• Home
  • »
  • News
  • »
  • sports
  • »
  • IND vs NZ, 1st ODI: ಭಾರತ-ಕಿವೀಸ್​ ಮೊದಲ ಏಕದಿನ ಪಂದ್ಯ, ನಾಳೆ ಆದರೂ ಸ್ಯಾಮ್ಸನ್​ಗೆ ಸಿಗುತ್ತಾ ಚಾನ್ಸ್?

IND vs NZ, 1st ODI: ಭಾರತ-ಕಿವೀಸ್​ ಮೊದಲ ಏಕದಿನ ಪಂದ್ಯ, ನಾಳೆ ಆದರೂ ಸ್ಯಾಮ್ಸನ್​ಗೆ ಸಿಗುತ್ತಾ ಚಾನ್ಸ್?

IND vs NZ ODI

IND vs NZ ODI

IND vs NZ, 1st ODI: ನಾಳಿನ ಕಿವೀಸ್​ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದಲ್ಲಿ ಬಹಳಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ವಿಕೆಟ್ ಕೀಪರ್ ಆಗಿ ಯಾರಿಗೆ ಅವಕಾಶ ನೀಡತ್ತಾರೆ? ರಿಷಬ್ ಪಂತ್ ಅಥವಾ ಸಂಜು ಸ್ಯಾಮ್ಸನ್​ಗಾ ಎಂಬ ಪ್ರಶ್ನೆ ಇದೀಗ ಎಲ್ಲರಿಗೂ ಕಾಡುತ್ತಿದೆ.

  • Share this:

ನ್ಯೂಜಿಲೆಂಡ್‌ನಲ್ಲಿ ನಡೆದ ಟಿ20 ಸರಣಿಯ ಬಳಿಕ ಟೀಂ ಇಂಡಿಯಾ ಏಕದಿನ ಸರಣಿಗೆ ಸಜ್ಜಾಗಿದೆ. ಶಿಖರ್ ಧವನ್ (Shikhar Dhawan) ನೇತೃತ್ವದ ಭಾರತ ತಂಡ ಆತಿಥೇಯ ನ್ಯೂಜಿಲೆಂಡ್ (IND vs NZ) ವಿರುದ್ಧ ಏಕದಿನ ಸರಣಿ ಆಡಲಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಆಕ್ಲೆಂಡ್‌ನಲ್ಲಿ (Auckland) ನಾಳೆ ನಡೆಯಲಿದೆ. ಆದರೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದೊಡ್ಡ ಸಮಯದ ವ್ಯತ್ಯಾಸದಿಂದಾಗಿ, ಏಕದಿನ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ ಪ್ರಾರಂಭವಾಗಲಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬೆಳಗ್ಗೆ ಬೇಗ ಏಳಬೇಕು. ಇನ್ನು, ಈ ಪಂದ್ಯದಲ್ಲಾದರೂ ಶಿಖರ್ ಧವನ್ ಅವರು ಸಂಜು ಸ್ಯಾಮ್ಸನ್​ಗೆ (Sanju Samson) ಮತ್ತು ಉಮ್ರಾನ್ ಮಲ್ಲಿಕ್ ಅವರಿಗೆ ಸ್ಥಾನ ದೊರಕಲಿದೆಯೇ ಎಂದು ಕಾದುನೋಡಬೇಕಿದೆ.


ಪಂದ್ಯ ಯಾವಾಗ ಆರಂಭ?:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ. ಹಾಗಾಗಿ 6.30ಕ್ಕೆ ಟಾಸ್ ಆಗಲಿದೆ. ಹಾಗಾಗಿ ಪಂದ್ಯದ ಒಂದೇ ಒಂದು ಚೆಂಡನ್ನು ಕಳೆದುಕೊಳ್ಳಲು ನೀವು ಬಯಸದಿದ್ದರೆ, ನೀವು ಬೆಳಿಗ್ಗೆ ಬೇಗನೆ ಅಲಾರಂ ಇಟ್ಟು ಎದ್ದೇಳಬೇಕು. ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಮತ್ತು ಕೇನ್ ವಿಲಿಯಮ್ಸನ್ ಇಂದು ಆಕ್ಲೆಂಡ್‌ನಲ್ಲಿ ಈ ಏಕದಿನ ಸರಣಿಯ ಟ್ರೋಫಿಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಟ್ರೋಫಿಯೊಂದಿಗೆ ಉಭಯ ನಾಯಕರ ಫೋಟೋ ಶೂಟ್ ಮಾಡಲಾಯಿತು.ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುತ್ತಾ?:


ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗಲಿಲ್ಲ. ಅನೇಕ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐ ಮತ್ತು ಭಾರತ ತಂಡದ ಆಡಳಿತವನ್ನು ಟೀಕಿಸಿದರು. ಆದರೆ ಏಕದಿನ ತಂಡವನ್ನು ಪರಿಗಣಿಸಿದರೆ, ಈ ಪ್ರವಾಸಕ್ಕೆ ರಿಷಬ್ ಪಂತ್ ಭಾರತ ತಂಡದ ಉಪನಾಯಕರಾಗಿದ್ದಾರೆ. ಹೀಗಾಗಿ ತಂಡದಲ್ಲಿ ಅವರ ಸ್ಥಾನ ನಿಗದಿಯಾಗಿದೆ. ಹೀಗಾಗಿ ಸಂಜು ಸ್ಯಾಮ್ಸನ್ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಲ್ಲಿ ಆಡುತ್ತಾರಾ ಎಂಬ ಪ್ರಶ್ನೆ ಮತ್ತೊಮ್ಮೆ ಎದ್ದಿದೆ.


ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಏಕದಿನ ಸರಣಿಯನ್ನು ಆಡಿದ್ದವು. ಆ ಸರಣಿಯಲ್ಲಿ, ಸಂಜು ಸ್ಯಾಮ್ಸನ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು ಮತ್ತು ಎಲ್ಲಾ ಮೂರು ಪಂದ್ಯಗಳಲ್ಲಿ ಔಟಾಗದೆ ಉಳಿದು 118 ರನ್ ಗಳಿಸಿದರು. ಆದರೆ ರಿಷಭ್ ಪಂತ್ ಟಿ20 ವಿಶ್ವಕಪ್ ತಂಡದಲ್ಲಿದ್ದ ಕಾರಣ ಆ ಸರಣಿಯಲ್ಲಿ ಆಡಿರಲಿಲ್ಲ ಎಂಬುದು ಪ್ರಮುಖ ಸಂಗತಿ. ಹಾಗಾಗಿ ಸಂಜು ಸ್ಯಾಮ್ಸನ್ ಮೂರೂ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ ಸುಲಭ ಸ್ಥಾನ ಪಡೆದರು. ಆದರೆ ಇದೀಗ ರಿಷಬ್ ಪಂತ್ ತಂಡದಲ್ಲಿರುವುದರಿಂದ ಸಂಜು ಸ್ಯಾಮ್ಸನ್ ಗೆ ಅವಕಾಶ ಸಿಗುತ್ತಾ? ಇದನ್ನು ನೋಡಬೇಕು.


ಇದನ್ನೂ ಓದಿ: ICC ODI Rankings: ನೂತನ ಐಸಿಸಿ ಏಕದಿನ ರ್‍ಯಾಂಕಿಂಗ್‌ ಪ್ರಕಟ, ಟೀಂ ಇಂಡಿಯಾಗೆ ಯಾವ ಸ್ಥಾನ?


IND vs NZ ಸಂಭಾವ್ಯ ತಂಡ:


ಭಾರತದ ಸಂಭಾವ್ಯ ತಂಡ : ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ/ಸಂಜು ಸ್ಯಾಮ್ಸನ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಅರ್ಶ್ದೀಪ್ ಸಿಂಗ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್.


ನ್ಯೂಜಿಲ್ಯಾಂಡ್​ ಸಂಭಾವ್ಯ ತಂಡ:  ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ (WK), ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್ (WK), ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ.

Published by:shrikrishna bhat
First published: