• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Hardik Pandya: ಹಾರ್ದಿಕ್ ತಲೆನೋವು ಹೆಚ್ಚಿಸಿದ ಇಬ್ಬರು ಆಟಗಾರರು! 2ನೇ ಟಿ-20ಯಿಂದ ಔಟ್ ಆಗ್ತಾರಾ ಸ್ಟಾರ್​ ಪ್ಲೇಯರ್ಸ್​?

Hardik Pandya: ಹಾರ್ದಿಕ್ ತಲೆನೋವು ಹೆಚ್ಚಿಸಿದ ಇಬ್ಬರು ಆಟಗಾರರು! 2ನೇ ಟಿ-20ಯಿಂದ ಔಟ್ ಆಗ್ತಾರಾ ಸ್ಟಾರ್​ ಪ್ಲೇಯರ್ಸ್​?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Hardik Pandya: ಲಕ್ನೋದಲ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡನೇ T20 ಮೊದಲು, ಭಾರತೀಯ ನಾಯಕ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ.

  • Share this:

ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಅನ್ನು ಕ್ಲೀನ್ ಸ್ವೀಪ್ ಮಾಡಿದ ನಂತರ, ಟಿ20 ಸರಣಿಯಲ್ಲೂ ಅದೇ ರೀತಿಯ ಆರಂಭವನ್ನು ಟೀಂ ಇಂಡಿಯಾದಿಂದ (Team India) ನಿರೀಕ್ಷಿಸಲಾಗಿತ್ತು. ಆದರೆ ರಾಂಚಿಯಲ್ಲಿ ನಡೆದ ಮೊದಲ ಟಿ20ಯಲ್ಲಿ ಭಾರತವನ್ನು 21 ರನ್‌ಗಳಿಂದ ಸೋಲಿಸಿತು. ಇದೀಗ ಎರಡನೇ ಪಂದ್ಯ ಲಕ್ನೋದಲ್ಲಿ (Ekana Sports City) ನಡೆಯಲಿದೆ. ಆದರೆ ಒಂದೇ ಒಂದು ತಪ್ಪಾದರೆ ಸರಣಿ ಭಾರತದ ಕೈ ತಪ್ಪುತ್ತದೆ. ಇದರ ನಡುವೆ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರ ತಲೆನೋವನ್ನು 2 ಆಟಗಾರರು ಹೆಚ್ಚಿಸಿದ್ದಾರೆ ಎನ್ನಬಹುದು. ಮೊದಲ ಟಿ20ಯಲ್ಲಿ ಇಬ್ಬರ ಪ್ರದರ್ಶನ ಕಳಪೆಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಲಕ್ನೋದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಪಾಂಡ್ಯ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಈ ಇಬ್ಬರನ್ನೂ ತಂಡದಿಂದ ಹೊರಗಿಡಬಹುದಾಗಿದೆ.


ಗಿಲ್​-ಅರ್ಷದೀಪ್​ ಕಳಪೆ ಫಾರ್ಮ್​:


ಶುಬ್ಮನ್ ಗಿಲ್ ಮತ್ತು ಅರ್ಷದೀಪ್ ಸಿಂಗ್ ಪಾಂಡ್ಯರ ಸಂಕಷ್ಟವನ್ನು ಹೆಚ್ಚಿಸುತ್ತಿರುವ ಇಬ್ಬರು ಆಟಗಾರರು ಎಂಬ ಮಾತುಗಳು ಕೇಳಿಬರುತ್ತಿವೆ. ಶುಭ್‌ಮನ್ ಏಕದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ, ಇದುವರೆಗೆ ಟಿ20ಯಲ್ಲಿ ಆರಂಭಿಕರಾಗಿ ತಮ್ಮ ಛಾಪು ಮೂಡಿಸಲು ವಿಫಲರಾಗಿದ್ದಾರೆ. ರಾಂಚಿ ಟಿ20ಯಲ್ಲೂ 6 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು.


ಟಿ20 ವಿಶ್ವಕಪ್‌ನಲ್ಲಿ ಅರ್ಷದೀಪ್​ ಸಿಂಗ್​ ಅದ್ಭುತ ಬೌಲಿಂಗ್ ಮಾಡಿದ್ದರು. ಆದರೆ ಇದೀಗ ಸರಣಿಗಳಲ್ಲಿ ಅವರ ಬೌಲಿಂಗ್​ ಅಷ್ಟಾಗಿ ಮಿಂಚುತ್ತಿಲ್ಲ. ರಾಂಚಿಯಲ್ಲಿ ನಡೆದ ನ್ಯೂಜಿಲ್ಯಾಂಡ್​ ವಿರುದ್ಧದ 1ನೇ ಟಿ20 ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಅರ್ಷದೀಪ್ 27 ರನ್ ನೀಡಿದ್ದರು. ಇದು ಭಾರತದ ಮೇಲೆ ಹೆಚ್ಚು ಪರಿಣಾಮ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಇವರಿಬ್ಬರು ಲಕ್ನೋ ಟಿ20ಯಲ್ಲಿ ಆಡುವ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದೆ.


ಇದನ್ನೂ ಓದಿ: IND vs NZ T20: ಈ 5 ಕಾರಣಗಳಿಂದ ಸೋತ ಟೀ ಇಂಡಿಯಾ, ಆ ಬೌಲರ್​ ಲಾಸ್ಟ್​ ಓವರ್​ ಮಾಡದಿದ್ರೆ ಭಾರತ ಗೆಲ್ತಿತ್ತಂತೆ!


ಟಿ20 ಮಾದರಿಯಲ್ಲಿ ಶುಭ್​ಮನ್ ಗಿಲ್​ ಬ್ಯಾಟಿಂಗ್​:


ಅಂದಹಾಗೆ, ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಅವರಂತೆ ಟಿ20ಯಲ್ಲಿ ಶುಭಮನ್ ಗಿಲ್‌ಗೆ ಆಗಾಗ್ಗೆ ಅವಕಾಶಗಳನ್ನು ನೀಡುವ ಬಗ್ಗೆ ಮಾತನಾಡಿದ್ದಾರೆ. ಆದರೆ ಎಲ್ಲಿಯವರೆಗೆ ಎಂಬುದು ಪ್ರಶ್ನೆ ಮೂಡಿದೆ. ಏಕೆಂದರೆ ಪೃಥ್ವಿ ಶಾ ರೂಪದಲ್ಲಿ ಇನಿಂಗ್ಸ್ ಆರಂಭಿಸಲು ಭಾರತ ಬಲಿಷ್ಠ ಬ್ಯಾಟ್ಸ್​ಮನ್ ಹೊಂದಿದೆ. ಗಿಲ್ ಸ್ಥಿತಿಯೂ ಕೆಎಲ್ ರಾಹುಲ್ ಅವರಂತೆಯೇ ಇದೆ. ಅವರು ಇದುವರೆಗೆ ಟಿ20ಯಲ್ಲಿ ಕೇವಲ 4 ಇನ್ನಿಂಗ್ಸ್ ಆಡಿದ್ದಾರೆ. ಆದರೆ, ಅದರಲ್ಲಿ ಅವರು 130 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಮೂರು ಇನ್ನಿಂಗ್ಸ್‌ಗಳಲ್ಲಿ ಎರಡಂಕಿ ದಾಟಲು ಅವರಿಗೆ ಸಾಧ್ಯವಾಗಿಲ್ಲ.


ಅರ್ಷದೀಪ್ ಬದಲಿಗೆ ಯಾರು?:


ಟಿ20 ವಿಶ್ವಕಪ್‌ನಿಂದ ಅರ್ಷದೀಪ್ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ವಿಫಲರಾಗಿದ್ದಾರೆ. ಪಂದ್ಯಾವಳಿಯ ನಂತರ, ಅವರು 11ರ ಎಕಾನಮಿಯಲ್ಲಿ ರನ್ ನೀಡುತ್ತಿದ್ದಾರೆ. ಅಲ್ಲದೇ ಅವರು ಹೆಚ್ಚಾಗಿ ನೋ-ಬಾಲ್‌ಗಳನ್ನು ಎಸೆಯುತ್ತಿದ್ದಾರೆ. ಇದು ಭಾರತಕ್ಕೆ ಭಾರಿ ನಷ್ಟವನ್ನುಂಟು ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದ್ರಾವಿಡ್ ಮತ್ತು ಪಾಂಡ್ಯ ಎರಡನೇ ಟಿ20ಯಲ್ಲಿ ಮುಖೇಶ್ ಕುಮಾರ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.




ಹೀಗಾದರೆ ಎರಡನೇ ಟಿ20ಯಲ್ಲೂ ಭಾರತ 3 ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಲಿದೆ. ಆದರೆ ಉಮ್ರಾನ್ ಮಲಿಕ್ ಮತ್ತು ಶಿವಂ ಮಾವಿ ಸ್ಥಾನಗಳನ್ನು ಖಚಿತವಾಗಿದೆ. ಎರಡನೇಯ ಆಯ್ಕೆಯೆಂದರೆ ಭಾರತವು ಲಕ್ನೋ T20ನಲ್ಲಿ ಒಬ್ಬರ ಬದಲಿಗೆ ಇಬ್ಬರು ಪ್ರಮುಖ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಬಹುದು. ಹೀಗಾಗಿ ಯುಜುವೇಂದ್ರ ಚಹಾಲ್‌ಗೆ ಅವಕಾಶ ನೀಡಬಹುದು. ಏಕೆಂದರೆ ಲಕ್ನೋದ ವಿಕೆಟ್ ಕೂಡ ಸ್ಪಿನ್ ಬೌಲರ್‌ಗಳಿಗೆ ನೆರವಾಗಬಲ್ಲದು.


2ನೇ ಟಿ20ಯಲ್ಲಿ ಭಾರತ ಸಂಭಾವ್ಯ ಪ್ಲೇಯಿಂಗ್​ 11:


ಇಶಾನ್ ಕಿಶನ್, ಶುಭಮನ್ ಗಿಲ್/ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್ (ಉಪನಾಯಕ), ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಕುಲದೀಪ್ ಯಾದವ್, ಉಮ್ರಾನ್ ಮಲಿಕ್ ಕುಮಾರ್ / ಅರ್ಷದೀಪ್ ಸಿಂಗ್.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು