ ಕೇನ್ ವಿಲಿಯಮ್ಸನ್(20) ಕೂಡ ಬೇಗನೆ ಔಟ್ ಆಗಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಿತು. ತಂಡದ ಪರ ಕಾಲಿನ್ ಮನ್ರೊ 31 ಹಾಗೂ ಟಾಮ್ ಲಥಾನ್ 34 ರನ್ ಗಳಿಸಿದ್ದು ಬಿಟ್ಟರೆ, ಕೊನೆ ಹಂತದಲ್ಲಿ ಡಫ್ ಬ್ರೇಸ್​​ವೆಲ್​​ ಸ್ಪೋಟಕ ಬ್ಯಾಟಿಂಗ್ ನಡೆಸಿ 57 ರನ್ ಚಚ್ಚಿದರು. ಆದರೆ, ಅವರ ಮನಮೋಹಕ ಆಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲ.
Loading...

ಟೀಂ ಇಂಡಿಯಾ ಬೌಲರ್​​ಗಳ ದಾಳಿಗೆ ಮಂಕಾದ ಕಿವೀಸ್ ಬ್ಯಾಟ್ಸ್​ಮನ್​ಗಳು 40.2 ಓವರ್​​ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 234 ರನ್ ಗಳಿಸಲಷ್ಟೆ ಶಕ್ತವಾಯಿತು. ಭಾರತ ಪರ ಕುಲ್ದೀಪ್ ಯಾದವ್ 4 ವಿಕೆಟ್ ಕಿತ್ತರೆ, ಯಜುವೇಂದ್ರ ಚಹಾಲ್ ಹಾಗೂ ಭುವನೇಶ್ವರ್ ಕುಮಾರ್ ತಲಾ 2 ಮತ್ತು ಕೇದರ್ ಜಾಧವ್ ಹಾಗೂ ಮೊಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದರು.

ಈ ಮೂಲಕ ಕೊಹ್ಲಿ ಪಡೆ 90 ರನ್​ಗಳ ಗೆಲುವಿನಿನೊಂದಿಗೆ ಟೂರ್ನಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಅದ್ಭುತ ಆಟ ಪ್ರದರ್ಶಿಸಿದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಮುಂದಿನ ಮೂರನೇ ಏಕದಿನ ಪಂದ್ಯ ಜ. 28 ರಂದು ಸೋಮವಾರ ಇದೇ ಮೈದಾನದಲ್ಲಿ ನಡೆಯಲಿದೆ.

First published:January 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...