ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ: ಭಾರತ ತಂಡ ಹೀಗಿದ್ದರೆ ಗೆಲುವು ಖಚಿತ

ವಿಶ್ವಕಪ್ ಹಿತದೃಷ್ಟಿಯಿಂದ ಈ ಪಿಚ್​ನಲ್ಲಿ ಭಾರತೀಯ ಓಪನರ್​ಗಳು ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬ ಪ್ರಯೋಗವು ಇಲ್ಲಿ ನಡೆಯಲಿದೆ. ಹೀಗಾಗಿ ಓಪನರ್​​ಗಳ ಪೈಕಿ ಯಾವುದೇ ಬದಲಾವಣೆ ಇಲ್ಲದೆ ಭಾರತ ಆಡಲಿದೆ.

Vinay Bhat | news18
Updated:January 22, 2019, 11:27 AM IST
ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ: ಭಾರತ ತಂಡ ಹೀಗಿದ್ದರೆ ಗೆಲುವು ಖಚಿತ
ಟೀಂ ಇಂಡಿಯಾ
  • News18
  • Last Updated: January 22, 2019, 11:27 AM IST
  • Share this:
ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಗೆಲುವಿನ ಬಳಿಕ ಟೀಂ ಇಂಡಿಯಾದ ಆತ್ವವಿಶ್ವಾಸ ಮತ್ತಷ್ಟು ಹೆಚ್ಚಿದೆ. ಇದೇ ಹುರುಪಿನೊಂದಿಗೆ ನ್ಯೂಜಿಲೆಂಡ್​ಗೆ ಬಂದಿಳಿದಿರುವ ಕೊಹ್ಲಿ ಪಡೆ ನಾಳೆಯಿಂದ ತನ್ನ ಏಕದಿನ ಸರಣಿ ಆರಂಭಿಸಲಿದೆ.

ನೇಪಿಯರ್​ನ ಮೆಕ್ಲೇನ್ ಪಾರ್ಕ್​​ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಬಲಿಷ್ಠ ತಂಡವನ್ನೆ ಭಾರತ ಕಣಕ್ಕಿಳಿಸಬೇಕಿದೆ. ಅಲ್ಲದೆ ಮುಂಬರುವ ವಿಶ್ವಕಪ್​​ಗಾಗಿ ಭಾರತಕ್ಕೆ ಈ ಸರಣಿ ಅಗ್ನಿಪರೀಕ್ಷೆ ಆಗಿದ್ದು ಎಚ್ಚರಿಕೆಯಿಂದ ಪ್ರತಿಯೊಂದು ಹೆಜ್ಜೆಯನ್ನು ಇಡಬೇಕಿದೆ. ಅಂತೆಯೆ ನಾಳಿನ ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದ ಆಡುವ 11ರ ಬಳದ ಹೇಗಿದ್ದರೆ ಉತ್ತಮ ಎಂಬ ಬಗ್ಗೆ ಇಲ್ಲಿದೆ ಮಾಹಿತಿ…

ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಕಣಕ್ಕಿಳಿಯಲಿದ್ದಾರೆ. ವಿಶ್ವಕಪ್ ಹಿತದೃಷ್ಟಿಯಿಂದ ಈ ಪಿಚ್​ನಲ್ಲಿ ಭಾರತೀಯ ಓಪನರ್​ಗಳು ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬ ಪ್ರಯೋಗವು ಇಲ್ಲಿ ನಡೆಯಲಿದೆ. ಹೀಗಾಗಿ ಓಪನರ್​​ಗಳ ಪೈಕಿ ಯಾವುದೇ ಬದಲಾವಣೆ ಇಲ್ಲದೆ ಭಾರತ ಆಡಲಿದೆ.

ಇದನ್ನೂ ಓದಿ: ಐಸಿಸಿ ಟೆಸ್ಟ್​ ರ್ಯಾಂಕಿಂಗ್: ಭಾರತ ಹಾಗೂ ಕೊಹ್ಲಿ ಅಗ್ರಸ್ಥಾನದಲ್ಲಿ ಭದ್ರ

ಮೂರನೇ ಕ್ರಮಾಂಕವನ್ನು ವಿರಾಟ್ ಕೊಹ್ಲಿ ಭದ್ರ ಪಡಿಸಿಕೊಂಡಿದ್ದಾರೆ. ಚೇಸಿಂಗ್​ಗೆ ಹೇಳಿಮಾಡಿಸಿದ ಆಟಗಾರನಾಗಿರುವ ಕೊಹ್ಲಿ ಈ ಸ್ಥಾನದಲ್ಲಿ ಆಡುವುದು ಖಚಿತ. ಅಂತೆಯೆ 4ನೇ ಕ್ರಮಾಂಕದಲ್ಲಿ ಎಂ ಎಸ್ ಧೋನಿ ಆಡಿದರೆ ಉತ್ತಮ. ಆಸೀಸ್ ವಿರುದ್ಧದ ಸರಣಿಯಲ್ಲಿಯೂ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಧೋನಿ ಅದ್ಭುತ ಪ್ರದರ್ಶನ ತೋರಿದ್ದರು. ಹೀಗಾಗಿ ಧೋನಿಗೆ ಇದೇ ಸ್ಥಾನ ಖಾಯಂ ಆದರೆ ತಂಡಕ್ಕೆ ಮತ್ತಷ್ಟು ಬಲಬರಲಿದೆ.

5 ಹಾಗೂ 6ನೇ ಸ್ಥಾನ ಕ್ರಮವಾಗಿ ಕೇದರ್ ಜಾಧವ್ ಹಾಗೂ ದಿನೇಶ್ ಕಾರ್ತಿಕ್​ಗೆ ಫಿಕ್ಸ್​. ಈ ಜೋಡಿಗೆ ಕೊನೆ ಹಂತದಲ್ಲಿ ಅಬ್ಬರಿಸುವ ಸಾಮರ್ಥ್ಯವಿದೆ. ಜಾಧವ್ ಆಸೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಆಡಿದ್ರು. ಆ ಪಂದ್ಯದಲ್ಲೇ ಧೋನಿ ಜೊತೆಗೂಡಿ ಅದ್ಭುತವಾಗಿ ಮ್ಯಾಚ್ ಫಿನಿಶಿಂಗ್ ಮಾಡಿದರು. ಹೀಗಾಗಿ ಇಂಥಹ ಆಟಗಾರ ಭಾರತಕ್ಕೆ ಬಹುಮುಖ್ಯ. ಇತ್ತ ದಿನೇಶ್ ಕಾರ್ತಿಕ್ ಕೂಡ ಕಷ್ಟದ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವ ಚಾಣಕ್ಯತೆ ಹೊಂದಿದ್ದಾರೆ.

ಆಲ್ರೌಂಡರ್ ವಿಭಾಗದಲ್ಲಿ ಇಬ್ಬರು ಭಾರತಕ್ಕೆ ಬೇಕೆ ಎಂಬ ಅನುಮಾನ ಮೂಡಿದೆ. ವಿಜಯ್ ಶಂಕರ್ ಹಾಗೂ ರವೀಂದ್ರ ಜಡೇಜಾ ಪೈಕಿ ವಿಜಯ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಅಲ್ಲದೆ ಕಳೆದ ಆಸೀಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಜಡೇಜಾ ಬದಲು ವಿಜಯ್​ಗೆ ಅವಕಾಶ ನೀಡಿದರೆ ಉತ್ತಮ.ಇದನ್ನೂ ಒದಿ: ರಣಜಿ ಸೆಮೀಸ್​ಗೆ ಕರ್ನಾಟಕ ತಂಡ ಪ್ರಕಟ: ಮಯಾಂಕ್​ಗೆ ಸ್ಥಾನ

ಇನ್ನು ಬೌಲಿಂಗ್​​ ಪೈಕಿ ಇಬ್ಬರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್​​ಗಳನ್ನು ವಿಶ್ವಕಪ್​​ ದೃಷ್ಟಿಯಿಂದ ಭಾರತ ಕಣಕ್ಕಿಳಿಸಬೇಕಿದೆ. ವೇಗಿಗಳ ಪೈಕಿ ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಆಡಿದರೆ, ಸ್ಪಿನ್​ ಬಳಗದಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ತಮ್ಮ ದಾಳಿ ಮುಂದುವರಿಸಬೇಕಿದೆ.

First published:January 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading