India vs New Zealand: ಕಿವೀಸ್ ನಾಡಲ್ಲಿ ಸಚಿನ್ ದಾಖಲೆ ಪುಡಿ ಮಾಡ್ತಾರ ಧೋನಿ..?

ಆಸ್ಟ್ರೇಲಿಯ ವಿರುದ್ಧ ನೀಡಿದ ಪ್ರದರ್ಶನವನ್ನೆ ನ್ಯೂಜಿಲೆಂಡ್​​​ನಲ್ಲೂ ಧೋನಿ ನೀಡಿದರೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ಪುಡಿಪುಡಿ ಆಗುವುದು ಖಂಡಿತ.

Vinay Bhat | news18
Updated:January 21, 2019, 6:15 PM IST
India vs New Zealand: ಕಿವೀಸ್ ನಾಡಲ್ಲಿ ಸಚಿನ್ ದಾಖಲೆ ಪುಡಿ ಮಾಡ್ತಾರ ಧೋನಿ..?
ಎಂ ಎಸ್ ಧೋನಿ
  • News18
  • Last Updated: January 21, 2019, 6:15 PM IST
  • Share this:
ಕಾಂಗರೂಗಳ ನಾಡಲ್ಲಿ ಮಿಂಚು ಹರಿಸಿದ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಸದ್ಯ ನ್ಯೂಜಿಲೆಂಡ್ ಸರಣಿಗೆ ಸಜ್ಜಾಗುತ್ತಿದ್ದಾರೆ.

ಈಗಾಗಲೇ ಕಿವೀಸ್ ನಾಡಿಗೆ ಬಂದಿಳಿದಿರುವ ಭಾರತ ಬುಧವಾರದಂದು ಮೊದಲ ಏಕದಿನ ಪಂದ್ಯ ಆಡಲಿದೆ. ಅಂತೆಯೆ ನ್ಯೂಜಿಲೆಂಡ್ ಸರಣಿಯಲ್ಲಿ ಧೋನಿ ಹೊಸ ದಾಖಲೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ನೀಡಿದ ಪ್ರದರ್ಶನವನ್ನೆ ನ್ಯೂಜಿಲೆಂಡ್​​​ನಲ್ಲೂ ಧೋನಿ ನೀಡಿದರೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ಪುಡಿಪುಡಿ ಆಗುವುದು ಖಂಡಿತ.

ನ್ಯೂಜಿಲೆಂಡ್ ವಿರುದ್ದ ಅವರ ನೆಲದಲ್ಲೇ ಧೋನಿ ಈವರೆಗೆ 10 ಪಂದ್ಯಗಳನ್ನು ಆಡುದ್ದು, 456 ರನ್ ಬಾರಿಸಿದ್ದಾರೆ. ಇತ್ತ ಸಚಿನ್ 18 ಇನ್ನಿಂಗ್ಸ್​​​ನಲ್ಲಿ 652 ರನ್ ಗಳಿಸಿದ್ದಾರೆ. ಹೀಗಾಗಿ ಸಚಿನ್ ದಾಖಲೆ ಮುರಿಯಲು ಧೋನಿಗೆ ಇನ್ನು 197 ರನ್​ಗಳ ಅವಶ್ಯಕತೆಯಿದೆ. ಧೋನಿ ಈ ಸಾಧನೆ ಮಾಡಿದ್ದೆ ಆದಲ್ಲಿ ನ್ಯೂಜಿಲೆಂಡ್ ಮೈದಾನದಲ್ಲಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಲಿದ್ದಾರೆ.

ಇದನ್ನೂ ಒದಿ: ನಮಗೆ ಕೊಹ್ಲಿ ಬದಲು ಟೀಂ ಇಂಡಿಯಾ ಓಪವರ್​​​ಗಳ ಬಗ್ಗೆ ಹೆಚ್ಚು ಚಿಂತೆ

ನ್ಯೂಜಿಲೆಂಡ್​​ನಲ್ಲಿ ಭಾರತ ಒಟ್ಟು ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ. ಈ ಪೈಕಿ ಮೊದಲ ಏಕದಿನ ಪಂದ್ಯ ಬುಧವಾರ ನಡೆಯಲಿದೆ.

ಏಕದಿನ ಸರಣಿ ಭಾರತ ತಂಡ:ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಕೇದರ್ ಜಾಧವ್, ಎಂ ಎಸ್ ಧೋನಿ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ, ವಿಜಯ್ ಶಂಕರ್, ಶುಭ್ಮನ್ ಗಿಲ್.

ಟಿ-20 ಸರಣಿಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೇದರ್ ಜಾಧವ್, ಎಂ ಎಸ್ ಧೋನಿ, ಕ್ರುನಾಲ್ ಪಾಂಡ್ಯ ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್,  ಭುವನೇಶ್ವರ್ ಕುಮಾರ್, ಸಿದ್ಧಾರ್ಥ್​ ಕೌಲ್, ಖಲೀಲ್ ಅಹ್ಮದ್, ವಿಜಯ್ ಶಂಕರ್, ಶುಭ್ಮನ್ ಗಿಲ್.

First published:January 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading