ಸರಣಿ ಗೆಲುವಿನತ್ತ ಕೊಹ್ಲಿ ಪಡೆ ಚಿತ್ತ: ಕಿವೀಸ್​ಗೆ ತಿರಗಿಬೀಳಲು ಕೊನೆಯ ಅವಕಾಶ

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್​ ತಲೆನೋವಿನ ವಿಷ್ಯ ಅಂದರೆ ಬ್ಯಾಟ್ಸ್​ಮನ್​ಗಳ ವೈಫಲ್ಯ. ನಾಯಕ​​ ಸೇರಿದಂತೆ ಉಳಿದೆಲ್ಲಾ ಬ್ಯಾಟ್ಸ್​​ಮನ್​ಗಳು ಕ್ರೀಸ್ ಕಚ್ಚಿ ಆಡೋಕೆ ಹೆಣಗಾಡುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ.

Vinay Bhat | news18
Updated:January 27, 2019, 5:36 PM IST
ಸರಣಿ ಗೆಲುವಿನತ್ತ ಕೊಹ್ಲಿ ಪಡೆ ಚಿತ್ತ: ಕಿವೀಸ್​ಗೆ ತಿರಗಿಬೀಳಲು ಕೊನೆಯ ಅವಕಾಶ
ಕಳೆದ ವರ್ಷ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಬೆಳೆಸಿದ್ದಾಗ ಏಕದಿನ ಸರಣಿಯಲ್ಲಿ 1-4 ಅಂತರದಿಂದ ಸೋಲುಂಡಿತ್ತು. ಮತ್ತು ಟಿ-20 ಯಲ್ಲಿ 2-1 ಅಂತರದಿಂದ ಗೆದ್ದಿತ್ತು ಎಂಬುವುದನ್ನು ಇಲ್ಲಿ ನೆನೆಯಬಹುದು.
  • News18
  • Last Updated: January 27, 2019, 5:36 PM IST
  • Share this:
ಮೌಂಟ್ ಮೌಂಗನ್ಯುಯಿ (ಜ. 27): ಆತಿಥೇಯರ ನಾಡಿಗೆ ಕಾಲಿಟ್ಟು ಮೊದಲೆರಡು ಪಂದ್ಯಗಳಲ್ಲಿ ಶಾಕ್ ನೀಡಿರೋ ಟೀಂ ಇಂಡಿಯಾ ನಾಳೆ 3ನೇ ಏಕದಿನ ಪಂದ್ಯದಲ್ಲಿ ಕಿವೀಸ್ ಸವಾಲು ಸ್ವೀಕರಿಸುತ್ತಿದೆ. ಮೌಂಟ್ ಮೌಂಗನ್ಯುಯಿಯ ಬೇ ಓವಲ್ ಮೈದಾನದಲ್ಲೇ ನಡೆಯುತ್ತಿರುವ ಈ ಪಂದ್ಯ​ ನ್ಯೂಜಿಲೆಂಡ್ ಪಾಲಿಗೆ ಬಹುಮುಖ್ಯ​ ಆಗಿದ್ದರೆ, ಟೀಂ ಇಂಡಿಯಾ ಸರಣಿ ಕೈವಶ ಮಾಡಿವ ಮೇಲೆ ಕಣ್ಣಿಟ್ಟಿದೆ.

ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕೊಹ್ಲಿ ಪಡೆ ಈ ಪಂದ್ಯದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ನ್ಯೂಜಿಲೆಂಡ್​ ಪ್ರವಾಸದಲ್ಲಿ ಕೊಹ್ಲಿ ವಿಶ್ರಾಂತಿ ಪಡೆಯಲಿರುವುದರಿಂದ  ಕೊಹ್ಲಿಗಿದು ಕೊನೆಯ ಪಂದ್ಯವಾಗಿದೆ. ಹೀಗಾಗಿ ಕಳೆದ ಪಂದದಲ್ಲಾಡಿದ ತಂಡವೇ ಬೇ ಓವಲ್​ನಲ್ಲಿ ಕಣಕ್ಕಿಳಿಯಲಿದೆ.

ಇತ್ತ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್​ ತಲೆನೋವಿನ ವಿಷ್ಯ ಅಂದರೆ ಬ್ಯಾಟ್ಸ್​ಮನ್​ಗಳ ವೈಫಲ್ಯ. ನಾಯಕ​​ ಸೇರಿದಂತೆ ಉಳಿದೆಲ್ಲಾ ಬ್ಯಾಟ್ಸ್​​ಮನ್​ಗಳು ಕ್ರೀಸ್ ಕಚ್ಚಿ ಆಡಲು ಹೆಣಗಾಡುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಅದರಲ್ಲು ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾದ ಅವಳಿ ಸ್ಪಿನ್ನರ್​​ಗಳಾದ ಚಹಾಲ್​-ಕುಲ್​ದೀಪ್​​ ದಾಳಿಯನ್ನ ಹೇಗೆ ಎದುರಿಸುವುದು ಎಂಬುದೆ ಕಿವೀಸ್ ಪಡೆಗೆ ತಲೆನೋವಾಗಿಬಿಟ್ಟಿದೆ.

ಇದನ್ನೂ ಓದಿ: ರಣಜಿ ಸೆಮೀಸ್: ಟೊಂಕ ಕಟ್ಟಿ ನಿಂತ ಪೂಜಾರ: ಸೋಲಿನ ಸುಳಿಯಲ್ಲಿ ಕರ್ನಾಟಕ

ಒಟ್ಟಿನಲ್ಲಿ ಈಗಾಗಲೇ ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಈ ಪಂದ್ಯದಲ್ಲೂ ಗೆಲುವಿನ ಫೇವರಿಟ್ ಆಗಿದೆ. ಕಿವೀಸ್ ಅಂಗಳದಲ್ಲಿ ಹ್ಯಾಟ್ರಿಕ್​ ಗೆಲುವು ಕಂಡಿದ್ದೇ ಆದಲ್ಲಿ ಇನ್ನೂ 2 ಪಂದ್ಯಗಳಿರುವಂತೆಯೇ ಸರಣಿಯನ್ನ ಗೆದ್ದು ಬೀಗಲಿದೆ. ಹಾಗೇನಾದರು ಆದಲ್ಲಿ ತವರಿನ ಅಂಗಳದಲ್ಲಿ ನ್ಯೂಜಿಲೆಂಡ್ ಭಾರೀ ಅವಮಾನ ಎದುರಿಸಬೇಕಾಗುತ್ತೆ.

First published:January 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading