92 ರನ್​ಗೆ ಆಲೌಟ್: ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಏನಂದ್ರು?

ಭಾರತ ತಂಡ 92 ರನ್​ಗೆ ಸರ್ವಪತನ ಕಂಡು 7ನೇ ಬಾರಿ ಅತಿ ಕಡಿಮೆ ಸ್ಕೋರ್​​ಗೆ ಆಲೌಟ್ ಆಗಿದೆ. ಅಂತೆಯೆ ಹ್ಯಾಮಿಲ್ಟನ್ ಮೈದಾನದಲ್ಲಿ ಭಾರತ ಅಲ್ಪ ಮೊತ್ತಕ್ಕೆ ಕುಸಿದ ತಂಡ ಎನ್ನುವ ಕೆಟ್ಟ ಹಣೆಪಟ್ಟಿ ತೊಟ್ಟಿದೆ.

Vinay Bhat | news18
Updated:January 31, 2019, 4:37 PM IST
92 ರನ್​ಗೆ ಆಲೌಟ್: ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಏನಂದ್ರು?
ರೋಹಿತ್ ಶರ್ಮಾ
  • News18
  • Last Updated: January 31, 2019, 4:37 PM IST
  • Share this:
ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ತೀರಾ ಕಳಪೆ ಪ್ರದರ್ಶನ ತೋರಿದ ಭಾರತೀಯ ಬ್ಯಾಟ್ಸ್​ಮನ್​​ಗಳು ಕೇವಲ 92 ರನ್​​ಗೆ ಆಲೌಟ್ ಆದರು.

ಈ ಗುರಿ ಬೆನ್ನಟ್ಟಿದ ಕಿವೀಸ್ ಕೇವಲ 14.4 ಓವರ್​​ನಲ್ಲೇ 93 ರನ್ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಂಡದ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕ ದಿನಗಳ ನಂತರ ನಾವು ಇಂತಹ ಕಳಪೆ ಪ್ರದರ್ಶನ ತೋರಿದ್ದೇವೆ. ನ್ಯೂಜಿಲೆಂಡ್ ಬೌಲರ್​​ಗಳು ಅದ್ಭುತ ಬೌಲಿಂಗ್ ಮಾಡಿದರು. ಅವರನ್ನು ಪ್ರಶಂಸಿಸಲೇಬೇಕು. ಈ ಸೋಲಿನಿಂದ ನಾವು ಪಾಠ ಕಲಿತಿದ್ದೇವೆ. ನಮ್ಮೆಲ್ಲರಿಗೆ ಮಾಡಿದ ತಪ್ಪಿನ ಅರಿವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳ ಪ್ರಕಾರ ಟೀಂ ಇಂಡಿಯಾ ಸೋಲಿಗೆ ಕೊಹ್ಲಿ-ಧೋನಿ ಕಾರಣ: ಹೇಗಂತಿರಾ..?

ಭಾರತ ತಂಡ 92 ರನ್​ಗೆ ಸರ್ವಪತನ ಕಂಡು 7ನೇ ಬಾರಿ ಅತಿ ಕಡಿಮೆ ಸ್ಕೋರ್​​ಗೆ ಆಲೌಟ್ ಆಗಿದೆ. ಅಂತೆಯೆ ಹ್ಯಾಮಿಲ್ಟನ್ ಮೈದಾನದಲ್ಲಿ ಭಾರತ ಅಲ್ಪ ಮೊತ್ತಕ್ಕೆ ಕುಸಿದ ತಂಡ ಎನ್ನುವ ಕೆಟ್ಟ ಹಣೆಪಟ್ಟಿ ತೊಟ್ಟಿದೆ.

First published:January 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading