ಬೌಲ್ಟ್​​​ ಬೌಲಿಂಗ್ ದಾಳಿಗೆ ಭಾರತ ಬೌಲ್ಡ್​​​; ಮಾನ ಉಳಿಸಿಕೊಂಡ ಕೇನ್ ಪಡೆ

ಟ್ರೆಂಟ್ ಬೌಲ್ಟ್​​​ರ ಬೌಲಿಂಗ್ ಬಿರುಗಾಳಿಗೆ ತರಗೆಲೆಯಂತೆ ಉರುಳಿದ ಟೀಂ ಇಂಡಿಯಾ ಆಟಗಾರರು ಬಂದಷ್ಟೇ ವೇಗದಲ್ಲಿ ಪೆವಿಲಿಯನ್​​ಗೆ ನಡೆದರು. 21 ರನ್​ಗೆ ಮೊದಲ ವಿಕೆಟ್ ಕಳೆದುಕೊಂಡ ಭಾರತ 92 ರನ್​​ಗೆ ಆಲೌಟ್ ಆಯಿತು.

Vinay Bhat | news18
Updated:January 31, 2019, 11:57 AM IST
ಬೌಲ್ಟ್​​​ ಬೌಲಿಂಗ್ ದಾಳಿಗೆ ಭಾರತ ಬೌಲ್ಡ್​​​; ಮಾನ ಉಳಿಸಿಕೊಂಡ ಕೇನ್ ಪಡೆ
ಟ್ರೆಂಟ್ ಬೌಲ್ಟ್​ (ನ್ಯೂಜಿಲೆಂಡ್ ಬೌಲರ್​​)
  • News18
  • Last Updated: January 31, 2019, 11:57 AM IST
  • Share this:
ಹ್ಯಾಮಿಲ್ಟನ್​​​ (. 31): ಇಲ್ಲಿನ ಸೆಡ್ಡನ್ ಪಾರ್ಕ್​ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭಾರೀ ಮುಖಭಂಗವಾಗಿದೆ. ಗೆಲುವಿನ ಓಟ ಮುಂದುವರಿಸುತ್ತಿದ್ದ ಟೀಂ ಇಂಡಿಯಾಕ್ಕೆ ನ್ಯೂಜಿಲೆಂಡ್ ಬ್ರೇಕ್ ಹಾಕಿದೆ.

ಟ್ರೆಂಟ್ ಬೌಲ್ಟ್​​​ರ ಬೌಲಿಂಗ್ ಬಿರುಗಾಳಿಗೆ ತರಗೆಲೆಯಂತೆ ಉರುಳಿದ ಟೀಂ ಇಂಡಿಯಾ ಆಟಗಾರರು ಬಂದಷ್ಟೇ ವೇಗದಲ್ಲಿ ಪೆವಿಲಿಯನ್​​ಗೆ ನಡೆದರು. 21 ರನ್​ಗೆ ಮೊದಲ ವಿಕೆಟ್ ಕಳೆದುಕೊಂಡ ಭಾರತ 92 ರನ್​​ಗೆ ಆಲೌಟ್ ಆಯಿತು. ಓಪನರ್​ಗಳ ಪೈಕಿ ರೋಹಿತ್ ಶರ್ಮಾ 7 ಹಾಗೂ ಶಿಖರ್ ಧವನ್ 13 ರನ್​ ಮೊದಲು ಪೆವಿಲಿಯನ್​ನತ್ತ ಹೆಜ್ಜೆ ಹಾಕ ತೊಡಗಿದರು.

ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಶುಭ್ಮನ್ ಗಿಲ್ ಮೊದಲ ಪಂದ್ಯದಲ್ಲೇ ಫೇಲ್ ಆದರು. ಕೇಲವ 9 ರನ್​​ಗೆ ನಿರ್ಗಮಿಸಿ ಗಿಲ್ ನಿರಾಸೆ ಮೂಡಿದರು. ಬಳಿಕ ಬಂದ ರಾಯುಡು ಹಾಗೂ ದಿನೇಶ್ ಕಾರ್ತಿಕ್ ಸೊನ್ನೆ ಸುತ್ತಿದರೆ, ಕೇದರ್ ಜಾಧವ್ 1, ಹಾರ್ದಿಕ್ ಪಾಂಡ್ಯ 16, ಭುವನೇಶ್ವರ್​​​ 1, ಕುಲ್ದೀಪ್ ಯಾದವ್ 15 ಹಾಗೂ ಖಲೀಲ್ ಅಹ್ಮದ್ 5 ರನ್​ಗೆ ಔಟ್ ಆಗುವ ಮೂಲಕ ಭಾರತ 30.5 ಓವರ್​​ನಲ್ಲಿ 92 ರನ್​ಗೆ ಸರ್ವಪತನ ಕಂಡಿತು. ಯಜುವೇಂದ್ರ ಚಹಾಲ್ 18 ರನ್ ಬಾರಿಸಿ ಅಜೇಯರಾಗಿ ಉಳಿದರು.

ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್​​ 10 ಓವರ್​ಗೆ ಕೇವಲ 21 ರನ್ ನೀಡಿ 5 ವಿಕೆಟ್ ಕಿತ್ತರೆ, ಗ್ರ್ಯಾಂಡ್​​ಹೋಮ್ 3 ವಿಕೆಟ್ ಪಡೆದರು. ಅಂತೆಯೆ ಟಾಡ್ ಆಸ್ಟಲ್ ಹಾಗೂ ನೇಶಮ್​​​ ತಲಾ 1 ವಿಕೆಟ್ ತಮ್ಮ ಖಾತೆಗೆ ಸೇಸಿದರು.

LIVE BLOG: India vs New Zealand, Live Cricket Score: ನ್ಯೂಜಿಲೆಂಡ್​ಗೆ 8 ವಿಕೆಟ್​ಗಳ ಭರ್ಜರಿ ಜಯ

ಇತ್ತ ಸುಲಭ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡದ ಒರ ಮಾರ್ಟಿನ್ ಗಪ್ಟಿಲ್ 14 ಹಾಗೂ ನಾಯಕ ಕೇನ್ ವಿಲಿಮಯ್ಸನ್​ 11 ರನ್​ ಗಳಿಸಿ ಬ್ಯಾಟ್ ಕೆಳಗಿಟ್ಟರು. ನಂತರ ಹೆನ್ರಿ ನಿಕೊಲ್ಸ್​(30*) ಹಾಗೂ ರಾಸ್ ಟೇಲರ್(37*) ಜೊತೆಗೂಡಿ ಬಿರುಸಿನ ಬ್ಯಾಟಿಂಗ್ ನಡೆಸಿ 14.4 ಓವರ್​ನಲ್ಲೆ 93 ರನ್ ಬಾರಿಸಿ ಗೆಲುವು ತಂದಿಟ್ಟರು. ಭಾರತ ಪರ ಭುವನೇಶ್ವರ್​ ಕುಮಾರ್ 2 ವಿಕೆಟ್ ಪಡೆದರು.

ಈ ಮೂಲಕ ನ್ಯೂಜಿಲೆಂಡಗ 8 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಸರಣಿ ಕಳೆದುಕೊಂಡಿದ್ದರು ಸೋಲಿನ ಅಂತರವನ್ನು 3-1ಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿ ಮಾನ ಉಳಿಸಿಕೊಂಡಿದೆ. ಕೊನೆಯ ಪಂದ್ಯ ಫೆ. 3 ರಂದು ವೆಲ್ಲಿಂಗ್ಟನ್​​ನಲ್ಲಿ ನಡೆಯಲಿದೆ. ಮಾರಕ ಬೌಲಿಂಗ್ ನಡೆಸಿದ ಟ್ರೆಂಟ್ ಬೌಲ್ಟ್​ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
First published:January 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ