ಪಂತ್-ಖಲೀಲ್ ಕಮ್​​ಬ್ಯಾಕ್​​​: ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ-20ಗೆ ಭಾರತದ ಸಂಭಾವ್ಯ ಪಟ್ಟಿ

19 ವರ್ಷ ಪ್ರಾಯದ ಶುಭ್ಮನ್ ಗಿಲ್ ಕೊಹ್ಲಿ ಸ್ಥಾನವನ್ನು ತುಂಬಲಿದ್ದಾರೆ. 3ನೇ ಕ್ರಮಾಂಕದಲ್ಲಿ ಆಡುವ ಈತ ಏಕದಿನ ಸರಣಿಯಲ್ಲಿ ವಿಫಲರಾಗಿದ್ದರು. ಸದ್ಯ ಇವರ ಪ್ರದರ್ಶನ ಟಿ-20ಯಲ್ಲಿ ಯಾವರೀತಿ ಇರಲಿದೆ ಎಂಬುದು ಕುತೂಹಲ ಕೆರಳಿಸಿದೆ.

Vinay Bhat | news18
Updated:February 5, 2019, 4:32 PM IST
ಪಂತ್-ಖಲೀಲ್ ಕಮ್​​ಬ್ಯಾಕ್​​​: ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ-20ಗೆ ಭಾರತದ ಸಂಭಾವ್ಯ ಪಟ್ಟಿ
ಕುಲ್ದೀಪ್ ಯಾದವ್ ಜೊತೆ ರೋಹಿತ್ ಶರ್ಮಾ
  • News18
  • Last Updated: February 5, 2019, 4:32 PM IST
  • Share this:
ವೆಲ್ಲಿಂಗ್ಟನ್ (ಫೆ. 05): ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯಲ್ಲಿ 4-1 ರಿಂದ ಗೆದ್ದು ಬೀಗಿರುವ ಟೀಂ ಇಂಡಿಯಾ ಸದ್ಯ ಚುಟುಕು ಸಮರಕ್ಕೆ ಸಜ್ಜಾಗಿದೆ. ಉಭಯ ತಂಡಗಳಿಗೆ ಈ ಸರಣಿ ಮುಖ್ಯವಾಗಿದ್ದು, ಬಲಿಷ್ಠ ತಂಡವನ್ನೇ ಕಣಕ್ಕಿಳಿಸುವ ಅಂದಾಜಿದೆ. ಅಂತೆಯೆ ಟೀಂ ಇಂಡಿಯಾದ ಆಡುವ 11ರ ಬಳಗ ಹೇಗಿರಬಹುದು ಎಂಬುದನ್ನು ನೋಡುವುದಾದರೆ…

ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದು, ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಕಳೆದ ಕೊನೆಯ ಎರಡು ಏಕದಿನ ಪಂದ್ಯದಲ್ಲಿ ನಾಯಕನಾಗಿ ತಂಡವನ್ನು ಹೊತ್ತೊಯ್ಯುವಲ್ಲಿ ರೋಹಿತ್ ಕೊಂಚ ಎಡವಿದ್ದು, ಸದ್ಯ ಟಿ-20 ಸರಣಿಯಲ್ಲಿ ರೋಹಿತ್ ಮತ್ತೆ ಫಾರ್ಮ್​​ಗೆ ಮರಳಬೇಕಿದೆ. ಇವರ ಜೊತೆ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

19 ವರ್ಷ ಪ್ರಾಯದ ಶುಭ್ಮನ್ ಗಿಲ್ ಕೊಹ್ಲಿ ಸ್ಥಾನವನ್ನು ತುಂಬಲಿದ್ದಾರೆ. 3ನೇ ಕ್ರಮಾಂಕದಲ್ಲಿ ಆಡುವ ಈತ ಏಕದಿನ ಸರಣಿಯಲ್ಲಿ ವಿಫಲರಾಗಿದ್ದರು. ಸದ್ಯ ಇವರ ಪ್ರದರ್ಶನ ಟಿ-20ಯಲ್ಲಿ ಯಾವರೀತಿ ಇರಲಿದೆ ಎಂಬುದು ಕುತೂಹಲ ಕೆರಳಿಸಿದೆ. ಅಂತೆಯೆ 4ನೇ ಕ್ರಮಾಂಕದಲ್ಲಿ ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ಆಡಿದರೆ ಉತ್ತಮ. ಸಿಡಿಲಬ್ಬರದ ಬ್ಯಾಟಿಂಗ್​​ಗೆ ಹೇಳಿಮಾಡಿಸಿದ ಆಟಗಾರ ಇವರಾಗಿದ್ದು, ಈಗಾಗಲೇ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ರಿಷಭ್ ಪಂತ್​ರ ಈ ವಿಭಿನ್ನ ಶಾಟ್​ಗೆ ಏನೆಂದು ಹೆಸರಿಡಬಹುದು?: ವಿಡಿಯೋ ವೈರಲ್

ಇನ್ನು ಎಂ ಎಸ್ ಧೋನಿ ಉಪಸ್ಥಿತಿ ಟಿ-20 ಪಂದ್ಯದಲ್ಲು ಮುಖ್ಯವಾಗಿದ್ದು, 5ನೇ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ. 15 ಓವರ್​ ಬಳಿಕ ಧೋನಿ ಬ್ಯಾಟ್ ಬೀಸಲು ಬಂದರೆ ತಂಡದ ರನ್ ಗತಿ ಮತ್ತಷ್ಟು ಏರುವುದು ಕಂಡಿತ. ಅಂತೆಯೆ 6ನೇ ಸ್ಥಾನ ಕೇದರ್ ಜಾಧವ್​​ಗೆ ಹೇಳಿಮಾಡಿಸಿದ್ದಾಗಿದ್ದು, ಮುಂಬರುವ ವಿಶ್ವಕಪ್​​ನಲ್ಲೂ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ.

ಆಲ್ರೌಂಡರ್ ಪೈಕಿ ಪಾಂಡ್ಯ ಬ್ರದರ್ಸ್​​ ತಂಡದಲ್ಲಿದ್ದು ಕ್ರುನಾಲ್ ಹಾಗೂ ಹಾರ್ದಿಕ್ ಪೈಕಿ ಹಾರ್ದಿಕ್​​ಗೆ ಅವಕಾಶ ಸಿಗುವ ಲಕ್ಷಣಗಳು ಹೆಚ್ಚಿವೆ. ಕೊನೆಯ ಏಕದಿನ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿ ಭರ್ಜರಿ ಫಾರ್ಮ್​​ನಲ್ಲಿರುವ ಹಾರ್ದಿಕ್​​ ಕಣಕ್ಕಿಳಿಯುವುದು ಪಕ್ಕ. ಇನ್ನು ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಇಬ್ಬರೂ ಆಡುವ ಅಂದಾಜಿದೆ.

ಇದನ್ನೂ ಓದಿ: ನ್ಯೂಜಿಲ್ಯಾಂಡ್​ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಭಾರತೀಯ ಕ್ರಿಕೆಟಿಗವೇಗಿಗಳ ಪೈಕಿ ಭುವನೇಶ್ವರ್ ಕುಮಾರ್ ತಮ್ಮ ಸ್ಥಾನವನ್ನು ಭದ್ರಗೊಳಿಸಿದ್ದು, ಇನ್ನೊಬ್ಬ ಬೌಲರ್​​ ಖಲೀಲ್ ಅಹ್ಮದ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡರೆ ಉತ್ತಮ.

First published:February 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading