ಭಾರತ vs ನ್ಯೂಜಿಲೆಂಡ್: ಅಂತಿಮ ಏಕದಿನಕ್ಕೆ ಧೋನಿ ಫಿಟ್

37 ವರ್ಷ ಪ್ರಾಯದ ಧೋನಿ ಅವರ ತೊಡೆಯ ಹಿಂಭಾಗದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 3ನೇ ಹಾಗೂ 4ನೇ ಪಂದ್ಯದಲ್ಲಿ ಆಡಿರಲಿಲ್ಲ. ಹೀಗಾಗಿ ಧೋನಿ ಜಾಗದಲ್ಲಿ ಕಾರ್ತಿಕ್​​ ಸ್ಥಾನ ಪಡೆದಿದ್ದರು.

Vinay Bhat | news18
Updated:February 2, 2019, 12:13 PM IST
ಭಾರತ vs ನ್ಯೂಜಿಲೆಂಡ್: ಅಂತಿಮ ಏಕದಿನಕ್ಕೆ ಧೋನಿ ಫಿಟ್
ನೆಟ್​​ನಲ್ಲಿ ಅಭ್ಯಾಸ ಮಾಡುತ್ತಿರುವ ಎಂ ಎಸ್ ಧೋನಿ
Vinay Bhat | news18
Updated: February 2, 2019, 12:13 PM IST
ವೆಲ್ಲಿಂಗ್​​ಟನ್ (ಫೆ. 02): ಈಗಾಗಲೇ ಸರಣಿ ಕೈವಶ ಮಾಡಿಕೊಂಡಿರುವ ಭಾರತ ನಾಲ್ಕನೇ ಏಕದಿನ ಪಂದ್ಯದಲ್ಲಿ ಸೋಲುಂಡಿದ್ದರೆ, ಇತ್ತ ನ್ಯೂಜಿಲೆಂಡ್ ತನ್ನ ಸೋಲಿನ ಅಂತರವನ್ನು ತಗ್ಗಿಸಿದೆ. ನಾಳೆ ಅಂತಿಮ ಐದನೇ ಏಕದಿನ ಪಂದ್ಯ ನಡೆಯಲಿದ್ದು, ಭಾರತ ಕಳೆದ ಪಂದ್ಯದ ಸೋಲಿನ ಸೇಡಿಗಾಗಿ ಕಾಯುತ್ತಿದ್ದರೆ ಕಿವೀಸ್​ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್​ನಲ್ಲಿ ಸಂಪೂರ್ಣ ವಿಫಲವಾಗಿತ್ತು. ಅಂತೆಯೆ ಪ್ರಮುಖ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿದ್ದರೆ, ಇಂಜುರಿಯಿಂದ ಎಂ ಎಸ್ ಧೋನಿ ಕಣಕ್ಕಿಳಿಯಲಿಲ್ಲ.

ಧೋನಿ ಅವರು ತಮ್ಮ ಕ್ರಿಕೆಟ್​​ ಜೀವನದಲ್ಲಿ ಇದು ಮೂರನೇ ಬಾರಿಯಷ್ಟೆ ಇಂಜುರಿಗೆ ತುತ್ತಾಗಿ ಪಂದ್ಯದಿಂದ ಹೊರಗುಳಿದಿದ್ದರು. 2007ರಲ್ಲಿ ವೈರಲ್ ಫಿವರ್​​ ಬಂದ ಕಾರಣ ಎರಡು ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದಾದ ಬಳಿಕ ಮೊನ್ನೆಯ ಪಂದ್ಯದಲ್ಲೆ ಹ್ಯಾಮ್​​ಸ್ಟ್ರಿಂಗ್​​ನಿಂದ ಧೋನಿ ಬಳಲುತ್ತಿದ್ದರು.

ಇದನ್ನೂ ಓದಿ: ಕೆ ಎಲ್ ರಾಹುಲ್ ಫಾರ್ಮ್​​​ ಬಗ್ಗೆ ನನಗೇನು ಚಿಂತೆಯಿಲ್ಲ: ರಾಹುಲ್ ದ್ರಾವಿಡ್

ಧೋನಿ ಅವರ ಸುಮಾರು 12 ವರ್ಷಗಳಲ್ಲಿ ಒಟ್ಟು ಮೂರು ಬಾರಿ ಪಂದ್ಯದಿಂದ ಹೊರಗುಳಿದಿದ್ದಾರಷ್ಟೆ. ಸದ್ಯ ಧೋನಿ ಅವರು ಐದನೇ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗೇರ ಹೇಳಿದ್ದಾರೆ.

37 ವರ್ಷ ಪ್ರಾಯದ ಧೋನಿ ಅವರ ತೊಡೆಯ ಹಿಂಭಾಗದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 3ನೇ ಹಾಗೂ 4ನೇ ಪಂದ್ಯದಲ್ಲಿ ಆಡಿರಲಿಲ್ಲ. ಹೀಗಾಗಿ ಧೋನಿ ಜಾಗದಲ್ಲಿ ಕಾರ್ತಿಕ್​​ ಸ್ಥಾನ ಪಡೆದಿದ್ದರು. ಅಂತಿಮ ಐದನೇ ಏಕದಿನ ಪಂದ್ಯ ನಾಳೆ ವೆಲ್ಲಿಂಗ್​​ಟನ್​​ನಲ್ಲಿ ನಡೆಯಲಿದೆ.

First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...