ನಾಳೆ ಎರಡನೇ ಟಿ-20: ಭಾರತ ಗೆಲ್ಲ ಬೇಕಾದರೆ ತಂಡ ಹೇಗಿರಬೇಕು?

ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಜೊತೆಗೆ ಫಾರ್ಮ್​​ನಲ್ಲೂ ಸಂಪೂರ್ಣ ವಿಫಲರಾಗಿದ್ದು, ನಾಳಿನ ಪಂದ್ಯದಲ್ಲಾದರು ತಮ್ಮ ಹಳೆಯ ಖದರ್​​ಗೆ ಮರಳಬೇಕಿದೆ.

Vinay Bhat | news18
Updated:February 7, 2019, 5:13 PM IST
ನಾಳೆ ಎರಡನೇ ಟಿ-20: ಭಾರತ ಗೆಲ್ಲ ಬೇಕಾದರೆ ತಂಡ ಹೇಗಿರಬೇಕು?
ಟೀಂ ಇಂಡಿಯಾ
Vinay Bhat | news18
Updated: February 7, 2019, 5:13 PM IST
ಆಕ್ಲೆಂಡ್ (ಪೆ. 07): ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಹೀನಾಯ ಸೋಲುಕಂಡಿದ್ದ ಭಾರತ ಸರಣಿ ಗೆಲ್ಲಬೇಕಾದರೆ ಉಳಿದಿರುವ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಬೇಕಾಗಿದೆ. ಹೀಗಾಗಿ ಆಕ್ಲೆಂಡ್​​​ನಲ್ಲಿ ನಾಳೆ ನಡೆಯಲಿರುವ ಎರಡನೇ ಟಿ-20 ಪಂದ್ಯ ಸಾಕಷ್ಟು ಕುತೂಹಲ ಕೆರಳಸಿದ್ದು, ಭಾರತದ ಆಡುವ 11ರ ಬಳಗ ಹೇಗಿದ್ದರೆ ಉತ್ತಮ ಎಂಬ ಬಗ್ಗೆ ಮಾಹಿತಿ ಇಲ್ಲಿದೆ…

ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಕಣಕ್ಕಿಳಿಯುವುದರಲ್ಲಿ ಅನುಮಾನವಿಲ್ಲ. ಆದರೆ, ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಜೊತೆಗೆ ಫಾರ್ಮ್​​ನಲ್ಲೂ ಸಂಪೂರ್ಣ ವಿಫಲರಾಗಿದ್ದು, ನಾಳಿನ ಪಂದ್ಯದಲ್ಲಾದರು ತಮ್ಮ ಹಳೆಯ ಖದರ್​​ಗೆ ಮರಳಬೇಕಿದೆ.

ಮೂರನೇ ಕ್ರಮಾಂಕದಲ್ಲಿ ಮೊದಲ ಟಿ-20 ಪಂದ್ಯದಲ್ಲಿ ವಿಜಯ್ ಶಂಕರ್ ಆಡಿದ್ದರು. ಆದರೆ ಶಂಕರ್​​ಗೆ ಬೌಲಿಂಗ್ ಕೊಡದೆ ಕೇವಲ ಬ್ಯಾಟ್ಸ್​ಮನ್​ ಆಗಿ ಉಪಯೋಗಿಸಲಾಯಿತು. ಅದರ ಬದಲು ಮತ್ತೊಬ್ಬ ಪ್ರತಿಭಾವಂತ ಬ್ಯಾಟ್ಸ್​ಮನ್​​​ ಶುಭ್ಮನ್​​​ ಗಿಲ್​​ಗೆ ಅವಕಾಶ ನೀಡಿದರೆ ಉತ್ತಮ.

ಇದನ್ನೂ ಓದಿ: 'ಕೊಹ್ಲಿ-ಸ್ಮೃತಿ' ಇಬ್ಬರ ಜೆರ್ಸಿ ನಂಬರ್ ಸೇಮ್: ಚಹಾಲ್ ಟಿವಿಯಲ್ಲಿ ಮುದ್ದಿನ ಮಂದಾನ ಹೇಳಿದ್ದೇನು?

ಟಿ-20 ಸರಣಿಗೆ ಕಮ್​ಬ್ಯಾಕ್ ಮಾಡಿರುವ ರಿಷಭ್ ಪಂತ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿಲ್ಲ. ಮೊದಲ ಪಂದ್ಯದಲ್ಲಿ ಫೇಲ್ ಆಗಿದ್ದರು. ಆದರೆ, ಪಂತ್​​​ಗೆ 4ನೇ ಕ್ರಮಾಂಕದಲ್ಲಿ ಮತ್ತೊಮ್ಮೆ ಅವಕಾಶ ನೀಡಿದರೆ ತಮ್ಮ ಸಾಮರ್ಥ್ಯವನ್ನು ತೋರಿಸಬಹುದು. ಎಂ ಎಸ್ ಧೋನಿ ಎಂದಿನಂತೆ 5ನೇ ಸ್ಥಾನಕ್ಕೆ ಫಿಕ್ಸ್​.

ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಉತ್ತಮ ಫಾರ್ಮ್​ನಲ್ಲಿದ್ದ ದಿನೇಶ್ ಕಾರ್ತಿಕ್ ನ್ಯೂಜಿಲೆಂಡ್ ಟಿ-20 ಪಂದ್ಯದಲ್ಲಿ ಕಳಪೆ ಆಟ ಪ್ರದರ್ಶಿಸಿದ್ದರು. ಆದರೆ, ಚೇಸಿಂಗ್​​ಗೆ ಹೇಳಿ ಮಾಡಿಸಿದ ಆಟಗಾರನಾಗಿರುವ ಕಾರ್ತಿಕ್ ಉಪಸ್ಥಿತಿ ತಂಡಕ್ಕೆ ಮಖ್ಯ. ಹೀಗಾಗಿ 6ನೇ ಸ್ಥಾನದಲ್ಲಿ ಕಾರ್ತಿಕ್ ಆಡಿದರೆ ತಂಡಕ್ಕೆ ತುಂಬಾನೆ ಸಹಾಯವಾಗಲಿದೆ.

ಇದನ್ನೂ ಓದಿ: ವಿರಾಟ್​-ಅನುಷ್ಕಾ ಕಾಡಿನಲ್ಲಿರುವಾಗ ಫೋಟೋ ಕ್ಲಿಕ್​ ಮಾಡಿದ್ದು ಅನಿಲ್​ ಕುಂಬ್ಳೆ!
Loading...

ಹಾರ್ದಿಕ್ ಪಾಂಡ್ಯ ಅಥವಾ ಕ್ರುನಾಲ್ ಪಾಂಡ್ಯ ಪೈಕಿ ಇಬ್ಬರಲ್ಲಿ ಒಬ್ಬರನ್ನ ಆಡಿಸಿದರೆ ಉತ್ತಮ. ಒಬ್ಬರ ಬದಲು ಕುಲ್ದೀಪ್ ಯಾದವ್​ಗೆ ಅವಕಾಶ ನೀಡಲೇಬೇಕು. ನಂತರ ಕಳೆದ ಪಂದ್ಯದಂತೆ ಭುವನೇಶ್ವರ್​ ಕುಮಾರ್, ಯಜುವೇಂದ್ರಚ ಹಾಲ್ ಹಾಗೂ ಖಲೀಲ್ ಅಹ್ಮದ್ ಕಣಕ್ಕಿಳಿದರೆ ಭಾರತ ತಂಡ ಬಲಿಷ್ಠವಾಗಲಿದೆ.

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...