ಆಕ್ಲೆಂಡ್​​ನಲ್ಲಿ ಅಬ್ಬರಿಸುತ್ತ ರೋಹಿತ್ ಪಡೆ: ಭಾರತಕ್ಕೆ ಮಾಡು ಇಲ್ಲವೆ ಮಡಿ ಪಂದ್ಯ

ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನದ ಮೂಲಕ ಭಾರತಕ್ಕೆ ಹಲವು ಗೆಲುವು ತಂದುಕೊಟ್ಟಿದ್ದಾರೆ. ಅದರೆ ಅವರ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನೆಡೆಸುತ್ತಿರುವ ರೋಹಿತ್ ಶರ್ಮಾ ಕಳಪೆ ಬ್ಯಾಟಿಂಗ್​ನಿಂದ ಟೀಕೆಗೆ ಗುರಿಯಾಗಿದ್ದಾರೆ.

Vinay Bhat | news18
Updated:February 7, 2019, 7:26 PM IST
ಆಕ್ಲೆಂಡ್​​ನಲ್ಲಿ ಅಬ್ಬರಿಸುತ್ತ ರೋಹಿತ್ ಪಡೆ: ಭಾರತಕ್ಕೆ ಮಾಡು ಇಲ್ಲವೆ ಮಡಿ ಪಂದ್ಯ
ರೋಹಿತ್ ಶರ್ಮಾ
Vinay Bhat | news18
Updated: February 7, 2019, 7:26 PM IST
ಆಕ್ಲೆಂಡ್ (ಫೆ. 07): ವೆಲ್ಲಿಂಗ್ಟನ್​ ಅಂಗಳದಲ್ಲಿ ಅನುಭವಿಸಿದ ಹೀನಾಯ ಸೋಲು ಮರೆಯುವ ಮೊದಲೆ ಟೀಂ ಇಂಡಿಯಾ ನಾಳೆ 2ನೇ ಟಿ-20 ಪಂದ್ಯಕ್ಕೆ ಸಜ್ಜಾಗಿ ನಿಂತಿದೆ. ಆಕ್ಲೆಂಡ್​ನಲ್ಲಿ ನಡೆಯುತ್ತಿರುವ 2ನೇ ಟಿ-20 ಫೈಟ್​ ಉಭಯ ತಂಡಗಳಲ್ಲೂ ಮುಖ್ಯವಾಗಿದ್ದು ಟೀಂ ಇಂಡಿಯಾ ಪಾಲಿಗಂತೂ ಮಾಡು ಇಲ್ಲವೆ ಮಡಿಯಂತಿದೆ. ಏಕದಿನ ಸರಣಿ ಗೆದ್ದ ಹುಮ್ಮಸ್ಸಿನಲ್ಲಿದ್ದ ಭಾರತಕ್ಕೆ ಈಗಾಗಲೇ ಕಿವೀಸ್​ ಮೊದಲ ಟಿ-20ಯಲ್ಲಿ ಶಾಕ್ ನೀಡಿದೆ.

ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನದ ಮೂಲಕ ಭಾರತಕ್ಕೆ ಹಲವು ಗೆಲುವು ತಂದುಕೊಟ್ಟಿದ್ದಾರೆ. ಅದರೆ ಅವರ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನೆಡೆಸುತ್ತಿರುವ ರೋಹಿತ್ ಶರ್ಮಾ ಕಳಪೆ ಬ್ಯಾಟಿಂಗ್​ನಿಂದ ಟೀಕೆಗೆ ಗುರಿಯಾಗಿದ್ದಾರೆ. ಕ್ಯಾಪ್ಟನ್ ಆಗಷ್ಟೇ ಅಲ್ಲದೆ ಆಟಗಾರನಾಗಿಯೂ ರೋಹಿತ್​ ಮಿಂಚಬೇಕಿದೆ. ಆಕ್ಲೆಂಡ್​ನಲ್ಲಿ ಹಿಟ್​ಮ್ಯಾನ್​ ಅಬ್ಬರಿಸಿದರೆ ಮಾತ್ರ ಉತ್ತಮ ಸ್ಕೋರ್ ಕಲೆಹಾಕಲು ಸಾಧ್ಯ ಜೊತೆಗೆ ಗಬ್ಬರ್ ಸಿಂಗ್ ಸಾಥ್ ನೀಡಬೇಕಿದೆ.

ಇದನ್ನೂ ಓದಿ: ನಾಳೆ ಎರಡನೇ ಟಿ-20: ಭಾರತ ಗೆಲ್ಲ ಬೇಕಾದರೆ ತಂಡ ಹೇಗಿರಬೇಕು?

ಯುವ ಆಟಗಾರ ರಿಷಭ್​​ ಪಂತ್​ ಸಿಕ್ಕ ಅವಕಾಶವನ್ನ ಬಳಸಿಕೊಳ್ಳುವುದು ಅನಿವಾರ್ಯ. ಒಂದುವೇಳೆ ಶುಭಮನ್​ಗಿಲ್​​​ಗೂ ಅವಕಾಶ ಸಿಕ್ಕರೂ ಆಶ್ಚರ್ಯವಿಲ್ಲ. ದಿನೇಶ್ ಕಾರ್ತಿಕ್​ ಧೋನಿ ಜೊತೆಗೆ ಫಿನಿಷರ್ ಜವಾಬ್ದಾರಿ ನಿರ್ವಹಿಸೋದು ಅನಿವಾರ್ಯ.

ಕಳೆದ ಪಂದ್ಯದಲ್ಲಿ 6 ಬೌಲಿಂಗ್ ಆಯ್ಕೆಗಳೊಂದಿಗೆ ಕಣಕ್ಕಿಳಿದಿದ್ದ ಭಾರತ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಪಕ್ಕಾ. ಚೈನಾಮೆನ್ ಕುಲ್​ದೀಪ್ ಯಾದವ್​​​​ ಯಾರ ಬದಲು ಅವಕಾಶ ಪಡೆಯುತ್ತಾರೆ ಎಂಬ ಕುತೂಹಲವೂ ಇದೆ. ಪಾಂಡ್ಯ ಬ್ರದರ್ಸ್​​ಗೆ ಮತ್ತೊಂದು ಅವಕಾಶ ಅನುಮಾನವಾಗಿದೆ. ಹೀಗಾಗಿ ಆಯ್ಕೆಯತ್ತ ಹೆಚ್ಚು ಗಮನ ಹರಿಸುವುದು ಟೀಂ ಇಂಡಿಯಾಕ್ಕೆ ತಲೆನೋವಾಗಿದೆ.

ಇದನ್ನೂ ಓದಿ: 'ಕೊಹ್ಲಿ-ಸ್ಮೃತಿ' ಇಬ್ಬರ ಜೆರ್ಸಿ ನಂಬರ್ ಸೇಮ್: ಚಹಾಲ್ ಟಿವಿಯಲ್ಲಿ ಮುದ್ದಿನ ಮಂದಾನ ಹೇಳಿದ್ದೇನು?

ಇನ್ನು ಕಿವೀಸ್ ಪಾಳಯದಲ್ಲಿ ಯುವ ಆಟಗಾರ ಟಿಮ್ ಸೀಫರ್ಟ್​ ಸಿಕ್ಕ ಅವಕಾಶದಲ್ಲಿ ಮಿಂಚಿದ್ದಾರೆ. ಆದರೆ ಮಿಚೆಲ್​ ಮತ್ತು ಕಾಲಿನ್ ಡಿ ಗ್ರ್ಯಾಂಡ್​ಹೋಮ್ ನಿರೀಕ್ಷಿಸಿದಷ್ಟು ಪ್ರದರ್ಶನ ತೋರಿಲ್ಲ ಹೀಗಾಗಿ ಕಿವೀಸ್​ ತಂಡದಲ್ಲೂ ಇಬ್ಬರು ಆಟಗಾರರ ಬದಲಾವಣೆ ನಿರೀಕ್ಷೆಯಿದೆ. ಒಟ್ಟಿನಲ್ಲಿ ಈ ಪಂದ್ಯದಲ್ಲಿ ಭಾರತ ಗೆದ್ದು ಸರಣಿ ಜೀವಂತವಾಗಿಸಿಕೊಳ್ಳುವುದು ಅನಿವಾರ್ಯ. ಅತ್ತ ಕಿವೀಸ್​​ಗೆ ಸರಣಿ ಗೆಲುವೊಂದೆ ಗುರಿಯಾಗಿದೆ.
Loading...

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...