ರೋಹಿತ್ ಅಬ್ಬರ, ಕ್ರುನಾಲ್ ಸ್ಪಿನ್ ಮೋಡಿ; ಸರಣಿ ಸಮಬಲ ಮಾಡಿಕೊಂಡ ಭಾರತ

159 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಭಾರತ ಸ್ಪೋಟಕ ಆರಂಭ ಪಡೆದುಕೊಂಡಿತು. ಕ್ರೀಸ್​​ಗೆ ಇಳಿದಾಗಿನಿಂದಲು ಅಬ್ಬರಿಸಿದ ರೋಹಿತ್​​​ ಆಕರ್ಷಕ ಹೊಡೆತಗಳಿಂದ ಗಮನ ಸೆಳೆದರು.

Vinay Bhat | news18
Updated:February 8, 2019, 4:28 PM IST
ರೋಹಿತ್ ಅಬ್ಬರ, ಕ್ರುನಾಲ್ ಸ್ಪಿನ್ ಮೋಡಿ; ಸರಣಿ ಸಮಬಲ ಮಾಡಿಕೊಂಡ ಭಾರತ
ರೋಹಿತ್ ಶರ್ಮಾ
Vinay Bhat | news18
Updated: February 8, 2019, 4:28 PM IST
ಆಕ್ಲೆಂಡ್ (ಫೆ. 08): ರೋಹಿತ್ ಶರ್ಮಾ ಅವರ ಬಿರುಸಿನ ಅರ್ಧಶತಕ ಹಾಗೂ ಕ್ರುನಾಲ್ ಪಾಂಡ್ಯರ ಸ್ಪಿನ್ ಮೋಡಿಯಿಂದ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 1-1ರ ಸಮಬಲ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಕಳೆದ ಪಂದ್ಯದಂತೆ ದೊಡ್ಡ ಮೊತ್ತ ಕಲೆಹಾಕುವ ಅಂದಾಜಿನಲ್ಲಿತ್ತು. ಆದರೆ, ಇವರ ಅಲೋಚನಯನ್ನು ಉಲ್ಟಾ ಮಾಡಿದ ಭುವನೇಶ್ವರ್​​​ ತನ್ನ 2ನೇ ಓವರ್​​​ನಲ್ಲಿ ಕಳೆದ ಬಾರಿ ಅಬ್ಬರಿಸಿದ್ದ ಟಿಮ್ ಸೀಫರ್ಟ್​​(12) ವಿಕೆಟ್ ಪಡೆದರು. ಬಳಿಕ ಬೌಲಿಂಗ್ ಮಾಡಲು ಬಂದ ಕ್ರುನಾಲ್ ಪಾಂಡ್ಯ ತನ್ನ ಮೊದಲ ಓವರ್​​ನಲ್ಲೇ ಕಾಲಿನ್ ಮನ್ರೊ(12) ಹಾಗೂ ಕೇನ್ ವಿಲಿಯಮ್ಸನ್​​(20) ಪ್ರಮುಖ ವಿಕೆಟ್ ಕಿತ್ತರು.

ಬಳಿಕ ತನ್ನ ಮುಂದಿನ ಓವರ್​ನಲ್ಲಿ ಕ್ರುನಾಲ್ ಡಾರ್ಲ್​​​ ಮಿಚೆಲ್(1) ವಿಕೆಟ್ ಪಡೆದು 50 ರನ್​​ ಆಗುವ ಹೊತ್ತಿಗೆ ಕಿವೀಸ್​ 4 ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು. ಆದರೆ, 5ನೇ ವಿಕೆಟ್​ ಒಂದಾದ ಕಾಲಿನ್ ಗ್ರ್ಯಾಂಡ್​​ಹೋಮ್ ಹಾಗೂ ರಾಸ್ ಟೇಲರ್​ ಭರ್ಜರಿ ಜೊತೆಯಾಟ ಪ್ರದರ್ಶಿಸಿ ತಂಡದ ಮೊತ್ತವನ್ನು ಏರಿಸಿದರು. ಅದರಲ್ಲು ಅಬ್ಬರಿಸಿದ ಗ್ರ್ಯಾಂಡ್​ಹೋಮ್​​ 28 ಎಸೆತಗಳಲ್ಲಿ 4 ಸಿಕ್ಸ್​ನೊಂದಿಗೆ ಭರ್ಜರಿ ಅರ್ಧಶತಕ ಸಿಡಿಸಿ ಔಟ್ ಆದರು. ಇತ್ತ ಟೇಲರ್ 42 ರನ್​​ ನಿರ್ಗಮಿಸಿದರು. ಪರಿಣಾಮ ತಂಡದ ಮೊತ್ತ 20 ಓವರ್​ಗೆ 8 ವಿಕಟ್ ನಷ್ಟಕ್ಕೆ 158ಕ್ಕೆ ತಲುಪಿತು. ಭಾರತ ಪರ ಕ್ರುನಾಲ್ ಪಾಂಡ್ಯ 3 ವಿಕೆಟ್ ಕಿತ್ತರೆ, ಖಲೀಲ್ ಅಹ್ಮದ್ 2 ಹಾಗೂ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ತಲಾ 1 ವಿಕೆಟ್ ಪಡೆದರು.

India vs New Zealand 2nd T20I, Live Cricket Score: ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ; ಸರಣಿ ಸಮಬಲ

159 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಭಾರತ ಸ್ಪೋಟಕ ಆರಂಭ ಪಡೆದುಕೊಂಡಿತು. ಕ್ರೀಸ್​​ಗೆ ಇಳಿದಾಗಿನಿಂದಲು ಅಬ್ಬರಿಸಿದ ರೋಹಿತ್​​​ ಆಕರ್ಷಕ ಹೊಡೆತಗಳಿಂದ ಗಮನ ಸೆಳೆದರು. ಕೇವಲ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸ್​​ನೊಂದಿಗೆ 50 ರನ್ ಚಚ್ಚಿದ ರೋಹಿತ್ ನೂತನ ದಾಖಲೆ ಬರೆದು ನಿರ್ಗಮಿಸಿದರು. ರೋಹಿತ್ ಬೆನ್ನಲ್ಲೆ ಧವನ್ ಕೂಡ 30 ರನ್​ಗೆ ಔಟ್ ಆದರು. ಈ ಮೂಲಕ ಓಪನರ್​ಗಳು 79 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವವನ್ನು ಸನಿಹ ಮಾಡಿದರು.

ಬಳಿಕ ರಿಷಭ್ ಪಂತ್ ಹಾಗೂ ವಿಜಯ್ ಶಂಕರ್​​​ ಪಂದ್ಯವನ್ನು ಫಿನಿಶ್ ಮಾಡಲು ಹೊರಟರಾದರು ಶಂಕರ್ 14 ರನ್​ಗೆ ಎಡವಿದರು. ನಂತರದಲ್ಲಿ ಧೋನಿ ಜೊತೆಯಾಗಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಪಂತ್ ವಿನ್ನಿಂಗ್ ಶಾಟ್ ಹೊಡೆದು ಇನ್ನು 7 ಎಸೆತ ಬಾಕಿ ಇರುವಂತೆಯೆ ಗೆಲುವು ತಂದಿಟ್ಟರು. ರಿಷಭ್ ಪಂತ್ 28 ಎಸೆತಗಳಲ್ಲಿ ಅಜೇಯ 40 ಹಾಗೂ ಧೋನಿ ಅಜೇಯ 20 ರನ್ ಗಳಿಸಿದರು. ಕ್ರುನಾಲ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.

ಈ ಮೂಲಕ 18.5 ಓವರ್​ನಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 162 ರನ್ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 1-1ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಗೆದ್ದು ಬೀಗಿದೆ. ಫಲಿತಾಂಶವನ್ನು ಉಭಯ ತಂಡಗಳು ಅಂತಿಮ ಪಂದ್ಯಕ್ಕೆ ಸಾಗಿಸಿದ್ದು, 3ನೇ ಟಿ-20 ಫೆ. 10 ಭಾನುವಾರ ಹ್ಯಾಮಿಲ್ಟನ್​​ನಲ್ಲಿ ನಡೆಯಲಿದೆ.
Loading...

ರೋ'ಹಿಟ್' ದಾಖಲೆ:

ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ 4 ಸಿಕ್ಸ್​ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ. ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​​ನಲ್ಲಿ ರೋಹಿತ್ ಒಟ್ಟು 100 ಸಿಕ್ಸರ್​​ ಸಿಡಿಸಿದ ಮೂಲಕ ಹೊಸ ದಾಖಲೆ ಬರೆದರು. ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಕ್ರಿಸ್ ಗೇಲ್ ಹಾಗೂ ಮಾರ್ಟಿನ್ ಗಪ್ಟಿಲ್ 100 ಸಿಕ್ಸ್​​ ಬಾರಿಸಿದ ಸಾಧನೆ ಮಾಡಿದ್ದರು. ಸದ್ಯ ರೋಹಿತ್ ಕೂಡ ಈ ಸಾಧನೆ ಮಾಡಿದ ವಿಶ್ವದ ಮೂರನೇ ಹಾಗೂ ಭಾರತದ ಮೊತ್ತ ಮೊದಲ ಬ್ಯಾಟ್ಸ್​ಮನ್​​​ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಇದರ ಜೊತೆಗೆ ರೋಹಿತ್ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ 2288 ರನ್ ಕಲೆಹಾಕಿ, ಅತಿ ಹೆಚ್ಚು ರನ್​ ಗಳಿಸಿದ ಬ್ಯಾಟ್ಸ್​ಮನ್​​​ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

First published:February 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...