ನ್ಯೂಜಿಲೆಂಡ್ ವಿರುದ್ಧ ನಾಳೆ ಮೊದಲ ಏಕದಿನ: ಗೆಲುವಿನ ಓಟ ಮುಂದುವರಿಸುತ್ತ ಕೊಹ್ಲಿ ಪಡೆ?

ಮೆಕ್​​​ಲೀನ್ ಪಾರ್ಕ್​​ನಲ್ಲಿನ ಪಿಚ್ ಬ್ಯಾಟ್ಸ್​​ಮನ್​​ಗಳ ಪಾಲಿನ ಸ್ವರ್ಗವಾಗಿದ್ದು, ರನ್​​ ಮಳೆ ಸುರಿಯುವ ಅಂದಾಜಿದೆ. ಮೊದಲ ಬ್ಯಾಟ್ ಮಾಡುವ ತಂಡದ ಮೊತ್ತ 300ರ ಗಡಿ ದಾಟುವುದರಲ್ಲಿ ಅನುಮಾನವಿಲ್ಲ.

Vinay Bhat | news18
Updated:January 22, 2019, 5:23 PM IST
ನ್ಯೂಜಿಲೆಂಡ್ ವಿರುದ್ಧ ನಾಳೆ ಮೊದಲ ಏಕದಿನ: ಗೆಲುವಿನ ಓಟ ಮುಂದುವರಿಸುತ್ತ ಕೊಹ್ಲಿ ಪಡೆ?
ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ
  • News18
  • Last Updated: January 22, 2019, 5:23 PM IST
  • Share this:
ನೇಪಿಯರ್​​ (ಜ. 22): ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ ನಾಳೆಯಿಂದ ನ್ಯೂಜಿಲೆಂಡ್ ಅಂಗಳದಲ್ಲಿ ಸೆಣಸಾಟ ನಡೆಸಲಿದೆ.

ನೇಪಿಯರ್​​ನ ಮೆಕ್​ಲೀನ್​ ಪಾರ್ಕ್​​ ಮೈದಾನದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್​ ಸವಾಲು ಸ್ವೀಕರಿಸಲಿದೆ. ಮುಂಬರುವ ವಿಶ್ವಕಪ್​​ಗಾಗಿ ಭಾರತಕ್ಕೆ ಈ ಸರಣಿ ಅಗ್ನಿಪರೀಕ್ಷೆ ಆಗಿದ್ದು ಎಚ್ಚರಿಕೆಯಿಂದ ಪ್ರತಿಯೊಂದು ಹೆಜ್ಜೆಯನ್ನು ಇಡಬೇಕಿದೆ.

ಟೀಂ ಇಂಡಿಯಾ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಕಣಕ್ಕಿಳಿಯಲಿದ್ದಾರೆ. ವಿಶ್ವಕಪ್ ಹಿತದೃಷ್ಟಿಯಿಂದ ಈ ಪಿಚ್​ನಲ್ಲಿ ಭಾರತೀಯ ಓಪನರ್​ಗಳು ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬ ಪ್ರಯೋಗ ಇಲ್ಲಿ ನಡೆಯಬೇಕಿದೆ.

ಇದನ್ನೂ ಒದಿ: ಸಂಕಷ್ಟದಲ್ಲಿರುವ ಟೀಂ ಇಂಡಿಯಾ ಆಟಗಾರನಿಗೆ ಬ್ಲಾಂಕ್ ಚೆಕ್ ನೀಡಿದ ಕ್ರುನಾಲ್ ಪಾಂಡ್ಯ

ಭಾರತದ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ವಿರಾಟ್ ಕೊಹ್ಲಿ, ಎಂ ಎಸ್ ಧೋನಿ, ಕೇದರ್ ಜಾಧವ್ ಹಾಗೂ ದಿನೇಶ್ ಕಾರ್ತಿಕ್ ಉತ್ತಮ ಆಟ ಪ್ರದರ್ಶಿಸುತ್ತಿದ್ದು, ಭರ್ಜರಿ ಫಾರ್ಮ್​​ನಲ್ಲಿದ್ದಾರೆ. ಆಲ್ರೌಂಡರ್ ಜವಾಬ್ದಾರಿ ವಿಜಯ್ ಶಂಕರ್​ಗೆ ನೀಡುವ ಅಂದಾಜಿದ್ದು, ಸ್ಪಿನ್ನರ್​​ಗಳಾಗಿ ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಅಂತೆಯೆ ವೇಗಿಗಳ ಪೈಕಿ ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಆಡುವ 11ರ ಬಳಗದಲ್ಲಿ ಕಾಣಿಸುವ ಸೂಚನೆಯಿದೆ.

ಇತ್ತ ನ್ಯೂಜಿಲೆಂಡ್ ತಂಡ ಬಲಿಷ್ಠವಾಗಿದ್ದು, ಸ್ಟಾರ್ ಆಟಗಾರರಿಂದ ಕೂಡಿದೆ. ಕೇನ್ ವಿಲಿಯಮ್ಸನ್​ ಮುಂದಾಳತ್ವದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್​ ತವರಿನಲ್ಲಿ ಬಲಿಷ್ಠವಾಗಿದ್ದು ಕೊಹ್ಲಿ ಪಡೆಗೆ ಪ್ರಬಲ ಸವಾಲು ಒಡ್ಡಲಿದೆ. ಭರ್ಜರಿ ಫಾರ್ಮ್​​ನಲ್ಲಿರುವ ವಿಲಿಯಮ್ಸನ್ ಹಾಗೂ ರೋಸ್ ಟೇಲರ್ ತಂಡದ ಪ್ರಮುಖ ಅಸ್ತ್ರ. ಅಂತೆಯೆ ಕಾಲಿನ್ ಡಿ ಗ್ರ್ಯಾಂಡ್​​​​ಹೋಮ್​​ ಹಾಗೂ ಟಾಮ್ ಲ್ಯಾಂಥಮ್​​​ ತಂಡ ಸೇರಿಕೊಂಡಿದ್ದು ಮತ್ತಷ್ಟು ಬಲ ಬಂದಿದೆ. ಮಾರ್ಟಿನ್ ಗಪ್ಟಿಲ್​​​ರಂತಹ ಬ್ಯಾಟ್ಸ್​ಮನ್​ ಹಾಗೂ ಟಿಮ್ ಸೌಥಿಯಂತಹ ಅನುಭವಿ ಬೌಲರ್​​​ ತಂಡದಲ್ಲಿರುವು ಭಾರತಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ಇದನ್ನೂ ಓದಿ: 'ಕಿಂಗ್ ಕೊಹ್ಲಿ': 2018ರ ಐಸಿಸಿ ಏಕದಿನ ಹಾಗೂ ಟೆಸ್ಟ್​​ ತಂಡದಲ್ಲಿ ವಿರಾಟನೇ ಸಾಮ್ರಾಟಇನ್ನು ಮೆಕ್​​​ಲೀನ್ ಪಾರ್ಕ್​​ನಲ್ಲಿನ ಪಿಚ್ ಬ್ಯಾಟ್ಸ್​​ಮನ್​​ಗಳ ಪಾಲಿನ ಸ್ವರ್ಗವಾಗಿದ್ದು, ರನ್​​ ಮಳೆ ಸುರಿಯುವ ಅಂದಾಜಿದೆ. ಮೊದಲ ಬ್ಯಾಟ್ ಮಾಡುವ ತಂಡದ ಮೊತ್ತ 300ರ ಗಡಿ ದಾಟುವುದರಲ್ಲಿ ಅನುಮಾನವಿಲ್ಲ. ಅಂತೆಯೆ ಮೊದಲ 10 ಓವರ್​​ಗಳ ಪವನ್-ಪ್ಲೇ ನಲ್ಲಿ ವಿಕೆಟ್ ಉರುಳುವ ಸಾಧ್ಯತೆ ಕಡಿಮೆ. ನೇಪಿಯರ್​​ನಲ್ಲಿ ಭಾರತ ಈವರೆಗೆ ಒಟ್ಟು 6 ಏಕದಿನ ಪಂದ್ಯಗಳನ್ನು ಆಡಿದ್ದು, ಕೇವಲ 2 ರಲ್ಲಿ ಜಯ ಸಾಧಿಸಿದೆ. ಉಳಿದ 4 ರಲ್ಲಿ ನ್ಯೂಜಿಲೆಂಡ್ ಗೆದ್ದು ಬೀಗಿದೆ.

ಪಂದ್ಯ ಆರಂಭ: ಭಾರತದ ಕಾಲಮಾನ ಬೆಳಗ್ಗೆ 7:30 ಕ್ಕೆ

First published:January 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading