• Home
  • »
  • News
  • »
  • sports
  • »
  • IND vs NZ ODI: ಭಾರತ-ನ್ಯೂಜಿಲ್ಯಾಂಡ್​ ಏಕದಿನ ಸರಣಿ, ಯಾವಾಗ? ಎಷ್ಟು ಗಂಟೆಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

IND vs NZ ODI: ಭಾರತ-ನ್ಯೂಜಿಲ್ಯಾಂಡ್​ ಏಕದಿನ ಸರಣಿ, ಯಾವಾಗ? ಎಷ್ಟು ಗಂಟೆಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನಾಯಕ ಶಿಖರ್ ಧವನ್

ನಾಯಕ ಶಿಖರ್ ಧವನ್

IND vs NZ ODI: ಭಾರತ ತಂಡ ಈಗ ಕಿವೀಸ್ ವಿರುದ್ಧ ಮೂರು ಪಂದ್ಯಗಳ ODI ಸರಣಿಯನ್ನು ಆಡಲಿದೆ. ಈ ಸರಣಿಗೆ ಹೊಸ ನಾಯಕನ ನೇತೃತ್ವದಲ್ಲಿ ಟೀಂ ಇಂಡಿಯಾ ಮೈದಾನಕ್ಕಿಳಿಯಲಿದೆ.

  • Share this:

ಭಾರತ ಮತ್ತು ನ್ಯೂಜಿಲೆಂಡ್ (IND vs NZ ODI) ನಡುವಿನ ಟಿ20 ಸರಣಿಯನ್ನು ಟೀಂ ಇಂಡಿಯಾ ಗೆದ್ದುಬೀಗಿದೆ. ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಭಾರತ ಯುವ ತಂಡ ಆತಿಥೇಯರನ್ನು ಅವರದೇ ನೆಲದಲ್ಲಿ ಸೋಲಿಸಿತು. ಟಿ20 ಗೆಲುವಿನ ನಂತರ ಇದೀಗ ಟೀಂ ಇಂಡಿಯಾ (Team India) ಮುಂದಿನ ಸವಾಲಿಗೆ ಸಜ್ಜಾಗಿದೆ. ಭಾರತ ತಂಡ ಇದೀಗ ಕಿವೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿಗೆ ಹೊಸ ನಾಯಕನ ನೇತೃತ್ವದಲ್ಲಿ ಟೀಂ ಇಂಡಿಯಾ ಮೈದಾನಕ್ಕಿಳಿಯಲಿದೆ. ಶಿಖರ್ ಧವನ್ (Shikhar Dhawan) ಭಾರತ ತಂಡವನ್ನು ಏಕದಿನಕ್ಕೆ ಮುನ್ನಡೆಸಲಿದ್ದಾರೆ. ಹಾಗಿದ್ದರೆ ಏಕದಿನ ಸರಣಿಯ ಸಂಪೂರ್ಣ ವಿವರ ಇಲ್ಲಿದೆ ನೋಡಿ.


ಪಂದ್ಯದ ವಿವರ:


ಇನ್ನು, ಭಾರತ ತಂಡ ಕಿವೀಸ್​ ವಿರುದ್ಧ ಟಿ20 ಸರಣಿ ಗೆದ್ದಿದ್ದು, ಇದೀಗ ಏಕದಿನ ಸರಣಿಗೆ ಸಜ್ಜಾಗಿದೆ. ಶಿಖರ್ ಧವನ್ ನಾಯಕತ್ವದಲ್ಲಿ ODI ಸರಣಿಗೆ ಸಿದ್ಧವಾಗಿದೆ. ಎರಡೂ ತಂಡಗಳಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಆಕ್ಲೆಂಡ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಧವನ್ ಮತ್ತು ಬಳಗ ಆಕ್ಲೆಂಡ್‌ಗೆ ಆಗಮಿಸಿದೆ. ಈಗಾಗಲೇ ಭಾರತ ತಂಡ ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ಅಭ್ಯಾಸ ನಡೆಸಿತು. ಟಿ20 ಸರಣಿಯಲ್ಲಿ ಅವಕಾಶ ಸಿಗದ ಕೆಲ ಆಟಗಾರರು ಏಕದಿನದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಅದರಲ್ಲಿ ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್ ಹೆಸರುಗಳು ಮುಂಚೂಣಿಯಲ್ಲಿವೆ. ODI ಸರಣಿಯ ಎಲ್ಲಾ ಮೂರು ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತವೆ. ಪಂದ್ಯವು ಅಮೇಜಾನ್ ಪ್ರೈಂ ನಲ್ಲಿ ನೇರಪ್ರಸಾರವಾಗಲಿದೆ.IND vs NZ ODI ವೇಳಾಪಟ್ಟಿ:


ನವೆಂಬರ್ 25, 1 ನೇ ODI - ಆಕ್ಲೆಂಡ್
ನವೆಂಬರ್ 27, ಎರಡನೇ ODI - ಹ್ಯಾಮಿಲ್ಟನ್
30 ನವೆಂಬರ್, ಮೂರನೇ ಒಂದು ದಿನ - ಕ್ರೈಸ್ಟ್‌ಚರ್ಚ್


ಇವರುಗಳಿಗೆ ಸಿಗುತ್ತಾ ಚಾನ್ಸ್?:


ಇನ್ನು, ಶಿಖರ್ ಧವನ್ ನಾಯಕತ್ವದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್​ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಸರಣಿಯಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬ ಕುತೂಹಲ ಇದೀಗ ಮನೆ ಮಾಡಿದೆ. ಅಲ್ಲದೇ ಟಿ20 ಸರಣಿಯಲ್ಲಿ ಅವಕಾಶ ವಂಚಿತರಾದ ಸಂಜು ಸ್ಯಾಮ್ಸನ್​ ಮತ್ತು ವೇಗಿ ಉಮ್ರಾನ್ ಮಲ್ಲಿಕ್ ಅವರಿಗೆ ಏಕದಿನ ಸರಣಿಯಲ್ಲಾದರೂ ಧವನ್ ಅವಕಾಶ ನೀಡಲಿದ್ದಾರಾ ಎಂದು ಕಾದುನೋಡಬೇಕಿದೆ. ಅಲ್ಲದೇ ಇವರುಗಳ ಜೊತೆಗೆ ಯುವ ಆಟಗಾರ ಶುಭ್​ಮನ್ ಗಿಲ್​, ಶಾರ್ದೂಲ್ ಠಾಕೂರ್​ ಅವರಿಗೆ ಚಾನ್ಸ್ ಸಿಗುವ ಸಾಧ್ಯತೆ ಇದೆ. ಅಲ್ಲದೇ ಅನೇಕ ದಿನಗಳ ಬಳಿಕ ಮತ್ತೆ ತಂಡಕ್ಕೆ ಮರಳುತ್ತಿರುವ ದೀಪಕ್ ಚಹಾರ್ ಅವರಿಗೆ ತಂಡವನ್ನು ಸೇರಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.


ಇದನ್ನೂ ಓದಿ: Ravindra Jadeja: ಜಡೇಜಾ ಪತ್ನಿ-ತಂಗಿ ನಡುವೆ ಎಲೆಕ್ಷನ್ ಫೈಟ್​, ಅತ್ತಿಗೆ ವಿರುದ್ಧ ಆರೋಪಗಳ ಸುರಿಮಳೆಗೈದ ಜಡ್ಡು ಸಹೋದರಿ


ಭಾರತ-ನ್ಯೂಜಿಲ್ಯಾಂಡ್​ ಏಕದಿನ ತಂಡ:


ಭಾರತ ತಂಡ: ಶಿಖರ್ ಧವನ್ (ನಾಯಕ), ರಿಷಭ್ ಪಂತ್ (ಉಪನಾಯಕ), ಶುಭಮನ್ ಗಿಲ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಶಹಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ಉಮ್ರಾನ್ ಮಲಿಕ್ , ಅರ್ಶ್ದೀಪ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್.


ನ್ಯೂಜಿಲ್ಯಾಂಡ್​ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ (WK), ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್ (WK), ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ.

Published by:shrikrishna bhat
First published: